ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಗಡಿಯಲ್ಲಿ ಅಕ್ರಮ ನಾಡ ಬಂದೂಕು ತಯಾರಿಸುತ್ತಿದ್ದ ಕಾರ್ಪೆಂಟರ್ ಬಂಧನ

By ರಾಮನಗರ ಪ್ರತಿನಿಧಿ
|
Google Oneindia Kannada News

ಮಾಗಡಿ, ಜನವರಿ 28: ಮಾಗಡಿಯ ಗವಿನಾಗಮಂಗಲ ಗ್ರಾಮದಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ವ್ಯಕಿಯೊಬ್ಬನನ್ನು ಬಂಧಿಸಿ ಆತನಿಂದ ಬಂದೂಕು ಖರೀದಿ ಮಾಡಿದ್ದ ಐದು ಜನರು ಮತ್ತು 6 ಎಸ್ಬಿಎಂಎಲ್ (SBML) ನಾಡ ಬಂದೂಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಮನಗರದಲ್ಲಿ ಗಾಂಜಾ ಮಾರುತ್ತಿದ್ದ ಮಹಿಳೆಯ ಬಂಧನರಾಮನಗರದಲ್ಲಿ ಗಾಂಜಾ ಮಾರುತ್ತಿದ್ದ ಮಹಿಳೆಯ ಬಂಧನ

ತಾಲ್ಲೂಕಿನ ಗವಿನಾಗಮಂಗಲ ನಿವಾಸಿ ಧ್ರುವಾಚಾರ್ (52) ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, ಆತ ಮನೆಯಲ್ಲೇ ಕಾನೂನು ಬಾಹಿರವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ. ಈತನಿಂದ ಬಂದೂಕು ಖರೀದಿ ಮಾಡಿದ್ದ ಅದೇ ಗ್ರಾಮದ ಪುಟ್ಟರಾಜು ಎಂಬುವರ ಮನೆ ಮೇಲೆ ಪೊಲೀಸರು ದಾಳಿ ಮಾಡಿದ ಸಂದರ್ಭ ಪ್ರಕರಣ ಬೆಳಕಿಗೆ ಬಂತು.

 Police Arrested Carpenter Who Manufactured Illegal Gun In Magadi

ಕಾಫಿ ತೋಟದ ನಡುವೆ ಗಾಂಜಾ ಬೆಳೆದಿದ್ದ ವ್ಯಕ್ತಿ ಪೊಲೀಸರ ಅತಿಥಿ ಕಾಫಿ ತೋಟದ ನಡುವೆ ಗಾಂಜಾ ಬೆಳೆದಿದ್ದ ವ್ಯಕ್ತಿ ಪೊಲೀಸರ ಅತಿಥಿ

ಆರೋಪಿ ಧ್ರುವಾಚಾರ್ ನೀಡಿದ ಸುಳಿವು ಆಧರಿಸಿ ದಬ್ಬಗುಳಿ ನಿವಾಸಿ ಮಾರೇಗೌಡ, ಸೊನ್ನೇನಹಳ್ಳಿ ನಿವಾಸಿ ಮುನಿಯಾ, ತಾವರೆಕೆರೆ ಹೋಬಳಿಯ ಕೆಂಪಗೊಂಡನಹಳ್ಳಿ ನಿವಾಸಿ ಪುಟ್ಟಯ್ಯ, ಬೆಂಗಳೂರು ಉತ್ತರ ತಾಲ್ಲೂಕಿನ ಅರ್ಕಾವತಿ ನಗರ ನಿವಾಸಿ ಮುನಿರಾಜು ಎಂಬುವರನ್ನು ಪೊಲೀಸರು ಬಂಧಿಸಿ, ಅವರಿಂದ ಬಂದೂಕು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.

English summary
Police have arrested a man who illegally manufactured and sold a gun at Gavinagamangala village in Magadi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X