ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಚ್ಚು ಹಣ ಮಾಡಲು ಗೋಡೋನ್ ನಲ್ಲಿ ನಡೆಸುತ್ತಿದ್ದರು ಗ್ಯಾಸ್ ದಂಧೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 10: ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಂದ ಸಣ್ಣ ಸಣ್ಣ ವಾಣಿಜ್ಯ ಹಾಗೂ ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಅನಿಲ ತುಂಬಿಸಿ ಚಿಕ್ಕ ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಿದ್ದ ಗೋಡೋನ್ ಮೇಲೆ ಬ್ಯಾಡರಹಳ್ಳಿ ಪೊಲೀಸರು ದಾಳಿ ನಡೆಸಿ 84 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರು ಹೊರವಲಯದ ಉಲ್ಲಾಳ ಉಪನಗರದ ಬಳಿಯ ಪಾಳು ಮನೆಯೊಂದರಲ್ಲಿ ವೆಂಕಟರಮಣಪ್ಪ ಎಂಬುವವರು ವಿವಿಧ ಕಂಪನಿಯ ದೊಡ್ಡ ದೊಡ್ಡ ಸಿಲಿಂಡರ್‌ಗಳಿಂದ ಚಿಕ್ಕ ಚಿಕ್ಕ ಸಿಲಿಂಡರ್‌ಗಳಿಗೆ ಗ್ಯಾಸ್ ತುಂಬಿಸುವುದರ ಜೊತೆಗೆ ದಾಸ್ತಾನು ಮಾಡಿದ್ದರು. ಹೆಚ್ಚಿನ ಬೆಲೆಗೆ ಅವುಗಳನ್ನು ಮಾರುವ ಉದ್ದೇಶದಿಂದ ಸಿಲಿಂಡರ್‌ಗಳ ದಾಸ್ತಾನು ಮಾಡಿರುವ ಮಾಹಿತಿ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ.

ದಾರಿ ಮಧ್ಯೆ ಗಾಡಿ ನಿಲ್ಲಿಸಿ ಸಿಲಿಂಡರ್ ನಿಂದ ಗ್ಯಾಸ್ ಕದಿಯುತ್ತಿದ್ದ ಸಿಬ್ಬಂದಿದಾರಿ ಮಧ್ಯೆ ಗಾಡಿ ನಿಲ್ಲಿಸಿ ಸಿಲಿಂಡರ್ ನಿಂದ ಗ್ಯಾಸ್ ಕದಿಯುತ್ತಿದ್ದ ಸಿಬ್ಬಂದಿ

Police Arrested A Man Who Involved In Illegal Gas Refilling In Ramanagar

ಘಟನೆಯಲ್ಲಿ 84 ಸಿಲಿಂಡರ್‌ಗಳನ್ನು ಹಾಗೂ ಗ್ಯಾಸ್ ರೀಫಿಲ್ಲಿಂಗ್ ‌ಗೆ ಬಳಸುತ್ತಿದ್ದ ವೇಯಿಂಗ್ ಮಿಷಿನ್ ಅ‌ನ್ನು ವಶಕ್ಕೆ ಪಡೆದಿದ್ದಾರೆ.

English summary
Byadarahalli police raided the godown and arrested a person who involved in illegal refilling of gas cylinders,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X