ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮನ್ ಕೀ ಬಾತ್' ನಲ್ಲಿ ಚನ್ನಪಟ್ಟಣ ಗೊಂಬೆಗಳ ಬಗ್ಗೆ ಪ್ರಧಾನಿ ಮೋದಿ ಮಾತು

|
Google Oneindia Kannada News

ರಾಮನಗರ, ಆಗಸ್ಟ್ 30: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನ 'ಮನ್ ಕೀ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಕರ್ನಾಟಕದ ಚನ್ನಪಟ್ಟಣ ಗೊಂಬೆಗಳ ಬಗ್ಗೆ ಮಾತನಾಡಿದರು.

Recommended Video

ಇಡೀ ಪ್ರಪಂಚದಲ್ಲೇ ಇಷ್ಟು ಪ್ರಕರಣಗಳು ಯಾವ ದೇಶದಲ್ಲೂ ಪತ್ತೆಯಾಗಿಲ್ಲ | Oneindia Kannada

ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 68ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು. ಮೊದಲಿಗೆ ಪ್ರಧಾನಿ ಮೋದಿ ಅವರು ಕೊರೊನಾ ವೈರಸ್ ಮಧ್ಯೆ ತಂತ್ರಜ್ಞಾನಕ್ಕೆ ಹೊಂದಿಕೊಂಡು ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರನ್ನು ಶ್ಲಾಘಿಸಿದರು. ಈ ವೇಳೆ ಚೀನಾದಿಂದ ಆಮದಾಗುತ್ತಿರುವ ಆಟಿಕೆಗಳನ್ನು ಕಡಿಮೆ ಮಾಡಿ ಭಾರತದ ಆಟಿಕೆಗಳನ್ನು ಖರೀದಿಸಬೇಕೆಂದು ಪರೋಕ್ಷವಾಗಿ ಕರೆ ನೀಡಿದರು.

ಕೊಪ್ಪಳದಲ್ಲಿ ಸ್ಥಾಪನೆಯಾಗಲಿದೆ ಬೃಹತ್ ಗೊಂಬೆ ತಯಾರಿಕಾ ಕ್ಲಸ್ಟರ್ಕೊಪ್ಪಳದಲ್ಲಿ ಸ್ಥಾಪನೆಯಾಗಲಿದೆ ಬೃಹತ್ ಗೊಂಬೆ ತಯಾರಿಕಾ ಕ್ಲಸ್ಟರ್

ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ನಮ್ಮ ದೇಶದಲ್ಲಿ ಸ್ಥಳೀಯ ಆಟಿಕೆಗಳ ಶ್ರೀಮಂತ ಸಂಪ್ರದಾಯವಿದೆ. ಉತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿರುವ ಅನೇಕ ಪ್ರತಿಭಾವಂತ ಮತ್ತು ನುರಿತ ಕುಶಲಕರ್ಮಿಗಳು ಇದ್ದಾರೆ. ಭಾರತದ ಕೆಲವು ಭಾಗಗಳಿಂದು ಆಟಿಕೆ ತಯಾರಿಕಾ ಕೇಂದ್ರಗಳಾಗಿ ಬೆಳೆಯುತ್ತಿವೆ ಎಂದರು.

PM Narendra Modi Talked About Channapattana Toys In Mann Ki Baat Programme

ಇದೇ ಸಂದರ್ಭದಲ್ಲಿ ರಾಮನಗರದ ಚನ್ನಪಟ್ಟಣ (ಕರ್ನಾಟಕ), ಕೃಷ್ಣದಲ್ಲಿ ಕೊಂಡಪಲ್ಲಿ (ಆಂಧ್ರಪ್ರದೇಶ), ತಮಿಳುನಾಡಿನ ತಂಜಾವೂರು, ಅಸ್ಸಾಂನ ಧುಬ್ರಿ, ಉತ್ತರಪ್ರದೇಶದ ವಾರಣಾಸಿಯು ಆಟಿಕೆಗಳ ಕೇಂದ್ರಗಳಾಗಿವೆ. ಇಷ್ಟೇ ಅಲ್ಲ ಇನ್ನೂ ಅನೇಕ ಹೆಸರುಗಳನ್ನು ಭಾರತದಲ್ಲಿ ಎಣಿಸಬಹುದು ಹೇಳಿದರು.

ನಾವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಆಟಿಕೆಗಳತ್ತ ಗಮನ ಹರಿಸಿದ್ದೇವೆ. ಆಡುವಾಗ ಕಲಿಯುವುದು, ಆಟಿಕೆಗಳು ತಯಾರಿಸುವುದು ಇತ್ಯಾದಿಗಳನ್ನು ಪಠ್ಯಕ್ರಮದ ಒಂದು ಭಾಗವನ್ನಾಗಿ ಮಾಡಲಾಗಿದೆ. ಜಾಗತಿಕ ಆಟಿಕೆ ವ್ಯವಹಾರ ಸುಮಾರು 7 ಲಕ್ಷ ಕೋಟಿ ರೂ. ಆಗಿದ್ದು, ಇದರಲ್ಲಿ ಭಾರತದ ಪಾಲು ತುಂಬಾ ಕಡಿಮೆ ಇದೆ. ಹೀಗಾಗಿ ಆಟಿಕೆ ಉದ್ಯಮಕ್ಕೆ ಹೊಸ ರೂಪ ನೀಡಲು ನಮ್ಮ ಸರ್ಕಾರ ಯೋಜನೆ ರೂಪಿಸಲಿದೆ ಎಂದು ತಿಳಿಸಿದರು.

English summary
Prime Minister Narendra Modi Has spoke about Karnataka's Channapatna dolls on today's Mann Ki Baat radio programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X