ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ ಕುದೂರು ಯುವತಿಯ ಕೊಲೆ ಪ್ರಕರಣ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 12: ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಬೆಟ್ಟಹಳ್ಳಿ ಗ್ರಾಮದ ಹೇಮಲತಾ (18) ಎಂಬ ಯುವತಿಯ ಕೊಲೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ, ಮರ್ಯಾದಾ ಹತ್ಯೆಯಾಗಿದೆ ಹಾಗೂ ಪ್ರಿಯಕರನಿಂದಲೇ ಕೊಲೆ ನಡೆದಿದೆ ಎಂಬ ವದಂತಿಗಳ ಪೋಸ್ಟ್ ಗಳು ಹರಿದಾಡುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲೂ ಹೇಮಲತಾಳ ಮೇಲೆ ಅತ್ಯಾಚಾರವೆಸೆಗಿ ಕೊಲೆ ಮಾಡಿದ್ದಾರೆ. ದೂರದ ಉತ್ತರ ಪ್ರದೇಶದ ಮನೀಶಾ ವಾಲ್ಮೀಕಿ ಹತ್ಯೆ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಇದೀಗ ನಮ್ಮ ರಾಜ್ಯದ ಯುವತಿಗೆ ನ್ಯಾಯ ಕೊಡಿಸಬೇಕು ಎಂದು ಸಾಕಷ್ಟು ಪೋಸ್ಟ್ ಗಳು ಹರಿದಾಡುತ್ತಿವೆ. ಇನ್ನೂ ಪೋಲೀಸರು ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ರಾಮನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಿದ್ದಾರೆ.

ಪ್ರಿಯಕರನೇ ಕೊಲೆಗಾರ

ಪ್ರಿಯಕರನೇ ಕೊಲೆಗಾರ

ಮೃತ ಯುವತಿ ಹೇಮಲತಾ ಕುದೂರು ತರಕಾರಿ ವ್ಯಾಪಾರಿ ಪುನೀತ್ ಎಂಬ ಅನ್ಯ ಜಾತಿಯ ಯುವಕನೊಬ್ಬನನ್ನು ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಳು ಎನ್ನಲಾಗಿದೆ. ಪ್ರೇಮಿ ಪುನೀತ್ ಎಂಬುವವನೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ಮೃತಳ ಪೋಷಕರು ಆರೋಪಿಸಿ, ಕುದೂರು ಪೊಲೀಸ್ ಠಾಣೆಯಲ್ಲಿ ಪುನೀತ್ ವಿರುದ್ಧ ದೂರು ದಾಖಲಿಸಿದ್ದಾರೆ.

ರಾಮನಗರದಲ್ಲಿ ನಾಪತ್ತೆಯಾಗಿದ್ದ 18ರ ಯುವತಿ ಶವವಾಗಿ ಪತ್ತೆರಾಮನಗರದಲ್ಲಿ ನಾಪತ್ತೆಯಾಗಿದ್ದ 18ರ ಯುವತಿ ಶವವಾಗಿ ಪತ್ತೆ

ಮರ್ಯಾದೆ ಹತ್ಯೆ

ಮರ್ಯಾದೆ ಹತ್ಯೆ

ಅನ್ಯಜಾತಿಯ ಯುವಕನ ಪ್ರೇಮ ಪಾಶದಲ್ಲಿ ಸಿಲುಕಿದ್ದ ಮೃತ ಹೇಮಲತಾಳನ್ನು ಮರ್ಯದೆಗೆ ಅಂಜಿ, ಮೃತಳ ಪೋಷಕರೇ ಹತ್ಯೆ ಮಾಡಿದ್ದಾರೆ ಎಂದು ಹೇಮಲತಾಳ ಪ್ರೇಮಿಯ ತಾಯಿ ಆರೋಪಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿದ್ದಾರೆ. ಮೃತ ಹೇಮಲತಾ ಪ್ರೇಮಿಯ ತಾಯಿ ರತ್ನಮ್ಮ ಮಾತನಾಡಿ, ನನ್ನ ಮಗ ತಪ್ಪು ಮಾಡಿದರೆ ನಾನೇ ಮುಂದೆ ನಿಂತು ಶಿಕ್ಷೆ ಕೊಡಿಸುತ್ತೇನೆ. ಇಲ್ಲ ಸಲ್ಲದ ಆರೋಪಗಳನ್ನು ನನ್ನ ಮಗನ ಮೇಲೆ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಮಗನಿಗೆ ತೊಂದರೆ ಕೊಟ್ಟಿದ್ದಾರೆ

ನನ್ನ ಮಗನಿಗೆ ತೊಂದರೆ ಕೊಟ್ಟಿದ್ದಾರೆ

ಅವರಿಬ್ಬರ ಪ್ರೀತಿಗೆ ನಾನೇ ಪ್ರೇರಣೆ ಕೊಡುತ್ತಿದ್ದೆ. ಯುವತಿಯ ಕುಟುಂಬದವರು ಎರಡು ಮೂರು ಬಾರಿ ನನ್ನ ಮಗನಿಗೆ ತೊಂದರೆ ಕೊಟ್ಟಿದ್ದಾರೆ. ಯುವತಿ ಹೇಮಲತಾ ಕಾಣೆಯಾದ ದಿನವೂ ನನ್ನ ಮಗ ಮನೆಯಲ್ಲೇ ಇದ್ದ. ಕಾನೂನು ಎಲ್ಲರಿಗೂ ಒಂದೇ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಲಿ ಎಂದು ಹೇಮಲತಾ ಕುಟುಂಬಸ್ಥರ ಮೇಲೆ ಯುವಕನ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೊಡ್ಡಪ್ಪನ ಜಮೀನಿನ ಗುಂಡಿಯಲ್ಲಿ ಶವವಾಗಿ ಪತ್ತೆ

ದೊಡ್ಡಪ್ಪನ ಜಮೀನಿನ ಗುಂಡಿಯಲ್ಲಿ ಶವವಾಗಿ ಪತ್ತೆ

ಅ.8 ರಂದು ಮನೆಯಿಂದ ಕಾಣೆಯಾಗಿದ್ದ ಹೇಮಲತಾ, ಅ.10 ರಂದು ತನ್ನ ದೊಡ್ಡಪ್ಪನ ಜಮೀನಿನ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇನ್ನು ಕೊಲೆಯ ರಹಸ್ಯ ಪೊಲೀಸರ ತನಿಖೆಯಿಂದ ಮಾತ್ರ ಸತ್ಯ ಬಯಲಾಗಬೇಕಿದೆ. ಸಾಮಾಜಿಕ ಜಾಲತಾಣದಲ್ಲಿನ ಅಧಾರ ರಹಿತ ಪೋಸ್ಟ್ ಗಳನ್ನು ನಂಬಬೇಡಿ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಪೇಸ್ ಬುಕ್ ಮೂಲಕ ಮನವಿ ಮಾಡಿದ್ದಾರೆ.

English summary
Rumors have been circulating on the social network regarding the murder of a young woman named Hemalatha (18) from Bettahalli village of Kuduru Hobali in Ramanagara district Magadi Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X