ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ಎದುರಾಳಿಗಳು ಹೊರಗಿನವರು: ಸಿ.ಪಿ ಯೋಗೇಶ್ವರ್

By ರಾಮನಗರ ಪ್ರತಿನಿಧಿ
|
Google Oneindia Kannada News

Recommended Video

Karnataka Elections 2018 : ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸಿದ ಸಿ ಪಿ ಯೋಗೇಶ್ವರ್ | Oneindia Kananda

ರಾಮನಗರ, ಏಪ್ರಿಲ್ 24 : ಕೆಲವು ಕ್ಷೇತ್ರಗಳಲ್ಲಿ, ಕೆಲವು ಅಭ್ಯರ್ಥಿಗಳ ಪರ ಅಧಿಕೃತವಾಗಿ ಬಿ ಫಾರಂ ನಿರೀಕ್ಷೆ ಮಾಡಿದ್ದೆ. ಆದರೆ ಬೇರೆ ಬೇರೆ ಕಾರಣಗಳಿಂದ ಬಿ ಫಾರಂ ಸಿಗದ ಕಾರಣ ಮನಸ್ಸಿಗೆ ನೋವಾಗಿತ್ತು ಎಂದು ಚನ್ನಪಟ್ಟಣ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಹೇಳಿದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು ತಮ್ಮನ್ನು ನೆಚ್ಚಿ ಬಂದು ಪಕ್ಷ ಸಂಘಟನೆಯಲ್ಲಿ ತೊಡಗಿರುವವರಿಗೆ ಸ್ಥಾನಮಾನ ನೀಡುವ ಭರವಸೆಯನ್ನು ಪಕ್ಷದ ನಾಯಕರು ತಿಳಿಸಿದ್ದಾರೆ. ನನಗೂ ಕೂಡ ಸಾಕಷ್ಟು ಬಾರಿ ಬಿ ಫಾರಂ ತಪ್ಪಿಹೋಗಿದ್ದು ನಡೆದಿದೆ. ಅವರನ್ನು ಮನವೊಲಿಸಿ ಪಕ್ಷ ಸಂಘಟನೆ ಮಾಡಲಾಗುವುದು ಎಂದು ತಿಳಿಸಿದರು.

ಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಚನ್ನಪಟ್ಟಣದಲ್ಲಿ ಎಚ್ಡಿಕೆ ಜಯಭೇರಿಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಚನ್ನಪಟ್ಟಣದಲ್ಲಿ ಎಚ್ಡಿಕೆ ಜಯಭೇರಿ

ಕ್ಷೇತ್ರದಲ್ಲಿ ನನ್ನ ಎದುರಾಳಿಗಳು ಇಬ್ಬರೂ ಕೂಡ ಹೊರಗಿನವರು. ಅವರು ಕೇವಲ ರಾಜಕೀಯ ಉದ್ದೇಶಕ್ಕಾಗಿ ಸ್ಪರ್ಧೆ ಮಾಡಿದ್ದಾರೆ. ನಾನು ಸ್ಥಳೀಯ, ಹಾಗಾಗಿ ಜನರು ನನ್ನ ಪರವಿದ್ದಾರೆ ಈಗಾಲೇ ನಾಲ್ಕು ಬಾರಿ ನನ್ನ ಕೈಹಿಡಿದಿದ್ದಾರೆ. ಈ ಬಾರಿಯ ಚುನಾವಣೆಯಲ್ಲೂ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

opponents are outsiders in the field: Yogeshwar

ಸಿಪಿವೈ ಆಸ್ತಿ ವಿವರ ಹೀಗಿದೆ....
ಚನ್ನಪಟ್ಟಣದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ತಮ್ಮ ಕುಟುಂಬದ ಬಳಿ 43.82 ಕೋಟಿ ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.
2013ರ ಚುನಾವಣೆಯಲ್ಲಿ 12.26 ಕೋಟಿ ರೂ.ಗಳಿಸಿದ್ದ ಕುಟುಂಬದ ಆಸ್ತಿ ಮೌಲ್ಯ ಐದು ವರ್ಷಗಳಲ್ಲಿ 31.55 ಕೋಟಿ ರೂ.ಗಳಷ್ಟು ವೃದ್ಧಿಯಾಗಿದೆ.

ಸಿಪಿವೈ ಬೇನಾಮಿ ಆಸ್ತಿ ಆರೋಪಕ್ಕೆ ಎಚ್ಡಿಕೆ ತಿರುಗೇಟುಸಿಪಿವೈ ಬೇನಾಮಿ ಆಸ್ತಿ ಆರೋಪಕ್ಕೆ ಎಚ್ಡಿಕೆ ತಿರುಗೇಟು

ಈ ಬಾರಿ ಯೋಗೇಶ್ವರ್ ಬಳಿ ಚರಾಸ್ತಿ ಮತ್ತು ಸ್ಥಿರಾಸ್ತಿ ಒಟ್ಟು 26 ಕೋಟಿ 28 ಲಕ್ಷ 91 ಸಾವಿರ 267 ರೂ. ಹಾಗೂ ಪತ್ನಿ ಶೀಲಾ ಬಳಿ ಒಟ್ಟು ಚರಾಸ್ತಿ ಮತ್ತು ಸ್ಥಿರಾಸ್ತಿ ಒಟ್ಟು 17 ಕೋಟಿ 53 ಲಕ್ಷ 62 ಸಾವಿರ 660 ರೂ. ಇದೆ. ಕಳೆದ ಚುನಾವಣೆಗೆ ಹೋಲಿಸಿದರೆ ಯೋಗೇಶ್ವರ್ ಆಸ್ತಿ ಮೌಲ್ಯ19.21 ಕೋಟಿ ಹಾಗೂ ಪತ್ನಿ ಅಸ್ತಿ ಮೌಲ್ಯ 12.34 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.

ಸಿ.ಪಿ.ಯೋಗೇಶ್ವರ ಅವರ ಬಳಿ ಸದ್ಯ 9 ಲಕ್ಷ ನಗದು , ಇವರ ಪತ್ನಿಯ ಬಳಿ 1.50 ಲಕ್ಷ ರೂ. ನಗದು ಹಣವಿದೆ. 2017-18 ನೇ ಸಾಲಿನಲ್ಲಿ ಸಿ.ಪಿ.ಯೋಗೇಶ್ವರ ಅವರು 39 ಲಕ್ಷ 13 ಸಾವಿರ 889 ರೂ. ವಾರ್ಷಿಕ ಆದಾಯ ಇರುವುದಾಗಿ ಹಾಗೂ ತಮ್ಮ ಪತ್ನಿಗೆ 12 ಲಕ್ಷ 8 ಸಾವಿರ 834 ರೂ. ವಾರ್ಷಿಕ ಆದಾಯ ಇರುವುದಾಗಿ ತಿಳಿಸಿದ್ದಾರೆ.

ಯೋಗೇಶ್ವರ್ ತಮ್ಮ ಬಳಿ 250 ಗ್ರಾಂ ಚಿನ್ನ, ಸಾರ್ವಜನಿಕರಿಂದ ಬಂದ ಉಡುಗೊರೆ 31 ಕೆ.ಜಿ ಬೆಳ್ಳಿ , ಪತ್ನಿ ಬಳಿ 1500 ಗ್ರಾಂ ಚಿನ್ನ, ಬೆಳ್ಳಿ 20 ಕೆ.ಜಿ ಇದೆ ಎಂದು ಉಲ್ಲೇಖಿಸಿದ್ದಾರೆ.
ಶೇಷಗಿರಿ ಹಳ್ಳಿ, ಕೊತ್ತನಹಳ್ಳಿ, ಹೊನ್ನಿಗಹಳ್ಳಿ, ಕೆಂಜಿಗರ ಹಳ್ಳಿ, ಹಂಪಾಪುರ, ಸುಣ್ಣಘಟ್ಟ ಮುಂತಾದ ಕಡೆ ಸುಮಾರು 30 ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿ, ಚನ್ನಪಟ್ಟಣದ ಸಾತನೂರು ರಸ್ತೆ, ಬಿಡದಿಯ ಕೆಂಚನಗುಪ್ಪೆಯಲ್ಲಿ ಕೃಷಿಯೇತರ ಭೂಮಿ ಇದೆ. ಅಲ್ಲದೆ ಚನ್ನಪಟ್ಟಣದ ಹನುಮಂತನಗರದಲ್ಲಿ ವಾಣಿಜ್ಯ ಕಟ್ಟಡ, ಬೆಂಗಳೂರು ಬನಶಂಕರಿ, ಚನ್ನಪಟ್ಟಣದ ಕುವೆಂಪು ನಗರಗಳಲ್ಲಿ ವಸತಿ ಕಟ್ಟಡಗಳಿವೆ. ಇವರ ಪತ್ನಿಯವರ ಹೆಸರಿನಲ್ಲೂ ಕೃಷಿ ಭೂಮಿ, ವಾಣಿಜ್ಯ ಮತ್ತು ವಸತಿ ಕಟ್ಟಡಗಳಿವೆ.

ಬಿ.ಎಸ್ಸಿ ಪದವೀಧರ ಸಿಪಿವೈ ಅವರಿಗೆ ಮೆಗಾಸಿಟಿ ಹಗರಣದ ಕಳಂಕ ಇನ್ನು ಕಾಡುತ್ತಿದೆ. ಮೆಗಾಸಿಟಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ ನಲ್ಲಿ ರುವ ಇವರ ಷೇರು ಮೊತ್ತ ಕೇವಲ 3.50 ಲಕ್ಷ ರು., ಮೆಗಾಸಿಟಿ ಇನ್‌ವೆಸ್ಟ್‌ಮೆಂಟ್ ಅಂಡ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ಇವರು 1.67 ಲಕ್ಷ ರು. ಹೂಡಿದ್ದಾರೆ.

ಸಿ.ಪಿ.ಯೋಗೇಶ್ವರ ಅವರು ಸರ್ಕಾರಕ್ಕೆ ಯಾವ ಬಾಕಿಯನ್ನು ಕೊಡಬೇಕಾಗಿಲ್ಲ. ಆದರೆ ಖಾಯಲ್ ತೀರಾಮ್ ಎಂಬ ರಿಲೇಟರ್ ಕಂಪನಿಗೆ 4 ಕೋಟಿ ಸಾಲ ಬಾಕಿ ಕೊಡಬೇಕಾಗಿದೆ, ಇವರ ಪತ್ನಿಯವರು ಸಹ ಇದೇ ಕಂಪನಿಗೆ 2 ಕೋಟಿ ಸಾಲ ಬಾಕಿ ಇರಿಸಿಕೊಂಡಿದ್ದಾರೆ. ಸಿ.ಪಿ.ಯೋಗೇಶ್ವರ ಅವರಿಗೆ ತಮ್ಮ ಪತ್ನಿಯವರಿಂದಲೇ 1 ಕೋಟಿ 8 ಲಕ್ಷ 7 ಸಾವಿರ 109 ರೂ. ಬಾಕಿ ಬರಬೇಕಾಗಿದೆ.

ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಕಾರಾಗೃಹ ಶಿಕ್ಷೆಯೊಂದಿಗೆ ದಂಡನೀಯವಾಗಬಹುದಾದ ನ್ಯಾಯಾಲಯ ಅರೋಪ ಹೊರೆಸಿರುವ 7 ಪಕ್ರರಣಗಳು ತಮ್ಮ ಮೇಲಿದ್ದು ಇತ್ಯರ್ಥಕ್ಕಾಗಿ ಬಾಕಿ ಇದೆ. ನ್ಯಾಯಾಲಯಗಳು ಸಂಜ್ಞಾನಕ್ಕೆ ತೆಗೆದುಕೊಂಡಿದ್ದು, ಇರ್ತ್ಯಥಕ್ಕೆ ಬಾಕಿ ಇರುವ 6 ಪ್ರಕರಣಗಳಿವೆ ಎಂದು ಆಸ್ತಿ ವಿವರಣೆ ಘೋಷಣೆಯಲ್ಲಿ ಯೋಗೇಶ್ವರ್ ತಿಳಿಸಿದ್ದಾರೆ.

English summary
Channapatna JDS candidate C.P. Yogeshwar disclosed his property. He declared total asset Rs 12.26 crore in 2013. But now his total asset 43.82 crore.also spoke with media My opponents are outsiders in the field.So winning is easy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X