ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ 1 ಸಾವು, ರಾಮನಗರದಲ್ಲಿ ಇಬ್ಬರು ವೈದ್ಯರಿಗೆ ಕೊರೊನಾ ಸೋಂಕು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜುಲೈ 13: ರಾಮನಗರ ಜಿಲ್ಲೆಯ ಚನ್ನಪಟ್ಟಣದ ಇಬ್ಬರು ಖಾಸಗಿ ವೈದ್ಯರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಸೋಂಕಿತ ವೈದ್ಯರಲ್ಲಿ ಚಿಕಿತ್ಸೆ ಪಡೆದಿದ್ದ ನೂರಾರು ಜನರಲ್ಲಿ ಆತಂಕ ಮನೆ ಮಾಡಿದೆ.

Recommended Video

Rameshwaram - A Spiritual Journey To The Divine Site Of Tamil Nadu | Oneindia Kannada

ಚನ್ನಪಟ್ಟಣದ ಪ್ರತಿಷ್ಠಿತ ಪುಣ್ಯ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ವೈದ್ಯರು ಕೊರೊನಾ ವೈರಸ್ ಸೋಂಕಿಗೆ ತುತ್ತಾದ ಹಿನ್ನೆಲೆಯಲ್ಲಿ ಪುಣ್ಯ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ವೈದ್ಯರಿಂದ ಚಿಕಿತ್ಸೆ ಪಡೆದ ನೂರಾರು ಜನರು ಕೊರೊನಾ ವೈರಸ್ ಭೀತಿ ಎದುರಿಸುತ್ತಿದ್ದಾರೆ.

ಜು.13 ರಿಂದ 23ರವರೆಗೆ ಮಾಗಡಿ ಸಂಪೂರ್ಣ ಲಾಕ್ ಡೌನ್!ಜು.13 ರಿಂದ 23ರವರೆಗೆ ಮಾಗಡಿ ಸಂಪೂರ್ಣ ಲಾಕ್ ಡೌನ್!

ಇನ್ನು ತಾಲ್ಲೂಕಿನ ಹೊಂಗನೂರು ಗ್ರಾಮದ ಗೋಪಿ ಕ್ಲಿನಿಕ್ ವೈದ್ಯರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಸುತ್ತಲಿನ ಹತ್ತಾರು ಗ್ರಾಮಗಳಲ್ಲಿ ಉತ್ತಮ ಹೆಸರು ಹೊಂದಿರುವ ಕ್ಲಿನಿಕ್, ಸೋಂಕಿತ ವೈದ್ಯ ಬಳಿ ತಪಾಸಣೆಗೆ ಹೋಗಿದ್ದವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

One Coronavirus Infected Person Died In Udupi District

ರಾಮನಗರ ಜಿಲ್ಲೆಯಲ್ಲಿ ಸೋಮವಾರ ಯಾವುದೇ ಕೋವಿಡ್19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಈವರೆಗೆ 389 ಪ್ರಕರಣಗಳು ವರದಿಯಾಗಿವೆ. ಇಂದು 26 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 250 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 131 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಉಡುಪಿ: ಪಿಎಫ್ಐ ಕಾರ್ಯಕರ್ತರಿಂದ ಮೃತ ಕೋವಿಡ್ ಸೋಂಕಿತನ ಅಂತ್ಯಸಂಸ್ಕಾರಉಡುಪಿ: ಪಿಎಫ್ಐ ಕಾರ್ಯಕರ್ತರಿಂದ ಮೃತ ಕೋವಿಡ್ ಸೋಂಕಿತನ ಅಂತ್ಯಸಂಸ್ಕಾರ

ಉಡುಪಿಯಲ್ಲಿ ಮಾರಕ ಕೊರೊನಾ ವೈರಸ್ ಗೆ ನಾಲ್ಕನೇ ಬಲಿ

ಕೊರೊನಾ ವೈರಸ್ ಸೋಂಕಿನಿಂದ ಉಡುಪಿ ಜಿಲ್ಲೆಯಲ್ಲಿ ನಾಲ್ಕನೇ ವ್ಯಕ್ತಿ ಸಾವನ್ನಪ್ಪಿದ್ದಾರೆ. ಬೈಂದೂರು ಮೂಲದ ವ್ಯಕ್ತಿ ಉಡುಪಿಯ ಟಿಎಂಎ ಪೈ ಕೋವಿಡ್19 ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇವರು ಬೈಂದೂರು ತಾಲೂಕಿನ 70 ವರ್ಷದ ವೃದ್ಧನು 15 ದಿನಗಳ ಹಿಂದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೊದಲ ವ್ಯಕ್ತಿ ಬಲಿಯಾದಂತಾಗಿದೆ. ಇಲ್ಲಿವರೆಗೆ ಜಿಲ್ಲೆಯಲ್ಲಿ ಬೇರೆ ಬೇರೆ ಕಾರಣಗಳಿಂದ ಸಾವನ್ನಪ್ಪಿದವರಿಗೆ ಟೆಸ್ಟ್ ಬಳಿಕ ಪಾಸಿಟಿವ್ ಇರುವುದು ಕಂಡುಬಂದಿತ್ತು.

English summary
Coronavirus infection has been confirmed in two private doctors in Channapattana in Ramanagara district, which has caused anxiety among hundreds of people who were treated by infected doctors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X