ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು; ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ-ರೇವತಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಏಪ್ರಿಲ್ 17: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕುಮಾರಸ್ವಾಮಿ - ರೇವತಿ ವಿವಾಹ ಕಲ್ಯಾಣೋತ್ಸವ ಅದ್ಧೂರಿ ಸೆಟ್ ನಲ್ಲಿ ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್ ಡಿ ಕುಮಾರಸ್ವಾಮಿ ಅವರ ಫಾರ್ಮ್ ಹೌಸ್ ನಲ್ಲಿ ನಡೆಯಿತು.

ಕೇತಗಾನಹಳ್ಳಿಯಲ್ಲಿನ ಎಚ್ಡಿಕೆ ಫಾರ್ಮ್ ಹೌಸ್ ನಲ್ಲಿ ಸಪ್ತಪದಿ ಕಲ್ಯಾಣ ಮಂಟಪವನ್ನು ನಿರ್ಮಿಸಿ ವಧು- ವರನ ಮನೆಯವರು, ಆಪ್ತೇಷ್ಟರು ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮದುವೆ ನೆರವೇರಿಸಿದರು. ಸಪ್ತಪದಿ ಮಂಟಪದಲ್ಲಿ ಬೆಳಿಗ್ಗೆ 9:50ಕ್ಕೆ ನಿಖಿಲ್ - ರೇವತಿ ವಿವಾಹ ಕಾರ್ಯ ನಡೆದಿದ್ದು, ನವ ದಂಪತಿಗೆ ಮದುವೆಯಲ್ಲಿ ಭಾಗಿಯಾಗಿದ್ದ ಗಣ್ಯರು, ಹಿತೈಷಿಗಳು ಧಾರೆ ಎರೆಯುವ ಮೂಲಕ ಆಶೀರ್ವದಿಸಿದರು.

ಲಾಕ್ ಡೌನ್ ನಡುವೆ ಕೇತಗಾನಹಳ್ಳಿಯಲ್ಲಿ ನಡೆಯುತ್ತಿದೆ ನಿಖಿಲ್ ಮದುವೆಲಾಕ್ ಡೌನ್ ನಡುವೆ ಕೇತಗಾನಹಳ್ಳಿಯಲ್ಲಿ ನಡೆಯುತ್ತಿದೆ ನಿಖಿಲ್ ಮದುವೆ

 ನವ ದಂಪತಿಗಳಿಗೆ ಆಶೀರ್ವದಿಸಿದ ಕುಟುಂಬಸ್ಥರು

ನವ ದಂಪತಿಗಳಿಗೆ ಆಶೀರ್ವದಿಸಿದ ಕುಟುಂಬಸ್ಥರು

ಮಾಜಿ ಸಚಿವ ಎಚ್ ಡಿ ರೇವಣ್ಣ- ಭವಾನಿ ರೇವಣ್ಣ ದಂಪತಿ, ಸಂಸದ ಪ್ರಜ್ವಲ್ ರೇವಣ್ಣ, ಉದ್ಯಮಿ ಮಂಜುನಾಥ್- ಶ್ರೀದೇವಿ ದಂಪತಿಯ ಕುಟುಂಬದವರು ಸೇರಿದ್ದರು. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ದಂಪತಿ ಹಾಗೂ ಎಚ್ ಡಿ ಕುಮಾರಸ್ವಾಮಿ ದಂಪತಿ ಹಾಗೂ ಉದ್ಯಮಿ ಮಂಜುನಾಥ್ ದಂಪತಿಗಳ ಸಮ್ಮುಖದಲ್ಲಿ ನಿಖಿಲ್ - ರೇವತಿ ವಿವಾಹ ಕಾರ್ಯಕ್ರಮ ನೆರವೇರಿತು.

 9.30ಕ್ಕೆ ನೆರವೇರಿದ ಮಾಂಗಲ್ಯಧಾರಣೆ

9.30ಕ್ಕೆ ನೆರವೇರಿದ ಮಾಂಗಲ್ಯಧಾರಣೆ

ಲಾಕ್ ಡೌನ್ ನಡುವೆಯೇ ಇಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ವಿವಾಹ ನೆರವೇರಿತು. ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಫಾರ್ಮ್ ಹೌಸ್ ನಲ್ಲಿ ವಧು ವರರ ಕುಟುಂಬ ಹಾಗೂ ಕೆಲವು ಆಪ್ತರ ಸಮ್ಮುಖದಲ್ಲಿ ವಿವಾಹ ನಡೆದಿದ್ದು, ಬೆಳಿಗ್ಗೆ 7 ಗಂಟೆಯಿಂದಲೇ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದವು. ಬೆಳಗ್ಗೆ 9.30ರಿಂದ 10.20ರ ಶುಭಲಗ್ನದಲ್ಲಿ ಮದುವೆ ನೆರವೇರಿತು.

 ತೋಟದ ಮನೆಯಲ್ಲಿ ಮದುವೆಗೆ ಅದ್ಧೂರಿ ಸೆಟ್

ತೋಟದ ಮನೆಯಲ್ಲಿ ಮದುವೆಗೆ ಅದ್ಧೂರಿ ಸೆಟ್

ಕೇತಗಾನಹಳ್ಳಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ಅದ್ಧೂರಿ ಸೆಟ್ ಹಾಕಲಾಗಿತ್ತು. ನಿನ್ನೆ ಸಂಜೆ ನಿಖಿಲ್ ಮತ್ತು ರೇವತಿಗೆ ಅರಿಶಿಣ ಶಾಸ್ತ್ರ ಮುಗಿದಿತ್ತು. ಮೊದಲು ನಿಖಿಲ್ ಮದುವೆಯನ್ನು ರಾಮನಗರದಲ್ಲಿ ಮಾಡುವುದಾಗಿ ತಿಳಿಸಲಾಗಿತ್ತು. ನಂತರ ಬೆಂಗಳೂರಿನಲ್ಲಿ ಮದುವೆ ಮಾಡುವುದಾಗಿ ನಿಶ್ಚಯಿಸಲಾಗಿತ್ತು. ಕೊನೆಗೆ ಕೊರೊನಾ ಲಾಕ್ ಡೌನ್ ನಿಂದಾಗಿ ರೇವತಿ ಅವರ ಮನೆಯಲ್ಲೇ ಮದುವೆ ನೆರವೇರಿಸುವುದಾಗಿ ತಿಳಿಸಿದ್ದರು. ಎರಡು ದಿನದ ಹಿಂದಷ್ಟೇ ಕೇತಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಮದುವೆ ನೆರವೇರಿಸುವುದಾಗಿ ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದರು. ಅಂದಿನಿಂದ ತೋಟದ ಮನೆಯಲ್ಲಿ ಮದುವೆಗೆ ಸೆಟ್ ಹಾಕಲಾಗಿತ್ತು.

 ಮದುವೆಯಲ್ಲಿ ಕೆಲವರಷ್ಟೇ ಭಾಗಿ

ಮದುವೆಯಲ್ಲಿ ಕೆಲವರಷ್ಟೇ ಭಾಗಿ

ಲಾಕ್ ಡೌನ್ ಹಿನ್ನೆಲೆಯಲ್ಲಿ ಮದುವೆಗೆ ಕೇವಲ ಕುಟುಂಬದವರು ಹಾಗೂ ಆಪ್ತರಿಗೆ ಮಾತ್ರ ಪ್ರವೇಶವಿದ್ದು, ಕೇತಗಾನಹಳ್ಳಿ ಮಾರ್ಗದ ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ ಪೊಲೀಸರು ಬ್ಯಾರಿ ಕೇಟ್ ಅಳವಡಿಸಿ ಪ್ರತಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸಿ ಕಳುಹಿಸಿದರು. ಮದುವೆ ಸಮಾರಂಭದಲ್ಲಿ ಕೇವಲ 42 ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಪಾಸು ಇದ್ದವರಿಗೆ ಮಾತ್ರ ಒಳಗಡೆ ಹೋಗಲು ಅವಕಾಶ ನೀಡಲಾಗಿತ್ತು. ಈ ಮುನ್ನ ಕುಮಾರಸ್ವಾಮಿ ಅವರೂ, ತಮ್ಮ ಕಾರ್ಯಕರ್ತರಲ್ಲಿ, ಅಭಿಮಾನಿಗಳಲ್ಲಿ, ಯಾರೂ ಮದುವೆಗೆ ಬರಬೇಡಿ, ಕೊರೊನಾ ಇರುವ ಕಾರಣ ಕೆಲವೇ ಮಂದಿ ಸಮ್ಮುಖದಲ್ಲಿ ಮದುವೆ ಮಾಡುತ್ತಿರುವುದಾಗಿ ಮನವಿ ಮಾಡಿದ್ದರು.

English summary
Nikhil kumaraswamy revathi marriage celebration with the blessings of elders in kethaganahalli ramanagar,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X