ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಡೌನ್ ನಡುವೆ ಕೇತಗಾನಹಳ್ಳಿಯಲ್ಲಿ ನಡೆಯುತ್ತಿದೆ ನಿಖಿಲ್ ಮದುವೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಏಪ್ರಿಲ್ 17: ಲಾಕ್ ಡೌನ್ ನಡುವೆಯೇ ಇಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ವಿವಾಹ ಸರಳವಾಗಿ ನಡೆಯುತ್ತಿದೆ.

ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಫಾರ್ಮ್ ಹೌಸ್ ನಲ್ಲಿ ವಿವಾಹ ನಡೆಯುತ್ತಿದೆ. ವಧು ವರರ ಎರಡು ಕುಟುಂಬದವರು ಹಾಗೂ ಕೆಲವು ಆಪ್ತರ ಸಮ್ಮುಖದಲ್ಲಿ ವಿವಾಹ ನಡೆಯಲಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮದುವೆ ಶಾಸ್ತ್ರಗಳು ಪ್ರಾರಂಭವಾಗಿವೆ. ಇಂದು ಬೆಳಗ್ಗೆ 9.30ರಿಂದ 10.20ರ ಶುಭಲಗ್ನದಲ್ಲಿ ಮದುವೆ ನೆರವೇರುತ್ತಿದೆ.

ಲಾಕ್‌ಡೌನ್‌ ನಡುವೆ ನಿಖಿಲ್ ಕುಮಾರ್ ಮದುವೆ: ಡಿಸಿಎಂ ಅಶ್ವತ್ಥ್ ನಾರಾಯಣ ಎಚ್ಚರಿಕೆಲಾಕ್‌ಡೌನ್‌ ನಡುವೆ ನಿಖಿಲ್ ಕುಮಾರ್ ಮದುವೆ: ಡಿಸಿಎಂ ಅಶ್ವತ್ಥ್ ನಾರಾಯಣ ಎಚ್ಚರಿಕೆ

Nikhil Kumaraswamy Marriage In Bidadi Kethaganahalli Farm Today

ನಿನ್ನೆ ನಿಖಿಲ್ ಮತ್ತು ರೇವತಿಗೆ ಅರಿಶಿಣ ಶಾಸ್ತ್ರ ಮುಗಿದಿದೆ. ಇಂದು ಮದುವೆ ಶಾಸ್ತ್ರಗಳು ನಡೆಯುತ್ತಿವೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮದುವೆಗೆ ಕೇವಲ ಕುಟುಂಬದವರು ಹಾಗೂ ಆಪ್ತರಿಗೆ ಮಾತ್ರ ಪ್ರವೇಶವಿದ್ದು, ಕೇತಗಾನಹಳ್ಳಿ ಮಾರ್ಗದ ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ ಪೊಲೀಸರು ಬ್ಯಾರಿ ಕೇಟ್ ಅಳವಡಿಸಿ ಪ್ರತಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸಿ ಕಳುಹಿಸುತ್ತಿದ್ದಾರೆ.

ಮದುವೆ ಸಮಾರಂಭದಲ್ಲಿ ಕೇವಲ 42 ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಪಾಸು ಇದ್ದವರಿಗೆ ಮಾತ್ರ ಒಳಗಡೆ ಹೋಗಲು ಅವಕಾಶ ನೀಡಲಾಗುತ್ತಿದೆ.

English summary
Former cm kumaraswamy son Nikhil kumaraswamy marriage is happening in kethaganahalli farm in bidadi today,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X