• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಲೆ ಮಾಡಿ ಬೈಕ್‌ನಲ್ಲಿ ಶವ ಸಾಗಿಸುವಾಗ ಸಿಕ್ಕಿಬಿದ್ದ ಆರೋಪಿಗಳು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ.11: ರಾಮನಗರ-- ಅವರಿಬ್ಬರು ಸ್ನೇಹಿತೆಯರು, ಒಂದೇ ಮನೆಯಲ್ಲಿ ವಾಸ ಕೂಡ ಮಾಡುತ್ತಿದ್ದರು. ಈ ಇಬ್ಬರು ಸ್ನೇಹಿತೆಯರ ನಡುವೆ ಒಡವೆ ವಿಚಾರದಲ್ಲಿ ಮನಸ್ಥಾಪ ಬಂದು ಈ ವಿಚಾರವಾಗಿ ಗಲಾಟೆ ನಡೆದು ತನ್ನ ಸ್ನೇಹಿತೆಯ ಕಥೆಯನ್ನ ತನ್ನದೆ ಮನೆಯಲ್ಲಿ ಮುಗಿಸಿದ್ದಾಳೆ.

ಇತ್ತ ಮೃತ ಮಹಿಳೆಯ ಶವವನ್ನ ಬೈಕ್ ನಲ್ಲಿ ಇಟ್ಟಿಕೊಂಡು ಸಾಗಟ ಮಾಡಲು ಹೋಗಿ ರಾಮನಗರ ಪೋಲಿಸರ ಸಮಯ ಪ್ರಜ್ಞೆಯಿಂದ ಪೋಲಿಸರ ಅಥಿತಿಯಾಗಿದ್ದಾರೆ.

ಹೌದು ರಾಮನಗರದ ಕಾರಾಗೃಹದ ಬಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ತಡರಾತ್ರಿ ಅಪಘಾತವಾಗಿತ್ತು. ಬೈಕ್ ನಲ್ಲಿ ಇಬ್ಬರು ಯುವಕರು ಮಹಿಳೆಯ ಶವವನ್ನ ಇಟ್ಟುಕೊಂಡು ಶ್ರೀರಂಗಪಟ್ಟಣದ ಕಡೆ ಹೊರಟಿದ್ದರು. ಆದರೆ ರೋಡ್ ಹಂಪ್ ಬಳಿ ಬೈಕ್ ಅಪಘಾತವಾಗಿ ಕೆಳಗೆ ಬಿದ್ದು ಸಣ್ಣ ಪುಟ್ಟ ಗಾಯ ಮಾಡಿಕೊಂಡಿದ್ದಾರೆ.

ಅಪಘಾತದ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ಆ ಮಹಿಳೆ ಮೃತದೇಹದಲ್ಲಿ ಯಾವುದೇ ರಕ್ತ ಸ್ರಾವ ಇಲ್ಲದೆ ಮೃತಪಟ್ಟಿದ್ದು ಪೋಲಿಸರಲ್ಲಿ ಅನುಮಾನ ಮೂಡಿಸಿದೆ ತಕ್ಷಣ ಆ ಶವವನ್ನ ಆಸ್ಪತ್ರೆಗೆ ಸಾಗಿಸಿ ವೈದ್ಯರಿಂದ ತಪಾಸಣೆ ಮಾಡಲಾಗಿ ಆ ಯುವತಿ 12 ಗಂಟೆ ಮೊದಲೆ ಸಾವನ್ನಪ್ಪಿರುವುದಾಗಿ ವೈದ್ಯರು ಧೃಡಪಡಿಸಿದ್ರು. ಗಾಯಗೊಂಡ ಇಬ್ಬರನ್ನ ವಿಚಾರಣೆ ಮಾಡಲಾಗಿ ಅಲ್ಲಿ ಕೊಲೆಯಾಗಿರುವುದು ಸೌಮ್ಯ (22) ಎಂಬುದು ತಿಳಿದಿತ್ತು.

ಅಂದಹಾಗೇ ಈ ಸೌಮ್ಯ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮುತ್ತರಾಯನಗರ ದವಳು. ಈ ಸೌಮ್ಯ ತನ್ನ ಸ್ನೇಹಿತೆ ದುರ್ಗಾ ಮನೆಯಲ್ಲಿ ವಾಸ ಮಾಡುತ್ತಿದ್ಲು. ಇಬ್ಬರು ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುತ್ತಿದ್ದರು. ಈ ಸೌಮ್ಯಾ ದುರ್ಗಾ ಮನೆಯಲ್ಲಿ ಹಣ ಹಾಗೂ ಒಡವೆಗಳನ್ನ ಕಳ್ಳತನ ಮಾಡಿದ್ಲು. ಈ ವಿಚಾರವಾಗಿ ಸೋಮವಾರ ಮನೆಯಲ್ಲಿ ಗಲಾಟೆ ಮಾಡಿ ದುರ್ಗಾ ಸೌಮ್ಯಾಗೆ ದೊಣ್ಣೆಯಿಂದ ಹೊಡೆದಿದ್ದಳು. ಒಂದು ಕೊಠಡಿಯಲ್ಲಿ ಕೂಡಿ ಹಾಕಿದ್ದಳು. ಅಂದು ಸಂಜೆ ಕೊಠಡಿ ಬಾಗಿಲು ತಗೆದು ನೋಡಲಾಗಿ ಸೌಮ್ಯ ಮೃತಪಟ್ಟಿದ್ದಳು.

Ramanagara: Murder accused carrying dead body in bike

ತಕ್ಷಣ ದುರ್ಗಾ ತಮ್ಮ ಪತಿ ರಘು ಹಾಗೂ ಸಹೋದರ ನಾಗರಾಜ್ ಗೆ ಮಾಹಿತಿ ನೀಡಿದಳು. ರಘು ತನ್ನ ಸ್ನೇಹಿತರಾದ ಅಭಿ, ವಿನೋದ್ ಅವರನ್ನ ಮನೆಗೆ ಕರೆಸಿ ಮೃತ ದೇಹವನ್ನ ಶ್ರೀರಂಗಪಟ್ಟಣದ ಕಾವೇರಿ ನದಿಗೆ ಎಸೆಯುವ ಪ್ಲಾನ್ ಮಾಡಿದರು. ಅದರಂತೆ ವಿನೋದ್ ಶ್ವೇತಾ ಶವವನ್ನ ಬೈಕ್ ನಲ್ಲಿ ಕೂರಿಸಿಕೊಂಡು ಹಿಂದೆ ನಾಗರಾಜ್ ಹಿಡಿದುಕೊಂಡು ಹೊರಟಿದ್ದರು. ಇತ್ತ ದುರ್ಗಾ ಹಾಗೂ ರಘು ಒಂದು ಬೈಕ್ ನಲ್ಲಿ ಅಭಿ ಒಂದು ಬೈಕ್ ನಲ್ಲಿ ಹೊರಟಿದ್ದರು. ಆದರೆ ಶವ ಇದ್ದ ಬೈಕ್ ಅಪಘಾತವಾಗಿ ಕೊಲೆ ರಹಸ್ಯ ಬಯಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣವನ್ನ ಆರ್.ಆರ್ ನಗರ ಪೊಲೀಸ್ ಠಾಣೆಗೆ ವರ್ಗಾಹಿಸಲಾಗುತ್ತದೆ ಅಂತಾ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದರು.

English summary
a women was found dead by police in Ramanagar: The culprits plan to take the women dead body to Shree Rangapattana through bike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X