ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ: ಪಿಪಿಇ ಕಿಟ್ ಧರಿಸಿ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಡಿ.ಕೆ ಸುರೇಶ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜುಲೈ 13: ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಯನ್ನಾಗಿ ಪರಿವರ್ತಿಸಿರುವ ರಾಮನಗರದ ಕಂದಾಯ ಭವನದ ಕೋವಿಡ್19 ರೆಫರಲ್ ಆಸ್ಪತ್ರೆಗೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‍ ಭೇಟಿ ನೀಡಿ, ಸೋಂಕಿತರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.

Recommended Video

Rameshwaram - A Spiritual Journey To The Divine Site Of Tamil Nadu | Oneindia Kannada

ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳೋಂದಿಗೆ ಸಭೆ ನಡೆಸಿದ ಸಂಸದ ಡಿ.ಕೆ ಸುರೇಶ್ ನಂತರ ಪಿಪಿಇ ಕಿಟ್‍ ಧರಿಸಿ ಕೋವಿಡ್-19 ಆಸ್ಪತ್ರೆಯಲ್ಲಿ ಸೋಂಕಿತರ ವಾರ್ಡ್ ಗಳಿಗೆ ಭೇಟಿ ಕೊಟ್ಟು ಅವರಲ್ಲಿ ಆತ್ಮ ಸ್ಥೈರ್ಯ ತುಂಬಿದ್ದಾರೆ.

ಉಡುಪಿಯಲ್ಲಿ 1 ಸಾವು, ರಾಮನಗರದಲ್ಲಿ ಇಬ್ಬರು ವೈದ್ಯರಿಗೆ ಕೊರೊನಾ ಸೋಂಕುಉಡುಪಿಯಲ್ಲಿ 1 ಸಾವು, ರಾಮನಗರದಲ್ಲಿ ಇಬ್ಬರು ವೈದ್ಯರಿಗೆ ಕೊರೊನಾ ಸೋಂಕು

MP DK Suresh Visits Ramanagara Covid19 Hospital


ಇತೀಚಿಗೆ ರಾಮನಗರ ಕೋವಿಡ್-19 ಆಸ್ಪತ್ರೆಯಲ್ಲಿ ಶೌಚಾಲಯ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲದೇ ರೋಗಿಗಳು ಸಂಕಷ್ಟ ಪಡುತ್ತಿರುವ ಬಗ್ಗೆ ಅಲ್ಲಿನ ರೋಗಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟು ಜನರ ಗಮನ ಸೆಳೆದ ಹಿನ್ನೆಲೆಯಲ್ಲಿ ಸಂಸದರು ಆಸ್ಪತ್ರೆಗೆ ಭೇಟಿ ನೀಡಿದರು.

MP DK Suresh Visits Ramanagara Covid19 Hospital


ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಡಿ.ಕೆ ಸುರೇಶ ಅವರೊಂದಿಗೆ ಶೌಚಾಲಯದ ಸಮಸ್ಯೆ, ಸ್ವಚ್ಛತೆ ಇಲ್ಲದಿರುವುದು ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸೋಂಕಿತರು ಸಂಸದರ ಗಮನ ಸೆಳೆದಿದ್ದಾರೆ. ಔಷಧಿ, ಶುಶ್ರೂಷೆ ಹಾಗೂ ಊಟದ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನಲಾಗಿದೆ.

English summary
Bengaluru Rural MP DK Suresh visited the Covid 19 Referral Hospital at Ramanagara Revenue House and inquired about the health of the infected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X