ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚನ್ನಪಟ್ಟಣದ 50ಕ್ಕೂ ಹೆಚ್ಚು ಜೆಡಿಎಸ್ ಮುಖಂಡರು ಇಂದು ಬಿಜೆಪಿ ಸೇರ್ಪಡೆ; ಎಚ್‌ಡಿಕೆಗೆ ಸಿಪಿವೈ ಟಕ್ಕರ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಫೆಬ್ರವರಿ 21: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದೆ. ಚುನಾವಣೆಗೆ ವರ್ಷ ಇರುವಾಗಲೇ ಪಕ್ಷಾಂತರ ಜಿಗಿತ ಬಲು ಜೋರಾಗಿದೆ. ತೆನೆ ಇಳಿಸಿ ನೂರಾರು ಮುಖಂಡರು ಕಮಲ ಹಿಡಿಯುತ್ತಿದ್ದಾರೆ. ಇಷ್ಟಾದರೂ ದಳಪತಿ ಎಚ್‌ಡಿಕೆ ಮಾತ್ರ ಕೂಲ್ ಆಗಿದ್ದಾರೆ.

ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ನೆಲೆ ಉಳಿಸಿಕೊಂಡಿದೆ. ರಾಮನಗರ, ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕಿನಲ್ಲಿ ಜೆಡಿಎಸ್ ಜೆಡಿಎಸ್ ಶಾಸಕರಿದ್ದಾರೆ. ಬೊಂಬೆನಗರಿ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಶಾಸಕರಾಗಿದ್ದಾರೆ. ಇದೀಗ ಚನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರುತ್ತಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಸುಮಾರು 50ರಿಂದ 60 ಪ್ರಮುಖ ಜೆಡಿಎಸ್ ಮುಖಂಡರು ಇಂದು (ಫೆ.21) ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಿ.ಪಿ. ಯೋಗೇಶ್ವರ್ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೆ ವೇದಿಕೆ ಸಿದ್ದವಾಗಿದೆ.

More than 50 Channapattas JDS Leaders to Join BJP Today

ಈಗಾಗಲೇ ಮುಂದಿನ ಚುನಾವಣೆಗೆ ರಂಗ ತಾಲೀಮು ಆರಂಭಿಸಿರುವ ಸೈನಿಕ ಸಿ.ಪಿ. ಯೋಗೇಶ್ವರ್, ಚನ್ನಪಟ್ಟಣ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿ ಸದ್ದಿಲ್ಲದೇ ಜೆಡಿಎಸ್ ಪಾಳಯದ ಅತೃಪ್ತರನ್ನು ಸೆಳೆಯುವ ಕೆಲಸ ಆರಂಭಿಸಿದ್ದು, ಅದರಲ್ಲೂ ಯಶಸ್ಸು ಕಂಡಿದ್ದಾರೆ. ಇಂದಿನ ಕಾರ್ಯಕ್ರಮದ ನಂತರ ಮತ್ತಷ್ಟು ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಕ್ಷೇತ್ರದ ಶಾಸಕನಾಗಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೆ, ಆದರೆ ಕಳೆದ ಬಾರಿ ಜನರು ಆಶೀರ್ವಾದ ಮಾಡಲಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಕಾರ್ಯವೈಖರಿ ಬಗ್ಗೆ ಜನ ಬೇಸತ್ತಿದ್ದಾರೆ. ಹಾಗಾಗಿ ಸ್ವಯಂಪ್ರೇರಿತರಾಗಿ ಜೆಡಿಎಸ್ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ. ಮುಂದೆಯೂ ಸಹ ಜೆಡಿಎಸ್‌ನಿಂದ ಬಿಜೆಪಿಗೆ ಬಹಳ ಸಂಖ್ಯೆಯಲ್ಲಿ ಬರಲಿದ್ದಾರೆ ಎಂದರು.

More than 50 Channapattas JDS Leaders to Join BJP Today

ದುಡ್ಡು ಕೊಟ್ಟು ಮುಖಂಡರನ್ನು ಖರೀದಿಸಬಹುದು ಕಾರ್ಯಕರ್ತರನ್ನಲ್ಲ
ಕ್ಷೇತ್ರದಲ್ಲಿ ಸಿ.ಪಿ. ಯೋಗೇಶ್ವರ್ ಕಾರ್ಯಾಚರಣೆ ಸೊಪ್ಪು ಹಾಕದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ಆಪ್ತರ ಪಕ್ಷಾಂತರಕ್ಕೆ ತಲೆ ಕೇಡಿಸಿಕೊಳ್ಳುತ್ತಿಲ್ಲ. ತಾಲೂಕಿನ ಕೆಲ ಮುಖಂಡರು ಹಣದ ಆಸೆಗೆ ಬಿದ್ದು ಬಿಜೆಪಿ ಪಕ್ಷ ಸೇರುತ್ತಿದ್ದಾರೆ. ನನ್ನ ಕಾರ್ಯಕರ್ತರು ನನ್ನ ಜೊತೆಗೆ ಇದ್ದಾರೆ ಹಾಗಾಗಿ ಇದರಿಂದ ನಾನು ವಿಚಲಿತವಾಗುವ ಪ್ರಶ್ನೆಯೇ ಇಲ್ಲಾ ಎಂದು ಸ್ಪಷ್ಟಪಡಿಸಿದರು.

Recommended Video

Sourav Ganguly ಸಪೋರ್ಟ್ ಇದ್ರೂ ಸಾಹಾಗೆ ದ್ರಾವಿಡ್ ಮೋಸ‌ ಮಾಡಿದ್ದು ಹೇಗೆ? | Oneindia Kannada

ನಾಳೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಜೆಡಿಎಸ್ ಮುಖಂಡರ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಮುಖ್ಯಮಂತ್ರಿಯಲ್ಲ, ಅಮಿತ್ ಶಾ, ನಡ್ಡಾ ಅವರೇ ಬಂದು ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡರೂ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದರು.

ಪಕ್ಷಾಂತರ ಕೇವಲ ಚನ್ನಪಟ್ಟಣ ಅಲ್ಲ ಇಡೀ ರಾಜ್ಯದಲ್ಲೇ ನಡೆಯುತ್ತಿದೆ, ನಾನು ಯಾವುದಕ್ಕೂ ಎದೆ ಗುಂದುವುದಿಲ್ಲ. ಚನ್ನಪಟ್ಟಣ ಕ್ಷೇತ್ರದ ಜನತೆ ಬಗ್ಗೆ ನನಗೂ ಗೊತ್ತಿದೆ. ರಾಮನಗರ ಹಾಗೂ ಚನ್ನಪಟ್ಟಣ ಜನತೆ ನನ್ನನ್ನು ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಮತದಾರರು ನನ್ನ ಜೊತೆ ಶಕ್ತಿಯುತವಾಗಿ ಇದ್ದಾರೆ ಅವರೇ ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದು ಹೆಚ್‌ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.

English summary
Above 50 to 60 prominent JDS leaders from Channapatna taluk are joining the BJP at BJP headquarters in Bengaluru today (Feb 21).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X