ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ: ಮಾಂಸದೂಟ ಸೇವಿಸಿ 100 ಜನ ತೀವ್ರ ಅಸ್ವಸ್ಥ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 9: ಬೀಗರ ಔತಣ ಕೂಟದಲ್ಲಿ ಮಾಂಸದೂಟ ಸೇವಿಸಿದ ಸುಮಾರು 100 ಕ್ಕೂ ಹೆಚ್ಚು ಮಂದಿ‌ ಅಸ್ವಸ್ಥರಾಗಿರುವ ಘಟನೆ ಚನ್ನಪಟ್ಟಣ ತಾಲ್ಲೂಕಿನ ಮೊಳೆದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಚನ್ನಪಟ್ಟಣ ತಾಲ್ಲೂಕಿನ ಮೊಳೆದೊಡ್ಡಿ ಗ್ರಾಮದಲ್ಲಿ ಭಾನುವಾರ ನಡೆದಿದ್ದ ಮದುವೆಯ ಹಿನ್ನಲೆಯಲ್ಲಿ ಮಂಗಳವಾರ ಯುವತಿ ಮನೆಯವರಿಂದ ಬೀಗರ ಔತಣ ಕೂಟ ಆಯೋಜನೆ ಮಾಡಲಾಗಿತ್ತು. ಔತಣಕೂಟದಲ್ಲಿ ಊಟ ಸೇವಿಸಿದ ಸುಮಾರು 700 ರಿಂದ 800 ಜನರಲ್ಲಿ 250 ರಿಂದ 300 ಜನ ಅನಾರೋಗ್ಯಕ್ಕೀಡಾಗಿದ್ದಾರೆ.

ಟೊಯೊಟಾ ಕಾರ್ಮಿಕರ ಬಿಕ್ಕಟ್ಟು; ಸರ್ಕಾರದ ಹಸ್ತಕ್ಷೇಪಕ್ಕೆ ಹೆಚ್ಚಾದ ಒತ್ತಾಯಟೊಯೊಟಾ ಕಾರ್ಮಿಕರ ಬಿಕ್ಕಟ್ಟು; ಸರ್ಕಾರದ ಹಸ್ತಕ್ಷೇಪಕ್ಕೆ ಹೆಚ್ಚಾದ ಒತ್ತಾಯ

ಬೀಗರ ಔತಣಕೂಟದಲ್ಲಿ ಊಟ ಸೇವಿಸಿದ್ದ ಕೆಲವರಿಗೆ ಬೆಳಿಗ್ಗೆ ಆಗುವಷ್ಟರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಈ ವಿಚಾರ ಎಲ್ಲಾ ಕಡೆ ವ್ಯಾಪಿಸಿದೆ. ವಿಚಾರ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಪಿಡಿಒಗೆ ವಿಷಯ ಮುಟ್ಟಿಸಿದ್ದಾರೆ.

Ramanagara: More Than 100 People Suffering From Meat Eating

ಎಚ್ಚೆತ್ತುಕೊಂಡ ಅಧಿಕಾರಿಗಳು ಅಸ್ವಸ್ಥರಾಗಿದ್ದ ಜನರನ್ನು ಅದೇ ಗ್ರಾಮದ ಅಂಗನವಾಡಿ ಹಾಗೂ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಇನ್ನು ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದ ರೋಗಿಗಳನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಎಂಟು ತಿಂಗಳಿಂದ ಕೊರೊನಾ ಮಹಾಮಾರಿ ವಿಶ್ವಾದ್ಯಂತ ರಣಕೇಕೆ ಹಾಕುತ್ತಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮದುವೆ ಹಾಗೂ ಶುಭ ಸಮಾರಂಭಗಳಿಗೆ ನಿಯಮಿತವಾಗಿ ಜನರು ಸೇರಬೇಕು ಎಂದು ನಿಯಮ ಕೂಡ ಹೊರಡಿಸಿದೆ. ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ಜನರು, ಅದ್ಧೂರಿ ಸಮಾರಂಭಗಳನ್ನು ಮಾಡಿ ಇಲ್ಲದ ತೊಂದರೆಗೆ ಸಿಲುಕಿದ್ದಾರೆ.



ಮೊಳೆದೊಡ್ಡಿ ಗ್ರಾಮದ ಮುತ್ತುರಾಜ್ ಹಾಗೂ ಅದೇ ಗ್ರಾಮದ ರೋಹಿಣಿ ಎಂಬುವವರು ಕಳೆದ ಮೂರು ದಿನಗಳ ಹಿಂದೆ ವಿವಾಹವಾಗಿದ್ದರು. ವಧುವಿನ ಮನೆಯವರು ಗ್ರಾಮದ ದೇವಾಲಯದ ಬಳಿ ಮದುವೆ ಕಾರ್ಯ ಮುಗಿಸಿದ್ದರು. ಸಂಪ್ರದಾಯದಂತೆ ಹೆಣ್ಣಿನ ಮನೆಯವರು ನಿನ್ನೆ ಗ್ರಾಮದಲ್ಲಿಯೇ ಬೀಗರ ಔತಣಕೂಟ ಆಯೋಜನೆ ಮಾಡಿದ್ದರು.

Recommended Video

Shimoga: ಗ್ರಾಮದಲ್ಲಿ ಪತ್ತೆಯಾಯ್ತು 8 ಅಡಿ ಉದ್ದದ ಕಾಳಿಂಗ ಸರ್ಪ! | Oneindia Kannada

ಅಧಿಕಾರಿಗಳ ಕಣ್ತಪ್ಪಿಸಿ ಅದ್ಧೂರಿ ಮದುವೆ ಮಾಡಿದ ಕುಟುಂಬದವರ ಮೇಲೆ, ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
More than 100 people who had consumed meat were illness in Ramanagara District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X