ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಗ್ನಿಪಥ್ ಮೂಲಕ ಸೈನಿಕರನ್ನು ಅರೆಕಾಲಿಕ ಉದ್ಯೋಗಿಗಳನ್ನಾಗಿ ಹೊರಟ ಬಿಜೆಪಿ: ರಾಮಲಿಂಗಾರೆಡ್ಡಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂ 22: ಕೇಂದ್ರದ ಬಿಜೆಪಿ ಸರ್ಕಾರ ದೇಶ ಕಾಯುತ್ತಿರುವ ಸೈನಿಕರನ್ನು ಅಗ್ನಿಪಥ್ ಯೋಜನೆಯ ಮೂಲಕ ಅರೆಕಾಲಿಕ ಉದ್ಯೋಗಿಗಳನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಆರೋಪಿಸಿದರು.

ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಬಿಡದಿಯ ಮ್ಯಾಗ್ನೋಲಿಯ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ನವ ಸಂಕಲ್ಪ ಚಿಂತನಾ ಶಿಬಿರವನ್ನು ಉದ್ಘಾಟನೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆ , ಮೋದಿಯವರ ರಾಜ್ಯ ಭೇಟಿ ಹಾಗೂ ರಾಹುಲ್ ಇಡಿ ವಿಚಾರಣೆಯನ್ನು ಖಂಡಿಸಿದರು.

ಮೇಕೆದಾಟು ಪ್ರದೇಶ ವೀಕ್ಷಿಸಿದ ಚಾಮರಾಜನಗರ ಡಿಸಿಮೇಕೆದಾಟು ಪ್ರದೇಶ ವೀಕ್ಷಿಸಿದ ಚಾಮರಾಜನಗರ ಡಿಸಿ

ವಿದ್ಯಾಭ್ಯಾಸ ಮಾಡೋ ಯುವಕರನ್ನು ಸೇನೆಗೆ ಸೇರಿಸಿಕೊಳ್ಳಲು ಪ್ಲಾನ್

ವಿದ್ಯಾಭ್ಯಾಸ ಮಾಡೋ ಯುವಕರನ್ನು ಸೇನೆಗೆ ಸೇರಿಸಿಕೊಳ್ಳಲು ಪ್ಲಾನ್

ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ಮುಂದಾಗಿರುವ ಅಗ್ನಿಪಥ್ ಯೋಜನೆಗೆ ಕಾಂಗ್ರೆಸ್ ಪಕ್ಷದ ವಿರೋಧ ಇದೆ. ಸೇನಾಪಡೆಗಳ ರಕ್ಷಣೆ ಇಲ್ಲದೇ ಯಾರೂ ಕೂಡ ನಮ್ಮ ದೇಶದಲ್ಲಿ ನೆಮ್ಮದಿಯಾಗಿ ಇರೋಕೆ ಆಗೊಲ್ಲ. ದೇಶದಲ್ಲಿ ಶಾಂತಿ ಸುವ್ಯವಸ್ಥೆ ನೆಲಸಬೇಕು ಎಂದರೆ ನಮ್ಮ ಸೇನಾಪಡೆಗಳು ಶಕ್ತಿಯುತವಾಗಿ ಪ್ರಬಲವಾಗಿರಬೇಕು. ಆದರೆ ಅಗ್ನಿಪಥ್ ಯೋಜನೆಯಿಂದ ಸೈನಿಕರನ್ನು ಅರೆಕಾಲಿಕ ಉದ್ಯೋಗಿಗಳನ್ನಾಗಿ ಮಾಡಲು ಬಿಜೆಪಿ ಹೊರಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಆರೋಪಿಸಿದರು.

ಕೇಂದ್ರ ಸರ್ಕಾರ ಸೇನೆಯಲ್ಲಿ ಕೆಲಸ ಮಾಡುವವರನ್ನು ಅರೆಕಾಲಿಕ ನೌಕರರು ಅನ್ನೋ ರೀತಿ ಮಾಡ್ತಿದೆ. 17-21 ವರ್ಷ ವಯಸ್ಸಿನ ವಿದ್ಯಾಭ್ಯಾಸ ಮಾಡೋ ಯುವಕರನ್ನು ಸೇನೆಗೆ ಸೇರಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ. 4 ವರ್ಷ ಸೇನೆಯಲ್ಲಿ ಕೆಲಸ ಮಾಡಿಸಿಕೊಂಡು ಮನೆಗೆ ಕಳಿಸಿದರೆ, ಅವರು ವಾಪಸ್ಸು ಬಂದು ಬದುಕು ನಡೆಸಲು ಅವರು ಏನು ಮಾಡ್ತಾರೆ..? ಎಂದು ರಾಮಲಿಂಗ ರೆಡ್ಡಿ ಪ್ರಶ್ನಿಸಿದರು.

ಆರ್ಎಸ್ಎಸ್ ಯುವಕರನ್ನು ಸೇನೆಗೆ ತುಂಬುವ ಹುನ್ನಾರವೇ 'ಅಗ್ನಿಪಥ್' : ಎಚ್.ಡಿ.ಕುಮಾರಸ್ವಾಮಿಆರ್ಎಸ್ಎಸ್ ಯುವಕರನ್ನು ಸೇನೆಗೆ ತುಂಬುವ ಹುನ್ನಾರವೇ 'ಅಗ್ನಿಪಥ್' : ಎಚ್.ಡಿ.ಕುಮಾರಸ್ವಾಮಿ

ಕೇಂದ್ರ ಸರ್ಕಾರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವಾಗ್ದಾಳಿ

ಕೇಂದ್ರ ಸರ್ಕಾರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವಾಗ್ದಾಳಿ

ಬಿಜೆಪಿ ಅವರು ಯಾವ ಪುರುಷರ್ತಾಕ್ಕೆ ಈ ಯೋಜನೆ ಜಾರಿ ಮಾಡ್ತಿದ್ದಾರೆ ಗೊತ್ತಿಲ್ಲ ಇದರಿಂದ ದೇಶಕ್ಕೆ ರಕ್ಷಣೆ ಸಿಗುವುದಿಲ್ಲ. ಮೋದಿ ಅಧಿಕಾರಕ್ಕೆ ಬರುವಾಗ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದರು, ಅವರ ಆಶ್ವಾಸನೆ ಪ್ರಕಾರ ಈಗ 16 ಕೋಟಿ ಯುವಕರಿಗೆ ಉದ್ಯೋಗ ಕೊಡಬೇಕಿತ್ತು, ಆದರೆ 16 ಕೋಟಿಗಿಂತಲೂ ಹೆಚ್ಚು ನಿರುದ್ಯೋಗಿಗಳನ್ನು ಸೃಷ್ಟಿಮಾಡಿರುವುದು ಮೋದಿ ಅವರ ಸಾಧನೆ ಎಂದು ರಾಮಲಿಂಗ ರೆಡ್ಡಿ ವ್ಯಂಗ್ಯವಾಡಿದರು.

ದೇಶವನ್ನು ಮೋದಿಯವರು ಏನು ಮಾಡೋಕೆ ಹೊರಟಿದ್ದಾರೋ ಗೊತ್ತಿಲ್ಲ. ಅವರ ಹಿಂದೆ ಹೇಳಿಕೊಡೋರು ಬೇರೆ ಇದ್ದಾರೆ. ಆರ್ ಎಸ್ಎಸ್ ಮತ್ತು ಹಿಂದೂ ಪರಿಷತ್ ಅವರು ಹೇಳಿದ ರೀತಿ ಮೋದಿ ಕೇಳುತ್ತಿದ್ದಾರೆ ಹಾಗೂ ಅವರ ತಾಳಕ್ಕೆ ಮೋದಿ ಕುಣಿಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

ಬಿಜೆಪಿಯವರ ತಾಳಕ್ಕೆ ಕುಣಿಯುತ್ತಿರುವ ಸಂಸ್ಥೆಗಳು

ಬಿಜೆಪಿಯವರ ತಾಳಕ್ಕೆ ಕುಣಿಯುತ್ತಿರುವ ಸಂಸ್ಥೆಗಳು

ದೇಶದಲ್ಲಿ ಇಡಿ, ಐಟಿ, ಸಿಬಿಐ, ಚುನಾವಣಾ ಆಯೋಗ ಹಾಗೂ ರಿಜರ್ವ್ ಬ್ಯಾಂಕ್ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಮೋದಿ ಅವರು ಪ್ರಧಾನಿ ಆದ ನಂತರ ಇಡಿ, ಐಟಿ, ಸಿಬಿಐ, ಚುನಾವಣಾ ಆಯೋಗ ಹಾಗೂ ರಿಸರ್ವ್ ಬ್ಯಾಂಕ್ ಎಲ್ಲವನ್ನೂ ದುರುಪಯೋಗ ಮಾಡಿಕೊಳ್ಳುತ್ತಾ ಇದ್ದಾರೆ. ಈ ಎಲ್ಲಾ ಸಂಸ್ಥೆಗಳು ಬಿಜೆಪಿಯವರ ತಾಳಕ್ಕೆ ಕುಣಿಯುವಂತೆ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದರು.

ಇಡಿ, ಐಟಿ, ಸಿಬಿಐ ಈ ಇಲಾಖೆಗಳನ್ನು ಇವರ ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಬಳಸುತ್ತಿದ್ದಾರೆ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಈಗಾಗಲೇ ರಾಹುಲ್ ಗಾಂಧಿಯವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಆದರೂ ರಾಜಕೀಯ ದುರುದ್ದೇಶ ದಿಂದ ಅವರಿಗೆ ತೊಂದರೆ ಕೊಡಲು ಮತ್ತೆ ಈ ಕೇಸ್ ನ ಓಪನ್ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗಳಿಂದ ಕಾಂಗ್ರೆಸ್ ಇಡೀ ದೇಶದಲ್ಲಿ ಪ್ರತಿಭಟನೆ ಮಾಡುತ್ತಿದೆ ಎಂದು ರಾಮಲಿಂಗ ರೆಡ್ಡಿ ತಿಳಿಸಿದರು.

ಜನರ ಬಗ್ಗೆ ಮೋದಿಯವರಿಗೆ ಕಾಳಜಿ ಇಲ್ಲ

ಜನರ ಬಗ್ಗೆ ಮೋದಿಯವರಿಗೆ ಕಾಳಜಿ ಇಲ್ಲ

ಪ್ರಧಾನಿ ಮೋದಿ ರಾಜ್ಯ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ, ಜನರ ಬಗ್ಗೆ ಮೋದಿಯವರಿಗೆ ಕಾಳಜಿ ಇಲ್ಲ, ಮೋದಿಯವರ ರಾಜ್ಯ ಭೇಟಿ ಚುನಾವಣಾ ಗಿಮಿಕ್, ರಾಜ್ಯದಲ್ಲಿ 2 ವರ್ಷಗಳಿಂದ ಅತಿವೃಷ್ಠಿ ಆದಾಗ ರಾಜ್ಯಕ್ಕೆ ಬರಲಿಲ್ಲ, ರಸ್ತೇಲಿ ಓಡಾಡೋದು ಬೇಡ, ಕನಿಷ್ಠ ವೈಮಾನಿಕ ಸಮೀಕ್ಷೆ ಕೂಡ ಮಾಡಿಲ್ಲ ಎಂದು ಟೀಕಿಸಿದರು.

ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈಗ ಮೋದಿ ಯವರಿಗೆ ಕರ್ನಾಟಕ ನೆನಪಿಗೆ ಬಂದಿದೆ ಹಾಗಾಗಿ ಅವರ ಓಡಾಟ ಜಾಸ್ತಿಯಾಗಿದೆ. ಮುಂದೆ ಅಸೆಂಬ್ಲಿ ಚುನಾವಣೆ ಇದೆ ಆ ಹಿನ್ನೆಲೆ ಓಡಾಟ ಮಾಡುತ್ತಿದ್ದಾರೆ. ಮೋದಿಯವರ ತಮ್ಮ ಪ್ರವಾಸದ ಸಮಯದಲ್ಲಿ ಮಾಡಿದ ಭಾಷಣ ಗಮನಿಸಿದ್ದೇನೆ, ಅವರು ಭಾಷಣದಲ್ಲಿ ಹೇಳಿರೋದು ಎಲ್ಲಾ ಬೋಗಸ್, ಕೊರೋನಾ ಸಂದರ್ಭದಲ್ಲಿ 20 ಲಕ್ಷ ಕೋಟಿ ಕೊಡ್ತೀನಿ ಅಂತಾ ಹೇಳಿದ್ದಾರೆ, ಯಾರಾದರೂ 20 ಲಕ್ಷ ಕೋಟಿಯನ್ನ ನೋಡಿದ್ರಾ..? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಪ್ರಶ್ನಿಸಿದರು.

English summary
Creation of Soldiers as part-time employees by Agnipath Project: KPCC president Ramalinga Reddy alleged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X