ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದಲ್ಲಿ ದ್ವೇಷಕ್ಕೆ ಬಲಿಯಾದವು 300 ಬಾಳೆ ಗಿಡಗಳು!

By ರಾಮನಗರ ಸುದ್ದಿ
|
Google Oneindia Kannada News

ರಾಮನಗರ, ಜೂನ್ 06: ವರ್ಷ ಪೂರ್ತಿ ಶ್ರಮ ವಹಿಸಿ ಬೆಳೆದ 300 ಬಾಳೆ ಗಿಡಗಳನ್ನು ಕಿಡಿಗೇಡಿಗಳು ಕತ್ತರಿಸಿ ನಾಶಪಡಿಸಿರುವ ಘಟನೆ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.

Recommended Video

ದ್ವೇಷಕ್ಕೆ ರೈತ ಬೆಳೆದ ಬಾಳೆಗಿಡಗಳನ್ನು ನಾಶ ಪಡಿಸಿದ ಕಿಡಿಗೇಡಿಗಳು | Banana Plantation | Ramanagara

ತಾಲ್ಲೂಕಿನ ಕೂಟಗಲ್ ಹೋಬಳಿ ತಿಮ್ಮಸಂದ್ರ ಗ್ರಾಮದ ಪಟೇಲ್ ರಾಜಣ್ಣ ಎಂಬುವರ ತೋಟದಲ್ಲಿ ಕಿಡಿಗೇಡಿಗಳು ತಡರಾತ್ರಿ ಕಟಾವಿಗೆ ಬಂದ 300ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಕತ್ತರಿಸಿ ಹಾಕಿ ದ್ವೇಷ ತೀರಿಸಿಕೊಂಡಿದ್ದಾರೆ. ಸುಮಾರು 6 ಎಕರೆ ಅಡಿಕೆ‌ ತೋಟದಲ್ಲಿ 4000 ಸಾವಿರ ಬಾಳೆ ಗಿಡಗಳನ್ನು ಅವರು ಬೆಳೆದಿದ್ದರು. ಬಾಳೆ‌ ಗೊನೆಗಳು ಕಟಾವು ಮಾಡುವ ಹಂತಕ್ಕೆ‌ ಬಂದಿದ್ದು, ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದ ಬಾಳೆ ಬೆಳೆಯನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ.

Miscreants Destroyed 300 Banana Trees For Revenge In Ramanagar

 ರಾಮನಗರದಲ್ಲಿ ಕಾಡಾನೆಗಳ ದಾಳಿಗೆ ಮಾವಿನ ಮರಗಳು ನಾಶ ರಾಮನಗರದಲ್ಲಿ ಕಾಡಾನೆಗಳ ದಾಳಿಗೆ ಮಾವಿನ ಮರಗಳು ನಾಶ

ಜಮೀನಿನ ಮಾಲೀಕ ರಾಜಣ್ಣ ರಾತ್ರಿ 9 ಗಂಟೆಗೆ ಮನೆಗೆ ಬಂದ ನಂತರ ಈ ಕೃತ್ಯವನ್ನು ಎಸಗಲಾಗಿದೆ. ಬೆಳಿಗ್ಗೆ ಅವರು ತೋಟಕ್ಕೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ. ಕಟಾವಿಗೆ ಬಂದ ಬಾಳೆ ಗಿಡಗಳು ಕಡಿದುಬಿದ್ದದನ್ನು ಕಂಡು ರೈತ ಕಣ್ಣೀರು ಇಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Some miscreants destroyed 300 trees for revenge in timmasandra village of ramanagar district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X