ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೈಲಿಗೆ ಹೋಗಿ ಬಂದವರನ್ನು ಬಿಜೆಪಿ ಸೇರಿಸಿಕೊಳ್ಳಲ್ಲ !

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜು.08: 'ನಮ್ಮ ಬಿಜೆಪಿ ಪಕ್ಷಕ್ಕೆ ಎಲ್ಲಿಂದಲೋ ಬಂದವರನ್ನು ನಾವು ಸೇರಿಸಿಕೊಳ್ಳುವುದಿಲ್ಲ. ಜೈಲಿಗೆ ಹೋದವರನ್ನು ನಾವು ಸೇರಿಸಿಕೊಳ್ಳುವುದಿಲ್ಲ' ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸುವ ವಿಚಾರದಲ್ಲಿ ಸುದ್ದಿ ಕೇಂದ್ರಕ್ಕೆ ಬಂದಿರುವ ಸಚಿವ ಸಿ.ಪಿ. ಯೋಗೀಶ್ವರ್ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಕೊಟ್ಟ ಟಾಂಗ್ ಇದು.

ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿ.ಪಿ. ಯೋಗೀಶ್ವರ್, ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಕಷಕ್ಕೆ ವಲಸೆ ಹೋಗಿರುವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಡಿ.ಕೆ. ಶಿವಕುಮಾರ್ ಆಹ್ವಾನಿಸಿದ್ದರು. ಡಿಕೆಶಿಗೆ ಮಾತಲ್ಲೇ ತಿರುಗೇಟು ನೀಡಿರುವ ಸಿ.ಪಿ. ಯೋಗೀಶ್ವರ್, ಜೈಲಿಗೆ ಹೋಗಿ ಬಂದವರನ್ನು ನಮ್ಮ ಪಕ್ಷ ಸೇರಿಸಿಕೊಳ್ಳುವುದಿಲ್ಲ ಎಂದು ಮಾರ್ಮಿಕವಾಗಿ ಡಿ.ಕೆ. ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.

ಸಂಸದೆ ಸುಮಲತಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧವೂ ಯೋಗೀಶ್ವರ್ ಕಿಡಿ ಕಾರಿದರು. ಕೆಆರ್‌ಎಸ್‌ ಸುತ್ತಲೂ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಅನೇಕ ವರ್ಷಗಳಿಂದ ನಡೆಯುತ್ತಿದೆ. ಈ ಬಗ್ಗೆ ಸಂಸದರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಸಂಸದೆ ಸುಮಲತಾ ಅವರ ಬಗ್ಗೆ ಕುಮಾರಸ್ವಾಮಿ ಬಳಸಿರುವ ಭಾಷೆ ಸರಿಯಲ್ಲ ಎಂದು ಹೇಳಿದರು.

 Minister C.P. Yogeshwar Statement about KPCC President D.K. Shivakumar

ಎಚ್‌.ಡಿ. ಕುಮಾರಸ್ವಾಮಿ ಈಗಾಗಲೇ ತಮ್ಮ ವರ್ಚಸ್ಸು ಕಳೆದುಕೊಂಡಿದ್ದಾರೆ. ಅವರ ಮಾತುಗಳು ಕೂಡ ತೂಕ ಕಳೆದುಕೊಂಡಿವೆ. ಅವರ ರಾಜಕೀಯ ನೆಲೆ ದಿನೇ ದಿನೇ ಕಳೆದುಕೊಳ್ಳುತ್ತಿದೆ. ಹೇಳಿಕೊಟ್ಟ ಮಾರನೇ ದಿನಕ್ಕೆ ಕುಮಾರಸ್ವಾಮಿ ಸಿಎಂ ಅವರನ್ನ ಭೇಟಿ ಮಾಡುತ್ತಾರೆ. ಹೆಚ್‌ಡಿಕೆಗೆ ಮಂಡ್ಯದಲ್ಲಿ ತಮ್ಮ ಮಗನ ಸೋಲನ್ನು ಸಹಿಕೊಳ್ಳದೇ ಹತಾಶೆ ಮನೋಭಾವದದಲ್ಲಿದ್ದಾರೆ. ‌‌ಉತ್ತರ ಕರ್ನಾಟದಕಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲ. ಮಂಡ್ಯ ಬಿಡಲು ರೆಡಿ ಇಲ್ಲ. ಹೀಗಾಗಿ ಏನೆನೋ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಸಚಿವ ಸಿ.ಪಿ.ಯೋಗೇಶ್ವರ್ ವ್ಯಂಗ್ಯವಾಡಿದರು.

Recommended Video

ತುಮಕೂರು ರಸ್ತೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗೆ ಡಿಕೆ ಶಿವಕುಮಾರ್ ಮಾಡಿದ ಸಹಾಯ ನೋಡಿ | Oneindia Kannada

ನನ್ನ ನಿಲುವನ್ನು ಆಗಾಗೆ ವ್ಯಕ್ತ ಪಡಿಸುತ್ತೇನೆ. ಲೋಪಗಳ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದೇನೆ. ಐದು ಭಾರಿ ನಾನು ಗೆಲುವು ಸಾಧಿಸಿದ್ದೇನೆ. ರೇಣುಕಾಚಾರ್ಯ ರಾಜಕೀಯ ಕಾರ್ಯದರ್ಶಿಯಾಗಿದ್ದಾನೆ. ಅವರಿಗೆ ಬೆಂಗಳೂರಿನಲ್ಲಿ ಐಷಾರಾಮಿ ಮನೆ ಸಿಕ್ಕಿದೆ ಹಾಗೂ ಆತನ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ಸಿಕ್ಕಿದೆ ಎಂದರೆ ಅಲ್ಲಿ ನನ್ನ ಶ್ರಮವಿದೆ ಎಂದು ರೇಣುಕಾಚಾರ್ಯರನನ್ನು ಕುಟುಕಿದರು.

English summary
Minister C.P. Yogeshwar verbal attack on KPCC President D.K. Shivakumar know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X