ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನಕಪುರದಿಂದ ಬಾಂಗ್ಲಾದೇಶಕ್ಕೆ ನಂದಿನಿ ಉತ್ಪನ್ನಗಳು ರಫ್ತು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂನ್ 15; ಕೊರೊನಾ ಭೀತಿಯಲ್ಲೂ ರಾಮನಗರ ಜಿಲ್ಲೆ ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲಿ ನಂಬರ್ 1 ಜಿಲ್ಲೆಯಾಗಿದೆ. ಪ್ರತಿದಿನ ಸುಮಾರು 8.77 ಲಕ್ಷ ಲೀಟರ್ ಹಾಲನ್ನು ಜಿಲ್ಲೆ ಉತ್ಪಾದನೆ ಮಾಡುತ್ತಿದೆ.

ರಾಮನಗರ ಜಿಲ್ಲೆಯ ಕನಕಪುರ ಬೆಂಗಳೂರು ಡೈರಿ ವ್ಯಾಪ್ತಿಗೆ ಒಳಪಡುತ್ತದೆ. ಈಗ ಹಾಲಿನಿಂದ ತಯಾರಾಗುವ ಉತ್ಪನ್ನಗಳನ್ನು ವಿದೇಶಗಳಿಗೂ ರಫ್ತು ಮಾಡಲು ಬೆಂಗಳೂರು ಡೈರಿ ಮುಂದಾಗಿದೆ.

ಕೋವಿಡ್ ಸೋಂಕಿತರ ಮನೆಯಿಂದ ಹಾಲು ಸ್ವೀಕರಿಸಲ್ಲವೆಂದ ಹಾಲು ಉತ್ಪಾದಕ ಸಂಘಕೋವಿಡ್ ಸೋಂಕಿತರ ಮನೆಯಿಂದ ಹಾಲು ಸ್ವೀಕರಿಸಲ್ಲವೆಂದ ಹಾಲು ಉತ್ಪಾದಕ ಸಂಘ

ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ ನೂತನವಾಗಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಶಿವನಹಳ್ಳಿ ಬಳಿ ನಿರ್ಮಿಸಿರುವ ನಂದಿನಿ ಹಾಲು ಉತ್ಪನ್ನ ಸಂಕೀರ್ಣದಲ್ಲಿ ಉತ್ಪಾದಿಸುವ ಕೆನೆ ರಹಿತ ಹಾಲಿನ ಪುಡಿ ವಿದೇಶಗಳಿಗೆ ರಫ್ತು ಆಗಲಿದೆ.

ವಾರದಲ್ಲಿ ಒಂದೆರಡು ದಿನ ಹಾಲು ಖರೀದಿ ಸ್ಥಗಿತ? ವಾರದಲ್ಲಿ ಒಂದೆರಡು ದಿನ ಹಾಲು ಖರೀದಿ ಸ್ಥಗಿತ?

Milk Powder To Export Kanakapur To Bangladesh

ಈಗಾಗಲೇ ವಿದೇಶಗಳಿಂದ ಬೇಡಿಕೆ ಬಂದಿದೆ. ಬಾಂಗ್ಲಾದೇಶದಿಂದ 500 ಟನ್ ಹಾಲಿನ ಪುಡಿಗೆ ಬೇಡಿಕೆ ಬಂದಿದ್ದು ಇಂದು ಸುಮಾರು 75 ಟನ್ ಹಾಲಿನ ಪೌಡರ್ ಹೊತ್ತ ಮೂರು ಕಂಟೈನರ್‌ಗಳಿಗೆ ನಿಗಮದ ಅಧಿಕಾರಿಗಳು ಮತ್ತು ಚುನಾಯಿತ ನಿರ್ದೇಶಕರು ಚಾಲನೆ ನೀಡಿದರು.

ಮಂಡ್ಯ; ಮನ್‌ಮುಲ್ ಕಲಬೆರಕೆ ಪ್ರಕರಣದ ತನಿಖೆಗೆ ಸಿಐಡಿಗೆ ಮಂಡ್ಯ; ಮನ್‌ಮುಲ್ ಕಲಬೆರಕೆ ಪ್ರಕರಣದ ತನಿಖೆಗೆ ಸಿಐಡಿಗೆ

ನಂದಿನಿ ಹಾಲು ಉತ್ಪನ್ನ ಸಂಕೀರ್ಣವನ್ನು ಕನಕಪುರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದೆ. ಸಂಪೂರ್ಣವಾಗಿ ಸ್ವಯಂಚಾಲಿತ ವಿದೇಶಿ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ.

ಘಟಕದಲ್ಲಿ ದಿನನಿತ್ಯ ಸರಾಸರಿ 35 ಮೆಟ್ರಿಕ್ ಟನ್ ಹಾಲಿನ ಪುಡಿ, 35 ಮೆಟ್ರಿಕ್ ಟನ್ ಚೀಸ್ ಮತ್ತು 1 ಲಕ್ಷ ಲೀಟರ್ ದೀರ್ಘಾ ಜೀವಿತಾವಧಿಯ ಹಾಲು, 1.5 ಲಕ್ಷ ಲೀಟರ್ ಪೌಚ್ ಹಾಲು, 50 ಕೆಜಿ ಸಾಮರ್ಥ್ಯದ ಮೊಸರು, 2 ಮೆಟ್ರಿಕ್ ಟನ್ ತುಪ್ಪ ಮತ್ತು 20 ಟನ್ ಸಾಮರ್ಥ್ಯದ ಬೆಣ್ಣೆ ಉತ್ಪಾದಿಸುವ ಯಂತ್ರೋಪಕರಣಗಳಿವೆ.

ಈ ಬಗ್ಗೆ ಮಾತನಾಡಿದ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಹರೀಶ್, "ಮುಂದಿನ ಒಂದು ವರ್ಷದಲ್ಲಿ 60 ಮೆಟ್ರಿಕ್ ಟನ್ ಸಾಮರ್ಥ್ಯದ ಮತ್ತೊಂದು ಕೆನೆ ರಹಿತ ಹಾಲಿನ ಪುಡಿ ತಯಾರು ಮಾಡುವ ನೂತನ ಘಟಕವನ್ನು ಸ್ಥಾಪನೆ ಮಾಡಲಾಗುತ್ತದೆ" ಎಂದರು.

Recommended Video

ನಮ್ ಹೊಟ್ಟೆ ತುಂಬಿಲ್ಲ ಅಂದ್ರು ಗಾಡಿ ಹೊಟ್ಟೆ ತುಂಬಿಸಬೇಕು | Oneindia Kannada

ಈಗಾಗಲೇ ಕನಕಪುರದ ಮೆಗಾ ಡೇರಿಯಿಂದ ಸಿಂಗಾಪುರ, ಭೂತಾನ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಹಾಲಿನ ಉತ್ಪನ್ನಗಳನ್ನ ರಫ್ತು ಮಾಡಲಾಗಿದೆ. ಈಗ ಬಾಂಗ್ಲಾದೇಶದಿಂದ ಕೆನೆ ರಹಿತ ಹಾಲಿನ ಪುಡಿಗೆ ಬೇಡಿಕೆ ಬಂದಿದೆ.

English summary
Bengaluru dairy Kanakapur unit will export 500 ton of milk powder to Bangladesh. Ramanagara district alone producing 8.77 lakh liter of milk every day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X