ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀತಿ ಸಂಹಿತೆ ಉಲ್ಲಂಘನೆ ಆರೋಪ: ರೆಸಾರ್ಟ್ ಮೇಲೆ ದಾಳಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 28: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಕ್ಷಣದಿಂದ ಎಂಸಿಸಿ ತಂಡಗಳು ಜಾಗ್ರತೆಯಾಗಿವೆ. ರಾಮನಗರ ಜಿಲ್ಲೆಯ ಮೊದಲ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕಳೆದ ರಾತ್ರಿ ನಡೆದಿದೆ.

ರಾಮನಗರ ತಾಲೂಕಿನ ಬಸವನಪುರ ಗ್ರಾಮದ ಬಳಿ ಇರುವ ಇಲ್ ವ್ಯೂ ರೆಸಾರ್ಟ್ ನಲ್ಲಿ ಅನುಮತಿ ಪಡೆಯದೆ ಮಾಗಡಿ ಕ್ಷೇತ್ರದ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ನೇತೃತ್ವದಲ್ಲಿ ನಡೆಯುತ್ತಿದ್ದ ಎಸ್ಸಿ ಎಸ್ಟಿ ಮುಖಂಡರ ಸಭೆಯ ಮೇಲೆ ನೀತಿ ಸಂಹಿತೆ ತಂಡ ದಾಳಿ ಮಾಡಿದೆ.

Mcc team raids on Ramanagara resort

ನೀತಿ ಸಂಹಿತೆ ಜಾರಿ: ಮೊದಲೇ ದಿನವೇ ಕಾರವಾರದಲ್ಲಿ 7 ಲಕ್ಷ ರೂ. ವಶನೀತಿ ಸಂಹಿತೆ ಜಾರಿ: ಮೊದಲೇ ದಿನವೇ ಕಾರವಾರದಲ್ಲಿ 7 ಲಕ್ಷ ರೂ. ವಶ

ಸಭೆ ನಡೆಯುತ್ತಿರುವ ಮಾಹಿತಿಯ ಹಿನ್ನಲೆಯಲ್ಲಿ ರಾಮನಗರ ತಹಶೀಲ್ದರ್ ಮಾರುತಿ ಪ್ರಸನ್ನ ಹಾಗೂ ರಾಮನಗರ ಗ್ರಾಮಾಂತರ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಕಾರ್ಯಕರ್ತರಿಗಾಗಿ ಮಾಡಲಾಗಿದ್ದ ಮಾಂಸದೂಟ, ಅಡುಗೆ ತಯಾರಿಕೆಗೆ ಬಳಸಿದ್ದ ಪಾತ್ರೆಗಳು ವಶಕ್ಕೆ ಪಡೆದಿದ್ದಾರೆ.

Mcc team raids on Ramanagara resort

ಅನುಮತಿ ಪಡೆಯದೆ ಸಭೆ ಆಯೋಜನೆಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಎಂಸಿಸಿ ತಂಡ ರಾಮನಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದೆ.

ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?

English summary
Model code of conduct supervision team raided on Ramanagara hill view resort while EX MLA HC Balakrishna conducted a meeting without permission of election commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X