ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ್ಯಾಯಕ್ಕಾಗಿ ಪ್ರಿಯಕರನ ಮನೆ ಮುಂದೆ ಧರಣಿ ಕುಳಿತ ಗೃಹಿಣಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 10: ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟ ಯುವಕನ ಮನೆಯ ಮುಂದೆ ಗೃಹಿಣಿ ಧರಣಿ ಕುಳಿತಿರುವ ಘಟನೆ ರಾಮನಗರದ ಬಸವನಪುರದಲ್ಲಿ ನಡೆದಿದೆ.

ಬಸವನಪುರದ ಮಧುರ ಗಾರ್ಮೆಂಟ್ಸ್‌ನಲ್ಲಿ ಭರತ್ ಹಾಗೂ ಗೃಹಿಣಿ ನಿರ್ಮಲ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರಿಗೂ ಪರಿಚಯವಾಗಿ ಪ್ರೀತಿ ಬೆಳೆದು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಭರತ್. ಆಕೆಯನ್ನು ಆತ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದೀಗ ಸರ್ಕಾರಿ ಕೆಲಸ ಸಿಕ್ಕಿತು ಅಂತ ಜಾತಿಯ ನೆಪವೊಡ್ಡಿ ಮದುವೆಯಾಗಲ್ಲ ಎಂದು ತಿಳಿಸಿದ್ದಾನೆ.

Married woman sitting in front of a lover's house for justice

ಇದರಿಂದ ಮನನೊಂದ ಗೃಹಿಣಿ ನಿರ್ಮಲ ಯುವಕ ಭರತ್‌ನ ಮನೆಯ ಮುಂದೆ ಮಹಿಳಾ ಸಂಘಟನೆಯ ಕಾರ್ಯಕರ್ತರ ಸಹಾಯದೊಂದಿದೆ ಧರಣಿ ಕುಳಿತಿದ್ದಾರೆ. ಮದುವೆಯಾಗಿದ್ದರೂ ಸಹ ಗಂಡನಿಲ್ಲದಿದ್ದರಿಂದ ಮರುಮದುವೆಯಾಗುತ್ತೇನೆ ಎಂದು ನಂಬಿಸಿ ಹಣವನ್ನು ಕಿತ್ತುಕೊಂಡು, ಲೈಂಗಿಕವಾಗಿ ಬಳಸಿಕೊಂಡು ಇದೀಗ ಮದುವೆಯಾಗಲ್ಲ ಎಂದು ಮೋಸ ಮಾಡಿದ್ದಾನೆ. ನನಗೆ ನ್ಯಾಯ ಬೇಕು ಎಂದು ಯುವಕನ ಮನೆಯ ಮುಂದೆ ಧರಣಿ ಕೂತಿದ್ದಾರೆ.

Married woman sitting in front of a lover's house for justice

ಇನ್ನು ಭರತ್ ಮನೆಯವರು ನಿರ್ಮಲಳ ಧರಣಿಗೆ ತಲೆಕೆಡಿಸಿಕೊಂಡಿಲ್ಲ. ನೀನು ಏನು ಬೇಕಾದರೂ ಮಾಡಿಕೊಳ್ಳು ಎಂದು ಮನೆಯ ಬಾಗಿಲಿಗೆ ಬೀಗ ಜಡಿದು ಹೊರ ಹೋಗಿದ್ದಾರೆ. ಈ ಬಗ್ಗೆ ಪೋಲೀಸರಿಗೆ ದೂರು ನೀಡಲು ಹೋದರೆ ನನ್ನ ದೂರು ಸ್ವೀಕರಿಸುತ್ತಿಲ್ಲ ಎಂದು ನಿರ್ಮಲ ಆರೋಪಿಸಿದ್ದಾರೆ.

English summary
A married woman was sitting in the front of a lover house at Basavanapura in Ramanagara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X