ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ತಿಂಗಳು ತಡವಾಗಿ ಮಾರುಕಟ್ಟೆಗೆ ಬಂದ ರಾಮನಗರ ಮಾವು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾ.3: ಹಣ್ಣುಗಳ ರಾಜ ಎಂಬ ಖ್ಯಾತಿಯನ್ನು ಪಡೆದಿರುವ ಮಾವಿನ ಬೆಳೆ ರೇಷ್ಮೆ ನಗರಿ ರಾಮನಗರ ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ರಾಜ್ಯದಲೇ ಅವಧಿಗೆ ಮೊದಲು ಮಾರುಕಟ್ಟೆ ಪ್ರವೇಶ ಮಾಡುವ ಮಾವು ಎಂದು ಹೆಗ್ಗಳಿಕೆ ಪಡೆದಿರುವ ರಾಮನಗರ ಜಿಲ್ಲೆಯ ಮಾವು ಈ ಬಾರಿ ಒಂದು ತಿಂಗಳು ತಡವಾಗಿ ಮಾರುಕಟ್ಟೆ ಪ್ರವೇಶ ಮಾಡುತ್ತಿದೆ.

ಜಿಲ್ಲೆಯಲ್ಲಿ ಸುಮಾರು 33 ರಿಂದ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೇಸಾಯ ಮಾಡುತ್ತಿದ್ದು, ಪ್ರತಿ ವರ್ಷ ಜಿಲ್ಲೆಯಲ್ಲಿ ಸುಮಾರ 1.5 ರಿಂದ 1.8 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆ ಯಾಗುತ್ತಿದೆ. ಮಾವು ಬೇಸಾಯವನ್ನೇ ನಂಬಿಕೊಂಡು ಸುಮಾರು 30 ಸಾವಿರಕ್ಕೂ ಹೆಚ್ಚು ರೈತ ಕುಟುಂಬ ಜೀವನ ನಡೆಸುತ್ತಿದ್ದಾರೆ.

ರಾಮನಗರ: ಬೊಮ್ಮಾಯಿ ಸರ್ಕಾರದಲ್ಲಿಯಾದರೂ ಮಾವು ಸಂಸ್ಕರಣ ಘಟಕ ಅನುಷ್ಠಾನಗೊಳ್ಳುವುದೇ?ರಾಮನಗರ: ಬೊಮ್ಮಾಯಿ ಸರ್ಕಾರದಲ್ಲಿಯಾದರೂ ಮಾವು ಸಂಸ್ಕರಣ ಘಟಕ ಅನುಷ್ಠಾನಗೊಳ್ಳುವುದೇ?

ಈ ಬಾರಿ ರಾಮನಗರ ಜಿಲ್ಲೆಯ ಮಾವು ಹಾಗೂ ಕೋಲಾರ ಜಿಲ್ಲೆಯ ಮಾವು ಒಂದೇ ಸಮಯದಲ್ಲಿ ಮಾರುಕಟ್ಟೆ ಪ್ರವೇಶ ಮಾಡುತ್ತಿರುವ ಹಿನ್ನಲೆಯಲ್ಲಿ ಮಾವಿನ‌ ಪಸಲು ಹೆಚ್ಚಾಗಿ, ಮಾವಿನ ಧಾರಣೆ ಕುಸಿಯುವ ಆತಂಕ ರೈತರಲ್ಲಿ ಮನೆ ಮಾಡಿದೆ.

Ramanagara Mango came to market a month later

‌‌ಪ್ರತಿ ವರ್ಷ ಏಪ್ರಿಲ್‌ ಹೊತ್ತಿಗೆ ರಾಮನಗರ ಮಾವು

ಮಾರುಕಟ್ಟೆ ಪ್ರವೇಶಿಸುತ್ತಿತ್ತು. ಆದರೆ, ಡಿಸೆಂಬರ್‌ 2ನೇ ವಾರದವರೆಗೂ ಸುರಿದ ಮಳೆಯಿಂದಾಗಿ ಹೂ ಬಿಡುವುದು ತಡವಾಗಿದೆ. ಈ ಬಾರಿ ಉತ್ತಮ ಫಸಲು ನಿರೀಕ್ಷೆ ಇದ್ದು, ಮೇ ಅಂತ್ಯದ ವೇಳೆಗೆ ಜಿಲ್ಲೆಯ ಮಾವು ಮಾರುಕಟ್ಟೆ ಪ್ರವೇಶ ಮಾಡಲಿದೆ.

ಮಾವಿನ ಬೆಳೆಗೆ ಮಾರಕವಾದ ಶೀತ ವಾತಾವರಣ; ರೈತರಲ್ಲಿ ಚಿಂತೆಮಾವಿನ ಬೆಳೆಗೆ ಮಾರಕವಾದ ಶೀತ ವಾತಾವರಣ; ರೈತರಲ್ಲಿ ಚಿಂತೆ

ಇದೇ ವೇಳೆಗೆ ಕೋಲಾರ ಜಿಲ್ಲೆಯಿಂದಲೂ ಮಾವು ಮಾರುಕಟ್ಟೆ ಪ್ರವೇಶಿಸುವುದರಿಂದ ಬೆಲೆ ಕುಸಿತಗೊಳ್ಳುವ ಭೀತಿ ರೈತರಲ್ಲಿ ಮೂಡಿದೆ.ಕಳೆದ ವರ್ಷ ಪ್ರತಿ ಕೆಜಿ ಮಾವು 200 ರೂ.ಗಳವರೆಗೂ ಮಾರಾಟಗೊಂಡಿತ್ತು. ಅಲ್ಲದೇ ಕಳೆದ ಎರಡು ವರ್ಷಗಳ ಕೊರೋನಾ ಆರ್ಭಟದಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ರೈತನಿಗೆ ಈ ಬಾರಿಯು ನಷ್ಟ ತಪ್ಪಿದಲ್ಲ.

ಅಕಾಲಿಕ ಮಳೆ; ಮಾವು ಫಸಲು ಕಡಿಮೆ ಸಾಧ್ಯತೆ, ರೈತರಿಗೆ ಸಲಹೆಗಳುಅಕಾಲಿಕ ಮಳೆ; ಮಾವು ಫಸಲು ಕಡಿಮೆ ಸಾಧ್ಯತೆ, ರೈತರಿಗೆ ಸಲಹೆಗಳು

ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಉದ್ದೇಶಿತ ಮಾವು ಸಂಸ್ಕರಣ ಘಟಕ ಅನುಷ್ಠಾನಗೊಂಡಿದ್ದರೆ ಜಿಲ್ಲೆಯ ಮಾವು ಬೆಳೆಯನ್ನು ಸಂಸ್ಕರಣೆ ಮಾಡಿ ಉತ್ತಮ ಧಾರಣೆ ಬಂದ ನಂತರ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿತ್ತು ಎಂಬುದು ಮಾವು ಬೆಳೆಗಾರರ ಅಳಲು.

Recommended Video

ಸಮುದ್ರಕ್ಕೆ ಹರಿದುಕೊಂಡು ಹೋಗುವ ನೀರನ್ನ ಒಳ್ಳೆತನಕ್ಕೆ ಬಳಸಿಕೊಳ್ಳಬೇಕು! | Oneindia Kannada

English summary
The mango of Ramanagar district, which boasted as a marketable mango before the time. But this year Ramanagara Mango came to market a month later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X