ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಯಾತ್ರಾರ್ಥಿಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲು ಏಜೆನ್ಸಿಯವರೇ ಕಾರಣ'

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜುಲೈ.03: ಮಾನಸ ಸರೋವರ ಯಾತ್ರೆಗೆ ಹೋಗಿದ್ದ ಯಾತ್ರಾರ್ಥಿಗಳು ಹವಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿರುವ ಘಟನೆ ನೇಪಾಳದ ಸಿಕೋಟ್ ನಲ್ಲಿ ನಡೆದಿದ್ದು, ರಾಮನಗರ, ಮಂಡ್ಯ, ಮೈಸೂರಿನ 250 ಮಂದಿ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಚನ್ನಪಟ್ಟಣದ ಕೋಟೆ ಬಡಾವಣೆಯ ಶಿವರಾಮು, ರಾಂಪುರ ಗ್ರಾಮದ ಮಲ್ಲೇಶ್, ಬೇವೂರು ಗ್ರಾಮದ ರಾಮಕೃಷ್ಣ, ನಾಗವಾರ ಗ್ರಾಮದ ರಂಗಸ್ವಾಮಿ ಕಳೆದ ತಿಂಗಳು 21ರಂದು ಯಾತ್ರೆಗೆ ತೆರಳಿದ್ದರು.

ಕರ್ನಾಟಕದ ಮಾನಸ ಸರೋವರ ಯಾತ್ರಿಕರು ಸುರಕ್ಷಿತ ಕರ್ನಾಟಕದ ಮಾನಸ ಸರೋವರ ಯಾತ್ರಿಕರು ಸುರಕ್ಷಿತ

ಮೂರು ದಿನಗಳ ಹಿಂದೆಯೇ ಬೇವೂರಿನ ರಾಮಕೃಷ್ಣ ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲವರು ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಾಸ್ಸಾಗಿದ್ದರು. ಇದೀಗ ಚನ್ನಪಟ್ಟಣ ಮೂಲದ ಮೂರು ಜನ ಯಾತ್ರಾರ್ಥಿಗಳು ಸಿಕೋಟ್ ನಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.

Manasa Sarovara Pilgrims are still in trouble because of the agency

275 ಜನ ಯಾತ್ರಾರ್ಥಿಗಳು 40 ಜನರಿರುವ ಹೋಟೆಲ್ ನಲ್ಲಿ ವಾಸ್ತವ ಹೂಡಿದ್ದು, ಏಜೆನ್ಸಿ ಅವರ ಬೇಜಾವಬ್ದಾರಿತನದಿಂದ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರಂತೆ. ಹೌದು. ಯಾತ್ರೆಯನ್ನು ಅರ್ಧಕ್ಕೆ ಮೊಟುಕುಗಳಿಸಿ ವಾಪಾಸ್ಸಾದ ರಾಮಕೃಷ್ಣ ಹೇಳುವಂತೆ, ಏಜೆನ್ಸಿಯವರು ಯಾತ್ರಾರ್ಥಿಗಳು ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ.

ಸರಿಯಾದ ಊಟವಿಲ್ಲದೆ ಸಂಕಷ್ಟ ಅನುಭವಿಸಿದೆವು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Manasa Sarovara Pilgrims are still in trouble because of the agency

ಇನ್ನು ಯಾತ್ರಾರ್ಥಿಗಳ ಸಂಬಂಧಿಕರು ಕಳೆದ‌ ಮೂರು ದಿನಗಳ ಹಿಂದೆ ಫೋನ್ ಮಾಡಿ ಮಾತನಾಡಿದ್ದು ಬಿಟ್ಟರೆ, ಮತ್ತೆ ಸಂರ್ಪಕಕ್ಕೆ ಸಿಗುತ್ತಿಲ್ಲ, ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಆತಂಕಕ್ಕೆ ಸಂಬಂಧಿಕರು ಒಳಗಾಗಿದ್ದು, ಸುದ್ದಿಗೋಷ್ಠಿ ನಡೆಸಿ ಸರ್ಕಾರ ಯಾತ್ರಾರ್ಥಿಗಳ ರಕ್ಷಣೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

English summary
Ramakrishna Said Manasa Sarovara Pilgrims are still in trouble because of the agency. Agency do not respond properly to the pilgrims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X