ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಬಂಧಿ ಕೊಂದು ಆತ್ಮಹತ್ಯೆಯ ಕಥೆ ಹೇಳಿದ್ದ ಸೋದರಮಾವ!

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 07: ವ್ಯಕ್ತಿಯನ್ನು ಸಂಬಂಧಿಯೇ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ. ಪ್ರಕರಣದ ತನಿಖೆ ಕೈಗೊಂಡ ರಾಮನಗರ ಜಿಲ್ಲೆಯ ಹಾರೋಹಳ್ಳಿ ಪೋಲೀಸರು ಮೃತಪಟ್ಟ ವ್ಯಕ್ತಿಯ ಸೋದರಮಾವ, ಸ್ನೇಹಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2020ರ ಅಕ್ಟೋಬರ್ 30ರಂದು ಮಹದೇವ್ ಎಂಬುವವರ ಶವ ಕೊಳೆತ ಸ್ಥಿತಿಯಲ್ಲಿ ಮರಳವಾಡಿ ಹೋಬಳಿಯ ಸುವರ್ಣಮುಖಿ ಹೊಳೆಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವ್ ಸೋದರಮಾವ ಚಿಕ್ಕತಿಮ್ಮಯ್ಯ ಹಾಗೂ ಸ್ನೇಹಿತ ರಮೇಶ್ ಎಂಬುವವರನ್ನು ಬಂಧಿಸಿದ್ದಾರೆ.

ಬಳ್ಳಾರಿ; ಉಪ ವಲಯ ಅರಣ್ಯಾಧಿಕಾರಿ ಆತ್ಮಹತ್ಯೆ ಬಳ್ಳಾರಿ; ಉಪ ವಲಯ ಅರಣ್ಯಾಧಿಕಾರಿ ಆತ್ಮಹತ್ಯೆ

ಪ್ರಕರಣದ ಹಿನ್ನಲೆ : ಕೊಲೆಯಾದ ಮಹದೇವ್ ಮೂಲತಃ ಆನೇಕಲ್ ತಾಲೂಕಿನವರು. ಅರಣ್ಯ ಇಲಾಖೆಯಲ್ಲಿ ವಾಚರ್ ಕೆಲಸ ಮಾಡುತ್ತಿದ್ದರು. ಹಾರೋಹಳ್ಳಿಯಲ್ಲಿ ಸೋದರಮಾವ ಚಿಕ್ಕತಿಮ್ಮಯ್ಯ ಮನೆಯಲ್ಲಿ ವಾಸವಾಗಿದ್ದ. ಚಿಕ್ಕತಿಮ್ಮಯ್ಯನ ಪತ್ನಿ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದ.

ದುಬಾರಿ ವಿದ್ಯುತ್ ಬಿಲ್: ಪ್ರಧಾನಿ ಮೋದಿಗೆ ಪತ್ರ ಬರೆದು ರೈತ ಆತ್ಮಹತ್ಯೆದುಬಾರಿ ವಿದ್ಯುತ್ ಬಿಲ್: ಪ್ರಧಾನಿ ಮೋದಿಗೆ ಪತ್ರ ಬರೆದು ರೈತ ಆತ್ಮಹತ್ಯೆ

Man Murder Case Police Arrested Reative

ಮಹದೇವ್ ಅಕ್ರಮ ಸಂಬಂಧ ಇಟ್ಟುಕೊಂಡಿರುವ ವಿಚಾರ ಮಹದೇವ್‌ ಸ್ನೇಹಿತ ಫಾರೆಸ್ಟ್ ವಾಚರ್ ರಮೇಶ್ ತಿಳಿದಿತ್ತು. ಮಹದೇವ್‌ನನ್ನು ರಮೇಶ್ ಮೂಲಕ ಕರೆಸಿಕೊಂಡ ಚಿಕ್ಕತಿಮ್ಮಯ್ಯ ತೊಗರಿ ಗಿಡಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಬೆರೆಸಿದ ಮದ್ಯ ಕುಡಿಸಿದ್ದಾರೆ.

ಡಿವೈಎಸ್ಪಿ ಹನುಮಂತಪ್ಪ ಆತ್ಮಹತ್ಯೆ ಹಿಂದಿನ ರಹಸ್ಯ ಬಯಲು!ಡಿವೈಎಸ್ಪಿ ಹನುಮಂತಪ್ಪ ಆತ್ಮಹತ್ಯೆ ಹಿಂದಿನ ರಹಸ್ಯ ಬಯಲು!

ಮದ್ಯ ಕಡಿದು ಪ್ರಜ್ಞೆ ತಪ್ಪಿದ ಮಹದೇವ್‌ನನ್ನು ಸೇತುವೆ ಮೇಲಿನಿಂದ ಸುವರ್ಣಮುಖಿ ನದಿಗೆ ತಳ್ಳಿ ಕೊಲೆ ಮಾಡಿದ್ದರು. ಆದರೆ, ಮಹದೇವ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಿದ್ದರು. ಆತ್ಮಹತ್ಯೆ ಎಂದು ಮುಚ್ಚಿಹೋಗಿದ್ದ ಪ್ರಕರಣವನ್ನು ಎರಡು ತಿಂಗಳ ನಂತರ ಪೊಲೀಸರು ತಾರ್ಕಿಕ ಅಂತ್ಯಕ್ಕೆ ತಂದಿದ್ದಾರೆ.

English summary
Harohalli police arrested man for murder relative and said that it is suicide. Mahadev found murder on October 30, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X