• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಿ: ಅಬ್ದುಲ್ ಅಜೀಮ್

By ರಾಮನಗರ ಪ್ರತಿನಿಧಿ
|

ರಾಮನಗರ, ಫೆಬ್ರವರಿ 24: ರಾಮನ ಹೆಸರು ಹೊಂದಿರುವ ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ಅವರು ತಿಳಿಸಿದರು.

ಬುಧವಾರ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ರಾಮನಗರ ನಗರ ಪ್ರದೇಶದಲ್ಲಿ ಐಜೂರು ಭಾಗದಲ್ಲಿರುವ ಬಡಾವಣೆಗಳು ಮೂಲಭೂತ ಸೌಕರ್ಯಗಳನ್ನು ಹೊಂದಿದೆ ಹಾಗೂ ವ್ಯವಸ್ಥಿತವಾಗಿ ನಿರ್ಮಾಣವಾಗಿದೆ ಎಂದರು.

ಗಣಿ ಸ್ಪೋಟಕ್ಕೆ ಸರ್ಕಾರದ ಬೇಜಾಬ್ದಾರಿ, ಅಧಿಕಾರಿಗಳ ಪ್ರೋತ್ಸಾಹ ಕಾರಣ: ಮಾಜಿ ಸಿಎಂ ಎಚ್‌ಡಿಕೆ

ಈ ವರ್ಷ ರಾಮನ ವರ್ಷ ಅದಕ್ಕಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು.

ರಾಮನಗರದ ಯಾರಬ್ ನಗರ, ಗೌಸಿಯಾ ನಗರ, ಟಿಪ್ಪು ನಗರ ಮುಂತಾದ ಬಡಾವಣೆಗಳಲ್ಲಿ ಸರಿಯಾದ ಸೌಕರ್ಯಗಳಿಲ್ಲ. ಜನರಿಗೆ ಮೊದಲು ಕುಡಿಯುವ ನೀರು ಹಾಗೂ ಶುದ್ದ ಗಾಳಿ ಒದಗಿಸಿಕೊಡಬೇಕು. ಈ ಬಡಾವಣೆಗಳ ಮನೆಯ ಮುಂಭಾಗ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಗಿಡ ನೆಡುವ ಅಭಿಯಾನ ನಡೆಸಿ, ಮನೆಯವರಿಗೆ ಗಿಡಗಳನ್ನು ಪೋಷಿಸುವಂತೆ ತಿಳಿಸಿ ಎಂದರು.

ಬಡಾವಣೆಗಳಿಗೆ ನೀರು ಸರಬರಾಜು ಮಾಡುವ ಪೈಪ್ ಹಾಗೂ ಒಳಚರಂಡಿ ಪೈಪ್ ಗಳನ್ನು ಪರಿಶೀಲಿಸಿ, ತುಂಬಾ ಹಳೆಯದಾಗಿ ರಂಧ್ರ ಉಂಟಾದರೆ ಕುಡಿಯುವ ನೀರು ಒಳಚರಂಡಿ ನೀರಿನೊಂದಿಗೆ ಮಿಶ್ರಣವಾಗಿ ರೋಗಗಳು ಉಂಟಾಗುತ್ತದೆ ಎಂದು ತಿಳಿಸಿದರು.

ರಾಮನಗರ ತುಂಬ ಕಡೆ ರಸ್ತೆ ಕಿರಿದಾಗಿದೆ, ಇಲ್ಲಿ ವಾಹನ ನಿಲುಗಡೆ ಹಾಗೂ ಸಂಚಾರದ ಬಗ್ಗೆ ವ್ಯವಸ್ಥೆ ಮಾಡಿ. ಜಿಲ್ಲೆಯಲ್ಲಿ ಯಾವುದೇ ಮತೀಯ ಕಲಹಗಳು ಇಲ್ಲ. ಆಗಾಗ ಶಾಂತಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಅವರು ಮಾಹಿತಿ ನೀಡಿದ್ದಾರೆ.

ಮತೀಯವಾಗಿ ಸೂಕ್ಷ್ಮವಾಗಿರುವ ಪ್ರದೇಶದಲ್ಲಿ ಶಾಂತಿ ಸಮಿತಿ ರಚಿಸಿ ಸಮಿತಿಗೆ ಮತೀಯ ಕಲಹಗಳನ್ನು ತಡೆಯುವ ಶಕ್ತಿ ಇರುವ ಪ್ರಭಾವಿ ವ್ಯಕ್ತಿಗಳನ್ನು ನೇಮಕ ಮಾಡಿ ಎಂದು ಸಲಹೆ ನೀಡಿದರು.

ರಾಮನಗರ ಜಿಲ್ಲೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಇದೆ. ಇದನ್ನು ಭರ್ತಿ ಮಾಡುವ ಬಗ್ಗೆ ಚರ್ಚಿಸಲಾಗುವುದು, ಅಧಿಕಾರಿಗಳು ಜನಸ್ನೇಹಿ ಆಡಳಿತ ನೀಡಿ ಎಂದರು.

   40 ಲಕ್ಷ ಟ್ರ್ಯಾಕ್ಟರ್ ಗಳೊಂದಿಗೆ ಸಂಸತ್ ಮುತ್ತಿಗೆ ಎಚ್ಚರಿಕೆ ನೀಡಿದ ರಾಕೇಶ್ ಟಿಕಾಯತ್ | Oneindia Kannada

   ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಅಪರ ಜಿಲ್ಲಾಧಿಕಾರಿ ಜವರೇಗೌಡ.ಟಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

   English summary
   Ramanagar district should be made a model district, said Abdul Azeem, Chairman of Minority Welfare Commission.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X