ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ: ಶಿವರಾತ್ರಿಯಂದೇ ಪ್ರತಿಷ್ಠಾಪನೆಗೊಂಡ 30 ಅಡಿ ಎತ್ತರದ ಬೃಹತ್ ಶಿವಲಿಂಗ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 1: ನಾಡಿನೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ ಮನೆಮಾಡಿದ್ದು, ಶಿವನ ದೇವಸ್ಥಾನಗಳಿಗೆ ಭಕ್ತಗಣ ಸಾಗರೋಪಾದಿಯಲ್ಲಿ ತೆರಳಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿದೆ. ರಾಮನಗರ ಜಿಲ್ಲೆಯಲ್ಲಿ ಮಹಾಶಿವರಾತ್ರಿ ದಿನದಂದೇ ಪ್ರತಿಷ್ಠಾಪನೆಗೊಂಡಿರುವ 30 ಅಡಿ ಎತ್ತರದ ಬೃಹತ್ ಶಿವಲಿಂಗ ಶಿವ ಭಕ್ತರನ್ನು ಸೆಳೆಯುತ್ತಿದೆ.

ರೇಷ್ಮೆನಗರಿ ರಾಮನಗರ ಜಿಲ್ಲೆಯ ವಿವಿಧ ಶಿವ ಮಂದಿರಗಳಲ್ಲಿ ಶಿವರಾತ್ರಿ ಉಪಾಸನೆ ನಡೆಯುತ್ತಿದ್ದು, ಭಕ್ತರು ಮನೆ ಮನೆಗಳಲ್ಲೂ ಶಿವೋಪಾಸನೆ ಮತ್ತು ಜಾಗರಣೆ ನಡೆಸಲಿದ್ದಾರೆ. ಇನ್ನು ಚನ್ನಪಟ್ಟಣ ತಾಲೂಕಿನ ಹನಿಯೂರು ಗ್ರಾಮದ ಬಳಿ ಧಾರ್ಮಿಕ ಕ್ಷೇತ್ರದಲ್ಲಿ ಶಿವರಾತ್ರಿಯಂದೇ 30 ಅಡಿ ಎತ್ತರದ ಶಿವಲಿಂಗ ಲೋಕಾರ್ಪಣೆಗೊಂಡಿದೆ.

ಮೈಸೂರು: ವರ್ಷಕ್ಕೊಮ್ಮೆ ಶಿವನಿಗೆ ಚಿನ್ನದ ಕೊಳಗ ತೊಡಿಸುವ ವಿಶೇಷವೇನು?ಮೈಸೂರು: ವರ್ಷಕ್ಕೊಮ್ಮೆ ಶಿವನಿಗೆ ಚಿನ್ನದ ಕೊಳಗ ತೊಡಿಸುವ ವಿಶೇಷವೇನು?

ಚನ್ನಪಟ್ಟಣ-ಸಾತನೂರು ರಾಜ್ಯ ಹೆದ್ದಾರಿಯಲ್ಲಿ ಹನಿಯೂರು ಹಾಗೂ ರಾಮೇಗೌಡನದೊಡ್ಡಿ ಗ್ರಾಮಗಳ ಮಧ್ಯದಲ್ಲಿರುವ ಪುರಾಣ ಪ್ರಸಿದ್ಧ ಸಿದ್ದರಬೆಟ್ಟದ ತಪ್ಪಲಿಗೆ ಹತ್ತಿರವಿರುವ ಚನ್ನಪ್ಪ ಸ್ವಾಮಿ ಮಠದ ಆವರಣದಲ್ಲಿ ಬೃಹತ್ ಶಿವಲಿಂಗ ನಿರ್ಮಾಣವಾಗಿದೆ.

Maha Shivaratri Special: 30 Feet Tall Shivalinga Statue Installed In Ramanagara District

ಸಂಪೂರ್ಣ ಸಿಮೆಂಟ್‌ನಿಂದ ನಿರ್ಮಾಣವಾಗಿರುವ ಶಿವಲಿಂಗ ಸುಮಾರು 22 ಅಡಿ ಇದ್ದು, ಕೆಳಬಾಗದಲ್ಲಿ 8 ಅಡಿಯ ಅಡಿಪಾಯ ಹಾಕಲಾಗಿದೆ. ಅಡಿಪಾಯದಲ್ಲಿ ಆತ್ಮಲಿಂಗ ಪ್ರತಿಷ್ಠಾನೆ ಮಾಡಿದ್ದಾರೆ. ಸದ್ಯಕ್ಕೆ ಕ್ಷೇತ್ರಕ್ಕೆ ಶನಿಯೂರು ಎಂದು ಹೆಸರಿಸಲಾಗಿದೆ. ಬೃಹತ್ ಲಿಂಗಕ್ಕೆ "ಸಿದ್ದ ಬ್ರಹ್ಮ ಲಿಂಗೇಶ್ವರ' ಎಂದು ಹೆಸರಿಸಲಾಗಿದೆ.

ಶ್ರೀ ಶನೇಶ್ವರ ಕ್ಷೇತ್ರದ ಟ್ರಸ್ಟಿ ಡಾ. ಶಿವಕುಮಾರ್ ಸ್ವಾಮಿ, ವೃಥ್ವಿಕ ಸಂಪತ್ ನೇತೃತ್ವದಲ್ಲಿ 5 ಮಂದಿ ಪುರೋಹಿತರಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಕಳಶ ಸ್ಥಾಪನೆ, ಪ್ರಾಣ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಗಣ ಹೋಮ, ರುದ್ರ ಹೋಮ, ನಂದಿ ಪೂಜೆ ಸೇರಿದಂತೆ ವಿವಿಧ ಹೋಮ ಹವನಗಳು ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಿ ಬೃಹತ್ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಭಕ್ತಗಣ 30 ಅಡಿ ಎತ್ತರದ ಶಿವಲಿಂಗವನ್ನು ಕಣ್ತುಂಬಿಕೊಂಡರು.

Maha Shivaratri Special: 30 Feet Tall Shivalinga Statue Installed In Ramanagara District

ರಾಮನಗರ ಜಿಲ್ಲೆಯಲ್ಲೇ ಅತಿ ಎತ್ತರದ ಶಿವಲಿಂಗ ಎಂಬ ಖ್ಯಾತಿಗೆ ಪಾತ್ರವಾದ "ಸಿದ್ದ ಬ್ರಹ್ಮ ಲಿಂಗೇಶ್ವರ' ಲಿಂಗಕ್ಕೆ ಶಿವರಾತ್ರಿ ಹಬ್ಬದ ಜಾಗರಣೆ ಹಿನ್ನಲೆಯಲ್ಲಿ ಎರಡು ದಿನ ನಿರಂತವಾಗಿ ಹಾಲು, ಗಂಗೆ ಮತ್ತು ಕೋಟಿ ಬಿಲ್ವಾರ್ಚನೆ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ.

ಮಂಗಳವಾರ ಬೆಳಗ್ಗೆಯಿಂದ ಬುಧವಾರ ಬೆಳಗ್ಗೆ 10 ಗಂಟೆಯವರೆಗೆ ಭಕ್ತಾಧಿಗಳಿಗೆ ತಾವೇ ಸ್ವತಃ "ಸಿದ್ದ ಬ್ರಹ್ಮ ಲಿಂಗೇಶ್ವರ' ಲಿಂಗಕ್ಕೆ ಹಾಲು, ಗಂಗೆ ಮತ್ತು ಬಿಲ್ವಾರ್ಚನೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಎರಡು ದಿನಗಳು ಕ್ಷೇತ್ರದಲ್ಲಿ ನಿರಂತರ ಅನ್ನದಾಸೋಹವಿದ್ದು, ರಾತ್ರಿ ಜಾಗರಾಣೆಗಾಗಿ ಭರತನಾಟ್ಯ ಮತ್ತು ರಾಜ ಸತ್ಯವೃತ ಅಥವಾ ಶನಿಪ್ರಭಾವ ಎಂಬ ನಾಟಕವನ್ನು ಪ್ರಸ್ತುತಪಡಿಸಲಾಗುತ್ತಿದೆ.

Maha Shivaratri Special: 30 Feet Tall Shivalinga Statue Installed In Ramanagara District

ಕ್ಷೇತ್ರದ ಹಿನ್ನೆಲೆ
ಪಾಂಡವರು ವನವಾಸಕ್ಕೆಂದು ಈ ಸ್ಥಳಕ್ಕೆ ಬಂದ ಸಂದರ್ಭದಲ್ಲಿ ಶ್ರೀಕೃಷ್ಣನ ಬೆಂಗಾವಲು ಇದ್ದರೂ, ಹಣ್ಣು ಆಹಾರ ಸಿಗದೇ ಪರಿತಪಿಸಿ, ಪ್ರಾಣ ತ್ಯಾಗ ಮಾಡಲು ಮುಂದಾಗುತ್ತಾರೆ. ಆಗ ಇಲ್ಲಿಗೆ ಶನಿ ಮಹಾತ್ಮ ಆಂಜನೇಯನ ಮೂಲಕ ಪಾಂಡವರಿಗೆ ಹಣ್ಣು, ಆಹಾರ ಸೇರಿದಂತೆ ಅವರ ರಕ್ಷಣೆಗೆ ನಿಲ್ಲುವಂತೆ ಸಿದ್ದ ಋಷಿಗಳನ್ನು ಕಳುಹಿಸಿದ್ದರು ಎಂಬ ಪ್ರತೀತಿ ಇದೆ.

ಪುರಾಣ ಕಥೆಗೆ ಸಾಕ್ಷಿಯಾಗಿ ಸಮೀಪದಲ್ಲೇ ಸಿದ್ದರಬೆಟ್ಟ ಇದ್ದು, ಅಲ್ಲಿ ಸಿದ್ದ ಋಷಿಗಳ ಗುಹೆ ಇದೆ. ಈಗಲೂ ವಿಶೇಷ ದಿನಗಳಂದು ಸಿದ್ದರಬೆಟ್ಟದ ಗುಹೆಯಿಂದ ಮಂಗಳ ವಾದ್ಯಗಳ ಶಬ್ದ ಕೇಳಿಸುತ್ತದೆ ಎನ್ನಲಾಗುತ್ತದೆ. ಹಾಗಾಗಿ ಇಲ್ಲಿ ಪ್ರತಿ ವರ್ಷ ಸಿದ್ದ ಖುಷಿಗಳಿಗೆ ಛತ್ರ ಚಾಮರಗಳ ಪೂಜೆ ಸಲ್ಲಿಸಲಾಗುತ್ತಿದೆ‌.

ಪುರಾಣ ಕಥೆಯ ಹಿನ್ನಲೆ ಇರುವ ಕ್ಷೇತ್ರದಲ್ಲಿ ಆಂಜನೇಯ, ಛಾಯದೇವಿ ಸೇರಿದಂತೆ ಹಲವು ದೇವಾಲಯಗಳನ್ನು ನಿರ್ಮಿಸಲಾಗುತ್ತಿದೆ. ಇನ್ನು ಹಲವು ವಿಗ್ರಹಗಳನ್ನು ಭಕ್ತರ ನೆರವಿನೊಂದಿಗೆ ನಿರ್ಮಾಣ ಮಾಡಿ ಜಿಲ್ಲೆಯಲ್ಲಿ ಪ್ರಮುಖ ಧಾರ್ಮಿಕ‌ ಕೇಂದ್ರ ಮಾಡಲಾಗುವುದೆಂದು ಕ್ಷೇತ್ರದ ಧರ್ಮದರ್ಶಿ ನಾಗೇಶ್ ಬೈರಾಪಟ್ಟಣ ಮಾಹಿತಿ ನೀಡಿದರು.

English summary
Maha Shivaratri Special: The huge Shivalinga Statue is built on the premises of Channappa Swamy Math, near the Channapatna-Satanur State Highway In Ramanagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X