ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀಗ ಹಾಕಿರುತ್ತಿದ್ದ ಮನೆಗೆ ಕನ್ನ; 25 ಲಕ್ಷ ಮೌಲ್ಯದ ಚಿನ್ನಾಭರಣ ವಶ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂನ್ 27: ಬೀಗ ಹಾಕಿದ ಮನೆಗಳನ್ನು ನೋಡಿಕೊಂಡು ಕಳ್ಳತನ ಎಸಗುತ್ತಿದ್ದ ಕಳ್ಳನನ್ನು ಬಂಧಿಸಿ, 25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಪೊಲೀಸರು ಯಶಸ್ವಿಯಾಗಿದ್ದಾರೆ.

Recommended Video

Community spreading started in India ? The stats are scary | Oneindia Kannada

ಉದಯ್ ಕುಮಾರ್ ಅಲಿಯಾಸ್ ಅಶೋಕ ಬಂಧಿತ ಆರೋಪಿ. ಈತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವನಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 18 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಬಂಧಿತನಿಂದ 560 ಗ್ರಾಂ ಚಿನ್ನಾಭರಣಗಳು, 3 ಕೆ.ಜಿ ಬೆಳ್ಳಿ ಸಾಮಗ್ರಿಗಳು, ಒಂದು ಕಾರು, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೈಸೂರು: ಲಾರಿ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನಮೈಸೂರು: ಲಾರಿ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

ಆರೋಪಿ ಮಾರ್ಚ್ ತಿಂಗಳಲ್ಲಿ ಮಾಗಡಿಯ ರೇಣುಕಮ್ಮ ಅವರ ಮನೆ ಬೀಗ ಒಡೆದು 1,20,000 ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿದ್ದ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗೆ ಇಳಿದ ಸಿಪಿಐ ಮಂಜುನಾಥ್ ಹಾಗೂ ಅವರ ತಂಡ ಆರೋಪಿ ಉದಯ್‍ ಕುಮಾರನನ್ನು ಬಂಧಿಸಿ ತನಿಖೆ ನಡೆಸಿದಾಗ ಇನ್ನಷ್ಟು ಕಳ್ಳತನದ ಪ್ರಕರಣಗಳು ಹೊರ ಬಂದಿವೆ.

Magadi Police Arrested Thief And Seized 25 lakh Worth Jewelery

ಮಾಗಡಿ ಸರಹದ್ದಿನಲ್ಲಿ 2, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 15 ಮನೆ ಕಳ್ಳತನದ ಪ್ರಕರಣ ಹಾಗೂ ತುಮಕೂರು ಜಿಲ್ಲೆಯ 9 ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಯು ಈ ಹಿಂದೆ ತುಮಕೂರು ಜಿಲ್ಲೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಬಂಧನವಾಗಿ ಕಾರಾಗೃಹದಲ್ಲಿದ್ದು, 2019ರಲ್ಲಿ ಜಾಮೀನು ಪಡೆದು ಹೊರಬಂದಿದ್ದ. ಆನಂತರವೂ ತನ್ನ ಹಳೇ ಚಾಳಿಯನ್ನು ಬಿಟ್ಟಿರಲಿಲ್ಲ. ಈ ಆರೋಪಿ ಹಗಲು ಸಮಯದಲ್ಲೇ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ.

ಕಳ್ಳತನದಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

English summary
Ramanagar magadi police have arrested thief and seized 25 lakh worth jewelery,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X