• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ವಯಂ ಕ್ವಾರಂಟೈನ್ ಗೆ ಒಳಗಾದ ಮಾಗಡಿ ಶಾಸಕ ಎ.ಮಂಜುನಾಥ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜುಲೈ 1: ಕೊರೊನಾ ವೈರಸ್ ಮಹಾಮಾರಿ ಎಲ್ಲೆಲ್ಲೂ ರಣಕೇಕೆ ಹಾಕುತ್ತಿದ್ದು, ತಮ್ಮ ಆಪ್ತ ಸಹಾಯಕ ಮತ್ತು ಪಕ್ಷದ ಹಿರಿಯ ಮುಖಂಡರೂಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಾಗಡಿಯ ಶಾಸಕ ಎ.ಮಂಜುನಾಥ್ ಸ್ವಯಂ ಕ್ಚಾರಂಟೈನ್ ಗೆ ಒಳಗಾಗಿದ್ದಾರೆ.

   Zameer Ahmed Khan : ವಿವಾದಕ್ಕೆ ಕಾರಣವಾಯ್ತು ಶಾಸಕ ಜಮೀರ್ ಅಹಮ್ಮದ್ ಖಾನ್ 'ಪಾದಪೂಜೆ'! | Oneindia Kannada

   ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಎ.ಮಂಜುನಾಥ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ತಮ್ಮ ಆತ್ಮೀಯ ಮುಖಂಡರು ಮತ್ತು ನಮ್ಮ ಆಪ್ತ ಸಹಾಯಕ ಇಬ್ಬರಿಗೂ ಕೋವಿಡ್-19 ಸೋಂಕು ದೃಡಪಟ್ಟಿದೆ. ಇಬ್ಬರೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅತೀ ಶೀಘ್ರವಾಗಿ ಗುಣಮುಖರಾಗುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

   ರಾಮನಗರ; ಡಿಸಿಎಂಗೆ ಭದ್ರತೆ ನೀಡಿದ್ದ ಇನ್ಸ್‌ ಪೆಕ್ಟರ್ ಗೆ ಕೊರೊನಾ ಸೋಂಕುರಾಮನಗರ; ಡಿಸಿಎಂಗೆ ಭದ್ರತೆ ನೀಡಿದ್ದ ಇನ್ಸ್‌ ಪೆಕ್ಟರ್ ಗೆ ಕೊರೊನಾ ಸೋಂಕು

   ನಾನು ಇವರಿಬ್ಬರ ಪ್ರಾಥಮಿಕ ಸಂಪರ್ಕದಲ್ಲಿ ಹಲವು ಸಮಯ ಇರುವುದರಿಂದ ನಾನೇ ಖುದ್ದಾಗಿ "ಸೆಲ್ಫ್ ಕ್ವಾರಂಟೈನ್" ಆಗುತ್ತಿದ್ದೇನೆ. ನಾನು ಕೂಡ ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದು, ವರದಿಯ ನಿರೀಕ್ಷೆಯಲ್ಲಿದ್ದೇನೆ. ನಾನು‌ ಕ್ಷೇಮವಾಗಿದ್ದೇನೆ. ಆದರೆ ಮುಂಜಾಗ್ರತಾ ಕ್ರಮವಾಗಿ ಸರ್ಕಾರದ ಕ್ವಾರಂಟೈನ್ ನಿಯಮವನ್ನು ಪಾಲಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

   ""ಮಾಗಡಿಯ ಸಹೃದಯಿ ಜನತೆ, ಕಾರ್ಯಕರ್ತರು ಮತ್ತು ಮುಖಂಡರನ್ನು ಈ ಸಂದರ್ಭದಲ್ಲಿ ನೇರವಾಗಿ ಭೇಟಿ ಮಾಡಲು ಸಾಧ್ಯವಾಗುವುದಿಲ್ಲವೆಂದು ತಮ್ಮೆಲ್ಲರಿಗೆ ತಿಳಿಯಬಯಸುತ್ತಿದ್ದೇನೆ. ನಾನು ಕ್ಷೇತ್ರದ ಅಧಿಕಾರಿಗಳೊಂದಿಗೆ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದು, ಜನರ ಸಮಸ್ಯೆಗೆ ಸ್ಪಂದಿಸುವಂತೆ ಸೂಚನೆ ನೀಡಿದ್ದೇನೆ.''

   ಹೋಂ ಕ್ವಾರಂಟೈನ್ ಉಲ್ಲಂಘನೆ; ರಾಮನಗರದಲ್ಲಿ 8 ಮಂದಿ ಮೇಲೆ FIRಹೋಂ ಕ್ವಾರಂಟೈನ್ ಉಲ್ಲಂಘನೆ; ರಾಮನಗರದಲ್ಲಿ 8 ಮಂದಿ ಮೇಲೆ FIR

   ""ಸದ್ಯಕ್ಕೆ ನಾನು ದೂರವಾಣಿ‌ ಮುಖಾಂತರ ಲಭ್ಯನಿರುತ್ತೇನೆ ಆದ್ದರಿಂದ ಎಲ್ಲರೂ ಸಹಕರಿಸಬೇಕೆಂದು ತಮ್ಮೆಲ್ಲರಲ್ಲೂ ವಿನಮ್ರವಾಗಿ ಕೇಳಿಕೊಳ್ಳುತ್ತಿದ್ದೇನೆ'' ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

   English summary
   Magadi MLA A.Manjunath has Self Quarantined with after the coronavirus was confirmed to a party senior leader.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X