• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ವೈರಸ್ ಭೀತಿಯಿಂದ ಮಾಗಡಿ ಶಾಸಕ ಎ.ಮಂಜುನಾಥ್ ಸೇಫ್

By ರಾಮನಗರ ಪ್ರತಿನಿಧಿ
|

ರಾಮನಗರ, ಜುಲೈ 5: ಆಪ್ತ ಸಹಾಯಕ ಮತ್ತು ತಮ್ಮ ಪಕ್ಷದ ಹಿರಿಯ ಮುಖಂಡರೂಬ್ಬರಿಗೆ ಕೊರೊನಾ ವೈರಸ್ ಸೋಂಕು ಧೃಢಪಟ್ಟ ಹಿನ್ನೆಲೆಯಲ್ಲಿ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದ ಮಾಗಡಿಯ ಶಾಸಕ ಎ.ಮಂಜುನಾಥ್ ಕೊರೊನಾ ವೈರಸ್ ಭೀತಿಯಿಂದ ಮುಕ್ತವಾಗಿದ್ದಾರೆ.

ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಎ.ಮಂಜುನಾಥ್ ಅವರು ಆರೋಗ್ಯ ತಪಾಸಣೆಗೆ ಒಳಗಾಗಿದ್ದು, ನಿನ್ನೆ ಸಂಜೆ ಕೊರೊನಾ ಟೆಸ್ಟ್ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿನ ಆತಂಕದಿಂದ ದೂರವಾಗಿದ್ದಾರೆ.

ಸ್ವಯಂ ಕ್ವಾರಂಟೈನ್ ಗೆ ಒಳಗಾದ ಮಾಗಡಿ ಶಾಸಕ ಎ.ಮಂಜುನಾಥ್

ಕೊರೊನಾ ವೈರಸ್ ಸೋಂಕಿತ ನನ್ನ ಆತ್ಮೀಯ ಮುಖಂಡರು ಮತ್ತು ನಮ್ಮ ಆಪ್ತ ಸಹಾಯಕ ಇಬ್ಬರೊಡನೆ ಪ್ರಾಥಮಿಕ ಸಂಪರ್ಕದಲ್ಲಿ ಹಲವು ಸಮಯ ಇದ್ದ ಕಾರಣ ನಾನೇ ಖುದ್ದಾಗಿ "ಸೆಲ್ಫ್ ಕ್ವಾರಂಟೈನ್' ಆಗುತ್ತಿದ್ದೇನೆ. ಹಾಗೂ ನಾನೇ ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದು, ವರದಿಯ ನಿರೀಕ್ಷೆಯಲ್ಲಿದ್ದೇನೆ. ನಾನು‌ ಕ್ಷೇಮವಾಗಿದ್ದೇನೆ. ಎಂದು ಕ್ಷೇತ್ರದ ಸಾರ್ವಜನಿಕರಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದರು.

ಮಾಗಡಿಯಲ್ಲಿ ಕೊರೊನಾಗೆ ಮತ್ತೊಂದು ಬಲಿ:

ಕೊರೊನಾ ವೈರಸ್ ಸೋಂಕು ತಗುಲಿ ರಾಮನಗರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 32 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಕಳೆದ 5 ದಿನಗಳ ಹಿಂದೆ ಯುವಕ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದನು.

ರಾಮನಗರ; ಡಿಸಿಎಂಗೆ ಭದ್ರತೆ ನೀಡಿದ್ದ ಇನ್ಸ್‌ ಪೆಕ್ಟರ್ ಗೆ ಕೊರೊನಾ ಸೋಂಕು

ಶನಿವಾರ ಸಂಜೆ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ತೀವ್ರವಾಗಿದ್ದರಿಂದ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿತ್ತು. RR ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಸಾವನ್ನಪ್ಪಿದ್ದಾರೆ. ಮೃತ ಯುವಕ ಮಾಗಡಿ ಪಟ್ಟಣದ ಜ್ಯೋತಿನಗರ ಬಡಾವಣೆ ವಾಸಿಯಾಗಿದ್ದರು.

ಶಂಕಿತನೂ ಸಾವು:

ಕೊರೊನಾ ವೈರಸ್ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ಮಾಗಡಿಯ ಹುಲಿಕಟ್ಟೆ ಕ್ವಾರಂಟೈನ್ ಕೇಂದ್ರದಲ್ಲಿದ್ದ 60 ವರ್ಷದ ವೃದ್ಧರೊಬ್ಬರು ಶನಿವಾರ ಸಂಜೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಮೃತರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಇನ್ನೂ ವರದಿ ಬಂದಿಲ್ಲ. ಗಂಟಲು ದ್ರವ ಪರೀಕ್ಷೆಯ ವರದಿ ಬಂದ ನಂತರ ಕೋವಿಡ್ ಸೋಂಕಿನ‌ ಬಗ್ಗೆ ದೃಢಪಡಲಿದೆ.

English summary
Magadi legislator A. Manjunath, who had undergone self-Quarantine in the wake of coronavirus infection, has been freed from the fear of coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more