• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಿಎಸ್‌ಐ ಅಕ್ರಮ ಪ್ರಕರಣಕ್ಕೆ ಲಾಜಿಕಲ್‌ ಅಂತ್ಯ; ಗೃಹ ಸಚಿವರ ಭರವಸೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ 19: "ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಸಂಬಂಧ ತನಿಖೆ ನಡೆಯುತ್ತಿದೆ. ಅನೇಕರು ವಂಚಿಸಿದ್ದಾರೆ, ಇದಕ್ಕೆ ಲಾಜಿಕಲ್ ಅಂತ್ಯ ಹಾಡಲಿದ್ದೇವೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಗುರುವಾರ ರಾಮನಗರದಲ್ಲಿ ಮಾತನಾಡಿದ ಸಚಿವರು, "ಕಷ್ಟಪಟ್ಟು ಓದಿದವರ ಬಾಯಿಗೆ ಮಣ್ಣು ಹಾಕಿದ್ದಾರೆ. ಅವರನ್ನು ಸುಮ್ಮನೆ ಬಿಡುವುದಿಲ್ಲ. ನಾವು ತಪ್ಪು ಮಾಡಿದ ಪೊಲೀಸರನ್ನೇ ಬಿಡುತ್ತಿಲ್ಲ" ಎಂದರು.

"ರಾಜ್ಯದ 92 ಕೇಂದ್ರಗಳಿಲ್ಲಿ ಪರೀಕ್ಷೆ ನಡೆದಿದೆ. ಅಲ್ಲಿ ನಾನು ಹೋಗಿ ಪರಿಶೀಲನೆ ನಡೆಸಲು ಸಾಧ್ಯವೆ?. ಯಾವುದೇ ಮುಲಾಜು, ಪ್ರಭಾವ ಇಲ್ಲದೇ, ಸಿಐಡಿಗೆ ಸಂಪೂರ್ಣ ಅಧಿಕಾರ ನೀಡಿದ್ದೇವೆ" ಎಂದು ಸಚಿವರು ತಿಳಿಸಿದರು.

"ಮುಂದಿನ ಪರೀಕ್ಷೆಯಲ್ಲಿ ಅಕ್ರಮ ತಡೆಯುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. 2016 ರಲ್ಲಿ ಪಿಯುಸಿಯಲ್ಲಿ ನಾಲ್ಕು ಭಾರಿ ಪರೀಕ್ಷೆ ನಡೆದಿದೆ. 2014 -15 ರಲ್ಲಿ ಎಪಿಪಿಗಳ ಆಯ್ಕೆಯಲ್ಲಿಯೂ ಅಂಕಗಳನ್ನು ತಿದ್ದಿದ್ದಾರೆ. ಅಂತಹ ನೇಮಕಗಳನ್ನು ತಡೆಹಿಡಿಯಲಾಗಿದೆ" ಎಂದರು.

"ಅಮಾಯಕರಿಗೆ ಅನ್ಯಾಯವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇಲ್ಲಿ ಒಂದು ಸೆಂಟರ್‌ನಲ್ಲಿ ಅಕ್ರಮ ನಡೆದಿಲ್ಲ. ಮುಖ್ಯ ಕಚೇರಿಯ ಲಾಕರ್‌ನಲ್ಲಿದ್ದ ಒಎಂಆರ್ ಶೀಟ್‌ಗಳನ್ನು ತಿದ್ದಿದ್ದಾರೆ. ಅಲ್ಲದೇ ಬ್ಲೂಟೂತ್ ಬಳಕೆ ಮಾಡಿಕೊಂಡು ಅಕ್ರಮ ನಡೆಸಿದ್ದಾರೆ" ಎಂದು ಗೃಹ ಸಚಿವರು ವಿವರಿಸಿದರು.

Logical End Will Given To PSI Recruitment Scam Says Araga Jnanendra

"ಈಗ ಮರು ಪರೀಕ್ಷೆ ಅನಿವಾರ್ಯ. ಆದರೆ ನೋಟಿಪಿಕೆಷನ್ ರದ್ದುಪಡಿಸಿಲ್ಲ‌. ಈಗ ಪರೀಕ್ಷೆಯನ್ನೇ ರದ್ದು ಮಾಡಿದ್ದೇವೆ. ಯಾರು ಅಕ್ರಮ ನಡೆಸಿದ್ದಾರೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಇದು ನಮ್ಮ ಅಸಹಾಯಕತೆಯಾಗಿದೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

   ಫ್ಯಾಟ್ ಬರ್ನ್ ಸರ್ಜರಿ ಅಂದ್ರೇನು? ಇದು ಕೊಬ್ಬು ಕರಗಿಸುತ್ತಾ ಅಥವಾ ಪ್ರಾಣವನ್ನೇ ತೆಗೆಯುತ್ತಾ? | Oneindia Kannada
   English summary
   Karnataka Home minister Araga Jnanendra said that logical end will be given to PSI recruitment scam. Minister addressed media at Ramanagara on May 19th.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X