ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಡೌನ್: ಸರಳ ಮದುವೆಗೆ ಸಾಕ್ಷಿಯಾದ ರಾಮನಗರದ ಹಳ್ಳಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಏಪ್ರಿಲ್ 26: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿರಂತರ ಪ್ರಯತ್ನಿಸುತ್ತಿವೆ. ಆದರೂ ನಗರ ಪ್ರದೇಶದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಜನರು ಲಾಕ್ ಡೌನ್ ನಿಯಮವನ್ನು ಅಲ್ಲಲ್ಲಿ ಉಲ್ಲಂಘಿಸುತ್ತಿದ್ದಾರೆ.

ಆದರೆ ಲಾಕ್ ಡೌನ್ ಪಾಲನೆಯನ್ನು ಮಾಡುವುದರಲ್ಲಿ ಗ್ರಾಮೀಣ ಪ್ರದೇಶದ ಜನರು ಒಂದು ಹೆಜ್ಜೆ ಮುಂದೆ ಇದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಸರಳ ಮದುವೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ರಾಮನಗರ ತಾ. ಅನೂಮಾನಹಳ್ಳಿ ಗ್ರಾಮದಲ್ಲಿ ವಾಣಿಶ್ರೀ.ವಿ ಹಾಗೂ ಅಜೇಯ್ ಎ.ಪಿ ಅವರು ಮನೆ ಮುಂದಿಯ ನಡುವೆ ಸರಳವಾಗಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಲಾಕ್ ಡೌನ್ ನಿಯಮವಿರುವ ಹಿನ್ನೆಲೆಯಲ್ಲಿ ಅದ್ಧೂರಿ ವಿವಾಹಕ್ಕೆ ಬ್ರೇಕ್ ಹಾಕಿ, ಸರಳ ವಿವಾಹ ಮಾಡಿಕೊಂಡಿದ್ದಾರೆ. ವಧು-ವರರ ಪೋಷಕರ ಸಮ್ಮುಖದಲ್ಲಿ ನಡೆದ ಸರಳ ಕಾರ್ಯಕ್ರಮ ನಡೆದಿದೆ.

Lockdown: The Village Of Ramanagara Witnessing A Simple Marriage

ನವ ಜೋಡಿ ಸೇರಿ ಎಂಟು ಮಂದಿಯಷ್ಟೇ ಮದುವೆಯಲ್ಲಿ ಭಾಗಿಯಾಗಿದ್ದರು. ಇದಕ್ಕೂ ಮುನ್ನ ಈ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮವಾದರೂ ಹಳ್ಳಿ ಜನರು ಗುಂಪುಗೂಡುತ್ತಿದ್ದರು.

Lockdown: The Village Of Ramanagara Witnessing A Simple Marriage

ಆದರೆ ಈ ಕೊರೊನಾ ವೈರಸ್ ವಿರುದ್ಧದ ಹೋಟರದಲ್ಲಿ ಗ್ರಾಮೀಣ ಭಾಗದ ಜನರೇ ಮುಂದಿದ್ದಾರೆ. ಪಕ್ಕದ ಮನೆಯವರ ಮದುವೆಯಾಗಿದ್ದರು ಮನೆಯಲ್ಲೇ ಇದ್ದು ಅನೂಮಾನಹಳ್ಳಿ ಗ್ರಾಮಸ್ಥರು ಮಾದರಿಯಾದ್ದು, ಮಾಸ್ಕ್ ಹಾಕಿಕೊಂಡೇ ಪುರೋಹಿತರು ಮಂತ್ರ ಪಟಿಸಿದ್ದಾರೆ.

English summary
In the Wake of lockdown, a simple marriage is a model for others In Ramanagara District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X