ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದಲ್ಲಿ ಸೈನ್ಯಕ್ಕೆ ಸೇರಿದ ಲಾಂಚರ್ ಗಳ ಸ್ಫೋಟ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ 11: ಸೈನ್ಯಕ್ಕೆ ಸೇರಿದ ಲಾಂಚರ್ ಗಳು ಸ್ಫೋಟಗೊಂಡಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಬೊಮ್ಮಸಂದ್ರ ಗ್ರಾಮದ ಬಳಿ ನಡೆದಿದೆ.

Recommended Video

ಈ ಇಬ್ಬರೂ ಸಚಿವರಿಗೆ ಕೊರೊನಾ ಭಯವೇ ಇಲ್ಲ..ಇದ್ದಿದ್ರೆ ಹೀಗೆ ಮಾಡ್ತಿರ್ಲಿಲ್ಲ | Ramanagara

ಸಂಗಮ ಅರಣ್ಯ ಪ್ರದೇಶದ ಕಾವೇರಿ ನದಿಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಈ ಸ್ಫೋಟಕಗಳು ಪತ್ತೆಯಾಗಿವೆ. ಬೊಮ್ಮಸಂದ್ರ ಗ್ರಾಮದ ಕೆಲವರು ದನ ಮೇಯಿಸಲು ಅರಣ್ಯ ಪ್ರದೇಶಕ್ಕೆ ಹೋಗಿದ್ದಾರೆ. ಈ ವೇಳೆ ನದಿಯಲ್ಲಿ 6 ಲಾಂಚರ್ ಗಳು ಪತ್ತೆಯಾಗಿವೆ. ಇದನ್ನು ನೋಡಿದ ಅವರು, ಲಾಂಚರ್ ಒಳಗಿದ್ದ ತಾಮ್ರ ತೆಗೆಯಲು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಲಾಂಚರ್ ಗಳು ಸ್ಫೋಟಗೊಂಡಿವೆ.

Launchers Belonged To Military Exploded In Kanakapura Village

ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದನಾ ಘಟಕದಲ್ಲಿ ಸ್ಫೋಟಹ್ಯಾಂಡ್ ಸ್ಯಾನಿಟೈಸರ್ ಉತ್ಪಾದನಾ ಘಟಕದಲ್ಲಿ ಸ್ಫೋಟ

6 ಲಾಂಚರ್ ಗಳ ಪೈಕಿ 5 ಸ್ಫೋಟಗೊಂಡಿವೆ. ಒಂದು ಸಜೀವವಾಗಿದೆ. ಸ್ಫೋಟದ ಸದ್ದು ಗ್ರಾಮದವರೆಗೂ ಕೇಳಿಸಿದ್ದು, ತಕ್ಷಣ ಗ್ರಾಮಸ್ಥರು ಸ್ಥಳದಲ್ಲಿ ಸೇರಿದ್ದಾರೆ. ಸಾತನೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಾಂಬ್ ನಿಷ್ಕ್ರಿಯ ದಳದವರಿಂದ ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಈ ಲಾಂಚರ್ ಗಳು ಮಿಲಿಟರಿಗೆ ಸೇರಿವೆ ಎಂಬುದು ತಿಳಿದುಬಂದಿದೆ.

Launchers Belonged To Military Exploded In Kanakapura Village

2002-03ರಲ್ಲಿ ಕಾವೇರಿ ನದಿಯ ದಡದಲ್ಲಿ 2 ತಿಂಗಳ ಕಾಲ ಮಿಲಿಟರಿ ಕ್ಯಾಂಪ್‌ ಹಾಕಿ ಅಲ್ಲಿ ತರಬೇತಿ ನೀಡಲಾಗುತಿತ್ತು. ಈ ವೇಳೆ ನದಿಯಲ್ಲಿ 6 ಲಾಂಚರ್ ಗಳು ಮುಳುಗಿ ಹೋಗಿದ್ದು, ಇದೀಗ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗಿದ್ದರ ಪರಿಣಾಮ ಈ ಲಾಂಚರ್ ಗಳು ಪತ್ತೆಯಾಗಿವೆ ಎನ್ನಲಾಗಿದೆ. ಸ್ಫೋಟಗೊಳ್ಳದ ಒಂದು ಲಾಂಚರ್ ಅನ್ನು ಬಾಂಬ್ ನಿಷ್ಕ್ರಿಯ ದಳ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಿದೆ. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Launchers belonged to military exploded in bommasandra village of kanakapura in ramanagar district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X