ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿ ಲೇಔಟ್ ನಿರ್ಮಾಣಕ್ಕೆ ಬಲಿಯಾಯ್ತು ಮಾಗಡಿಯ ಬೃಹತ್ ಆಲದ ಮರ

By ರಾಮನಗರ ಪ್ರತಿನಿಧಿ
|
Google Oneindia Kannada News

ಮಾಗಡಿ, ಜನವರಿ 25: ಖಾಸಗಿ ಲೇಔಟ್ ನಿರ್ಮಾಣಕ್ಕೆ ಬೃಹತ್ ಆಲದ ಮರವೊಂದನ್ನು ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಕುದೂರು- ಸೋಲೂರು ಹೆದ್ದಾರಿಯಲ್ಲಿ ನಡೆದಿದೆ. ಅದರಲ್ಲೂ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಬೆಳೆಸಿರುವ ಸಾಲು ಮರಗಳ ಒಂದು ಕಿ.ಮೀ ಸನಿಹದಲ್ಲೇ ಈ ಆಲದ ಮರ ಇತ್ತು.

ಮನೆಯ ಅಂದ ಕೆಡುತ್ತೆ ಎಂದು ಫಲವತ್ತಾದ ಮರಕ್ಕೆ ವಿಷ ಉಣಿಸಿದ ಮಾಲೀಕಮನೆಯ ಅಂದ ಕೆಡುತ್ತೆ ಎಂದು ಫಲವತ್ತಾದ ಮರಕ್ಕೆ ವಿಷ ಉಣಿಸಿದ ಮಾಲೀಕ

ಮರಗಳನ್ನು ಮಕ್ಕಳಂತೆ ಪೋಷಿಸಿ ನಾಡಿಗೆ ಮರ ಬೆಳೆಸುವಂತೆ ಸಂದೇಶ ನೀಡಿದ ಸಾಲುಮರದ ತಿಮ್ಮಕ್ಕ ಬೆಳೆಸಿರುವ ಸಾಲು ಮರಗಳಿಂದ ಒಂದು ಕಿ.ಮೀ ಸನಿಹದಲ್ಲಿದ್ದ, ರಸ್ತೆ ಬದಿಯಲ್ಲಿದ್ದ 50 ವರ್ಷಗಳಷ್ಟು ಹಳೆಯದಾದ ಬೃಹತ್ ಆಲದ ಮರವನ್ನು ಲೇಔಟ್ ನಿರ್ಮಾಣಕ್ಕೆ ತೊಂದರೆಯಾಗುತ್ತದೆ ಎಂದು ಮರ ಕಡಿದಿದ್ದಾರೆ. ಮರ ಕಡಿದವರ ವಿರುದ್ಧ ಗ್ರಾಮಸ್ಥರು ಮತ್ತು ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸಿದರು.

Large Banyan Tree Cut Down For Building Private Layout In Magadi

ಖಾಸಗಿ ಲೇಔಟ್ ನಿರ್ಮಾಣಕ್ಕೆ ಅಡ್ಡವಾಗಿದ್ದ 50 ವರ್ಷದ ಪುರಾತನ ಬೃಹತ್ ಆಲದ ಮರವನ್ನು ಗ್ರಾಮ ಸೇವಕ ಭೈರಪ್ಪ ಎಂಬುವರು ರಾತ್ರೋರಾತ್ರಿ ಕಡಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಕುದೂರು ಗ್ರಾಮ ಪಂಚಾಯತಿಯ ಆಸ್ತಿಯಾದ ಈ ಆಲದ ಮರವನ್ನು ಕಡಿಯಲು ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಪಡೆದಿಲ್ಲ ಎನ್ನಲಾಗಿದೆ.

Large Banyan Tree Cut Down For Building Private Layout In Magadi

ಅರೆರೆ, ಮೈಸೂರಿನಲ್ಲಿ ಅಲ್ಲಿಂದ ಇಲ್ಲಿಗೆ ಬಂತು ಅರಳಿಮರ! ಅರೆರೆ, ಮೈಸೂರಿನಲ್ಲಿ ಅಲ್ಲಿಂದ ಇಲ್ಲಿಗೆ ಬಂತು ಅರಳಿಮರ!

ಮರ ಕಡಿದಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಜನರು ಮರದ ದಿಮ್ಮಿಗಳನ್ನು ಬೇರೆ ಕಡೆ ಸಾಗಿಸಲು ಅವಕಾಶ ನೀಡದೆ ತಡೆಯೊಡ್ಡಿದರು. ಗ್ರಾಮ ಸೇವಕ ಭೈರಪ್ಪ ವಿರುದ್ಧ ಸಂಬಂಧಪಟ್ಟ ಅಧಿಕಾರಿಗೆ ದೂರು ಕೊಡಲು ಗ್ರಾಮಸ್ಥರು ಮತ್ತು ಪರಿಸರ ಪ್ರೇಮಿಗಳು ನಿರ್ಧರಿಸಿದ್ದಾರೆ.

English summary
A Large banyan tree cut down for building private layout in Kudur-Solur highway in magadi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X