ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊನೆಗೂ ಟೊಯೊಟಾ ಕಾರ್ಮಿಕ ಮುಷ್ಕರ ಅಂತ್ಯ: ಟಿಕೆಎಂ ಅಧಿಕೃತ ಹೇಳಿಕೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 3: ಬರೋಬ್ಬರಿ ಮೂರು ತಿಂಗಳಿಗೂ ಹೆಚ್ಚು ದಿನಗಳ ಕಾಲ ನಡೆಯುತ್ತಿದ್ದ ರಾಮನಗರದ ಬಿಡದಿ ಟೊಯೊಟಾ ಕಂಪನಿ ಕಾರ್ಮಿಕರ ಮುಷ್ಕರ ಅಂತ್ಯಗೊಂಡಿದೆ.

ಈ ಕುರಿತು ಟಿಕೆಎಂ ವಕ್ತಾರರು ಅಧಿಕೃತ ಹೇಳಿಕೆ ನೀಡಿದ್ದು, ಟಿಕೆಎಂ ನೌಕರರ ಒಕ್ಕೂಟವು ಕರ್ನಾಟಕದ ಬಿಡದಿಯಲ್ಲಿರುವ ತನ್ನ ಕಾರ್ಖಾನೆಯಲ್ಲಿ ನಡೆಯುತ್ತಿರುವ ಕಾರ್ಮಿಕರ ಮುಷ್ಕರವನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಮಂಗಳವಾರ ಖಚಿತಪಡಿಸಿದೆ.

ಮತ್ತೆ ಮೂರು ಕಾರ್ಮಿಕರನ್ನು ವಜಾ ಮಾಡಿದ‌ ಟೊಯೊಟಾ ಆಡಳಿತ ಮಂಡಳಿ ಮತ್ತೆ ಮೂರು ಕಾರ್ಮಿಕರನ್ನು ವಜಾ ಮಾಡಿದ‌ ಟೊಯೊಟಾ ಆಡಳಿತ ಮಂಡಳಿ

""ಈಗಾಗಲೇ 3350 ನೌಕರರ ಪೈಕಿ ಬಹುತೇಕ ಸದಸ್ಯರು ಸ್ವಯಂ ಪ್ರೇರಿತರಾಗಿ ಕೆಲಸವನ್ನು ಪುನರಾರಂಭಿಸಿದ್ದರು, ಆದರೆ, ಕಾರ್ಮಿಕ ಮುಷ್ಕರವು ಮಂಗಳವಾರ (ಮಾ.2) ರಂದು ಅಧಿಕೃತವಾಗಿ ಕೊನೆಗೊಂಡಿದೆ. ಎಲ್ಲ ಪಕ್ಷಗಳ ನಡುವೆ ಸಮನ್ವಯ ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕರ್ನಾಟಕ ಸರ್ಕಾರ ಮತ್ತು ಕಾರ್ಮಿಕ ಇಲಾಖೆಗೆ ಟಿಕೆಎಂ ಕೃತಜ್ಞತೆ ಸಲ್ಲಿಸುತ್ತದೆ'' ಎಂದಿದ್ದಾರೆ.

Ramanagara: Labour Strike Ends At Toyota Kirloskar Motors At Bidadi Plant

ಇದಲ್ಲದೆ, ಮಾ.1ರಂದು ಟಿಕೆಎಂ ಸದಸ್ಯರು ನೀಡಿದ ವರದಿಯನ್ನು ಟಿಕೆಎಂ ಒಪ್ಪಿಕೊಂಡಿದೆ. 2021ರ ಮಾ.5 ರೊಳಗೆ ಕೆಲಸಕ್ಕೆ ಮರಳಬೇಕು ಮತ್ತು ಭವಿಷ್ಯದ ಪರಸ್ಪರ ನಂಬಿಕೆಯ ಆಧಾರದ ಮೇಲೆ ಪರಸ್ಪರ ನಂಬಿಕೆಯನ್ನು ಆಧರಿಸಿ ದೈನ್ಯತೆಗಳನ್ನು ಖಾತರಿಪಡಿಸಿಕೊಳ್ಳುವ ಮತ್ತು ಪರಸ್ಪರ ತಿಳುವಳಿಕೆಯ ನಿಯಮಗಳನ್ನು ಗೌರವಿಸುವಂತೆ ಇತರ ಎಲ್ಲಾ ಸದಸ್ಯರಿಗೆ ಕಂಪನಿಯು ಅಂತಿಮ ಮನವಿಯನ್ನೂ ಸಹ ನೀಡಿದೆ.

Ramanagara: Labour Strike Ends At Toyota Kirloskar Motors At Bidadi Plant

Recommended Video

Ramesh Jarkiholi Resigns, ರಾಸಲೀಲೆಯನ್ನ ಒಪ್ಪಿ ಜಾರಕಿಹೋಳಿ ರಾಜೀನಾಮೆ !! | Oneindia Kannada

""ಟಿಕೆಎಂನ ಸುದೀರ್ಘ ಇತಿಹಾಸದುದ್ದಕ್ಕೂ, ಕಂಪನಿಯು ಅವರ ಬಲಿಷ್ಠ ಜನಸ್ನೇಹಿ ಸಂಸ್ಕೃತಿ ಮತ್ತು ಅಭಿವೃದ್ಧಿಯ ಬದ್ಧತೆಗೆ ಮನ್ನಣೆಯನ್ನು ನೀಡಿದೆ. ಈ ಮೌಲ್ಯ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಟಿಕೆಎಂ ಸಹಕಾರ, ವಿಶ್ವಾಸ, ಶಿಸ್ತು ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ಸಂಬಂಧಗಳನ್ನು ಬೆಳೆಸುವ ಮೂಲಕ ಈ ಮೌಲ್ಯ ವ್ಯವಸ್ಥೆಯನ್ನು ಬಲಪಡಿಸಲು ಶ್ರಮಿಸಲಿದೆ'' ಎಂದು ಟಿಕೆಎಂ ವಕ್ತಾರರು ಹೇಳಿದ್ದಾರೆ.

English summary
Toyota Kirloskar Motor (TKM) confirmed on Tuesday(Mar 2) that it has officially ended the protest of workers at the Toyota factory in Bidadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X