ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒತ್ತಡದ ನಡುವೆಯೂ ಅಂಧ ಮಕ್ಕಳ ಯೋಗಕ್ಷೇಮ ವಿಚಾರಿಸಿದ ಎಚ್ ಡಿಕೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂನ್. 21: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಾರಥಿಯಾಗಿ ಖಾತೆ ಹಂಚಿಕೆಯ ಗೊಂದಲಗಳನ್ನು ನಿವಾರಿಸಿ ಇದೀಗ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ.

ಅದಕ್ಕಾಗಿ ಅಧಿಕಾರಿಗಳ ಸರಣಿ ಸಭೆ ಹಮ್ಮಿಕೊಂಡು ಒತ್ತಡದಲ್ಲಿದ್ದಾರೆ. ಇಂತಹ ಒತ್ತಡದ ಕೆಲಸಗಳ ನಡುವೆಯು ಅಂಧ ಮಕ್ಕಳೊಂದಿಗೆ ಸ್ವಲ್ಪ ಸಮಯದವರೆಗೆ ಬೆರೆತು, ಮಕ್ಕಳ ಯೋಗಕ್ಷೇಮ ವಿಚಾರಿಸಿ, ಆತ್ಮೀಯವಾಗಿ ನಡೆದುಕೊಂಡಿದ್ದಾರೆ.

ಪಂಜಾಬ್ ಮಾದರಿಯಲ್ಲಿ ರೈತ ಸಾಲಮನ್ನಾ: ಏನಿದು ಪಂಜಾಬ್ ಮಾದರಿ?ಪಂಜಾಬ್ ಮಾದರಿಯಲ್ಲಿ ರೈತ ಸಾಲಮನ್ನಾ: ಏನಿದು ಪಂಜಾಬ್ ಮಾದರಿ?

ನಗರದ ಹೊರವಲಯದ ಅರ್ಚಕರಹಳ್ಳಿಯಲ್ಲಿರುವ ಆದಿಚುಂಚನಗಿರಿ ಮಠದ ಅಧೀನದಲ್ಲಿ ನಡೆಯುತ್ತಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವಸತಿಯುತ ಅಂಧರ ಶಾಲೆಗೆ ಇಂದು ಬೆಳಗ್ಗೆ ಭೇಟಿ ನೀಡಿದ ಕುಮಾರಸ್ವಾಮಿ ಅವರು ಮಕ್ಕಳ ವಿದ್ಯಾಭ್ಯಾಸ ಹಾಗೂ ಯೋಗಕ್ಷೇಮ ವಿಚಾರಿಸಿದರಲ್ಲದೇ ಮಠದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Kumaraswamy visited Sri balagangadharanatha swamijis residential blind school

ತಾಲೂಕಿನ ಪೇಟೆ ಕುರುಬರಹಳ್ಳಿಗೆ ಆಗಮಿಸುವ ಮೊದಲು ಶಾಖಾ ಮಠಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸನ್ಮಾನಿಸಿ ಆಶೀರ್ವದಿಸಿದರು.
Kumaraswamy visited Sri balagangadharanatha swamijis residential blind school

ಈ ಸಂದರ್ಭದಲ್ಲಿ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಮತ್ತಿತರರು ಹಾಜರಿದ್ದರು.

English summary
Kumaraswamy visited Sri balagangadharanatha swamiji's residential blind school today morning and inquired about the child's education and wellbeing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X