ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ ಮುಗಿದಮೇಲೆ ಕೆಲವರು ಊರು ಬಿಡ್ಬೇಕಾಗುತ್ತೆ:ಎಚ್‌ಡಿಕೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಏಪ್ರಿಲ್ 30: ವಿಧಾನಸಭೆ ಚುನಾವಣೆ ಮುಗಿದ ಮೇಲೆ ಕೆಲವರು ಊರು ಬಿಡಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

ಇಂದು ಚನ್ನಪಟ್ಟಣ ಕ್ಷೇತ್ರದಲ್ಲಿ ಒಂದು ದಿನದ ಚುನಾವಣಾ ಪ್ರಚಾರ ನಡೆಸಿದರು. ಚುನಾವಣಾ ಪ್ರಚಾರಕ್ಕೂ ಮೂದಲು ಪಟ್ಟಣದ ಬಡಮಕನ್ ದರ್ಗಾಕ್ಕೆ ಚಾದರ ಸಮರ್ಪಿಸಿ ಮುಸ್ಲಿಂ ಬಾಂಧವರೊಂದಿ ಪ್ರಾರ್ಥನೆ ಸಲ್ಲಿಸಿ ನಂತರ ಪ್ರಚಾರಕ್ಕೆ ಚಾಲನೆ ನೀಡಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ: ಟಾರೋ ರೀಡಿಂಗ್ಚನ್ನಪಟ್ಟಣ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ: ಟಾರೋ ರೀಡಿಂಗ್

ಈ ವೇಳೆ ಮಾದ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಈಗಾಗಲೇ ರಾಜ್ಯದಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇನೆ. ನಾಳೆಯಿಂದ ಎರಡನೇ ಸುತ್ತಿನ ರಾಜ್ಯ ಪ್ರವಾಸ ಕೈಗೊಳ್ಳಲಿದ್ದೇನೆ. ಸಮಯದ ಅಭಾವದ ಹಿನ್ನಲೆ ಇವತ್ತು ಒಂದು ದಿನ ಚನ್ನಪಟ್ಟಣದ ಐದು ಜಿಲ್ಲಾಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಚಾರ ಮಾಡುತ್ತಿದ್ದೇನೆ ಎಂದರು.

Kumaraswamy today did campaign in Channapatna constituency

ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಾಗೂ 113 ಸ್ಥಾನಗಳ ಗೆಲುವಿಗಾಗಿ ನಾನು ಹೋರಾಟ ಮಾಡುತ್ತಿದ್ದೇನೆ, ಇಲ್ಲಿ ನೀವುಗಳೇ ನಿಂತು ಪ್ರಚಾರ ಮಾಡಿ ಗೆಲ್ಲಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

ಕುಮಾರಸ್ವಾಮಿ ಹೂರಗಿನವರು ಎಂಬ ಸಿ.ಪಿ.ಯೋಗೀಶ್ವರ್‌ ಟೀಕೆಗೆ ತಿರುಗೇಟು ನೀಡಿದ ಎಚ್‌ಡಿಕೆ, 'ನಾನು ರಾಮನಗರದ ಮಗನೆ, ನನ್ನ ಭೂಮಿ ಕೂಡ ಬಿಡದಿಯ ಬಳಿಯೆ ಇದೆ ನನ್ನ ಮತ ಇರುವುದು ಮಾಗಡಿ ಕ್ಷೇತ್ರದಲ್ಲಿ ಬೆಂಗಳೂರಿನಲ್ಲಿ ಅಲ್ಲ, ನಾನು ಕೂಡ ಈ ಜಿಲ್ಲೆಯ ಮಗನೆ ಯಾರೋ ಕಿಡಿಗೇಡಿಗಳು ನಾನು ಹೋರಗಿನವನು ಎನ್ನುವ ಮಾತಿಗೆ ಇಲ್ಲಿನ ಜನ ಕಿವಿ ಕೊಡುವುದಿಲ್ಲ. ಟೀಕೆ ಮಾಡುವವರ ಬಗ್ಗೆ ಜನತೆ ತೀರ್ಮಾನ ಮಾಡುತ್ತಾರೆ' ಎಂದರು.

ರಾಮನಗರದಲ್ಲಿ ತಂದೆಗಾಗಿ ಮತ ಯಾಚಿಸಿದ ನಿಖಿಲ್ ಕುಮಾರಸ್ವಾಮಿರಾಮನಗರದಲ್ಲಿ ತಂದೆಗಾಗಿ ಮತ ಯಾಚಿಸಿದ ನಿಖಿಲ್ ಕುಮಾರಸ್ವಾಮಿ

ಇನ್ನು ಬಾಲಕೃಷ್ಣ ಮತ್ತು ಜಮೀರ್ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ ಅವರು, 'ಅವರು ದೊಡ್ಡ ವ್ಯಕ್ತಿಗಳು ಅವರ ಮಟ್ಟಕ್ಕೆ ನಾನು ಹೋಗಲು ಸಾಧ್ಯವಿಲ್ಲ. ನಾವು ಯಾರ ಬಗ್ಗೆಯಾದರೂ ಚರ್ಚೆ ಮಾಡುತ್ತೇವೆ ಅದನ್ನ ಕೇಳಲು ಅವರು ಯಾರು ಎಂದು ಪ್ರಶ್ನಿಸಿದರು'.

ಪಕ್ಷಾಂತರ ಮಾಡಿದ ಜೆಡಿಎಸ್‌ ಶಾಸಕರಲ್ಲಿ ಒಬ್ಬರು ನಾಗರೀಕರು ಬಳಸದ ಪದಗಳನ್ನ ಬಳಸಿದ್ದಾರೆ ಎಂದ ಕುಮಾರಸ್ವಾಮಿ 'ನಾನು ಮುಸ್ಲಿಂ ಬಾಂದವರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ, ಅವರು ಬಳಸಿರುವ ಪದಗಳನ್ನ ನಾನು ಮಾತನಾಡಲು ನನಗೆ ಅಸಹ್ಯವಾಗುತ್ತದೆ ಅಂತಹ ಪದ ನನ್ನ ಜೀವನದಲ್ಲಿ ಬಂದಿಲ್ಲ. ಅಂತಹ ಮಾತುಗಳು ಅವರ ಸಂಸ್ಕೃತಿ ತೋರಿಸುತ್ತದೆ' ಎಂದರು.

ಚಿತ್ರಗಳು : ವಿಕಾಸ ಪರ್ವ ಯಾತ್ರೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ

'ನಾನು 105 ಕೋಟಿ ಸಾಲಗರ ಇನ್ನು ಆಸ್ತಿ ಮಾಡುವುದು ಎಲ್ಲಿ. ನಾನು ರಾಜಕೀಯದಲ್ಲಿದ್ದೀನಿ ನನ್ನ ಆಸ್ತಿ ಬಗ್ಗೆ ಚರ್ಚೆ ಮಾಡಲಿ ನನ್ನ ಕುಟುಂಬದ ಆಸ್ತಿ ಬಗ್ಗೆ ಚರ್ಚೆ ಅವರಿಗೆ ಯಾಕೆ. ಅವರ ಆಸ್ತಿ ಎಷ್ಟಿದೆ?, ನಾನು ಅವರ ತರ ಕಳ್ಳ ಬಿಲ್ ಮಾಡಿ ಸಿಲ್ಲಾ, ಕಳ್ಳ ಗುತ್ತಿಗೆದಾರರಿಗೆ ಬೆಂಬಲ ಕೊಡಲು ನಾನು ಹೋಗಿಲ್ಲಾ ಅವರು ಏನು ಮಾಡಿದ್ದಾರೆ ಎಂದು ನನಗೆ ಗೊತ್ತಿದೆ. ಅವರಲ್ಲಿ ತಟ್ಟೆಯಲ್ಲಿ ಹೆಗ್ಗಣ ಸತ್ತಿದ್ದೆ ಆದರೆ ಅವರು ನೊಣ ಸತ್ತಿರುವ ಬಗ್ಗೆ ಚರ್ಚೆ ಯಾಕೆ ಅವರಿಗೆ' ಎಂದು ವ್ಯಂಗ್ಯವಾಡಿದರು.

English summary
JDS state president HD Kumaraswamy today did campaign in Channapatna constituency. He lambasted on CP Yogeshwar who is BJP candidate from Channapatna constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X