ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಚನ್ನಪಟ್ಟಣ ಬಳಿ ಟೈರ್ ಸ್ಫೋಟಗೊಂಡು ಹಳ್ಳಕ್ಕೆ ಉರುಳಿದ KSRTC ಬಸ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ನವೆಂಬರ್ 26: ಟೈರ್ ಸ್ಫೋಟಗೊಂಡು ಕೆಎಸ್‌ಆರ್‌ಟಿಸಿ ಬಸ್ ಹಳ್ಳಕ್ಕೆ ಉರುಳಿದ ಘಟನೆ ರಾಮನಗರ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ಗೌಡಗೆರೆ- ಬುಗಡನದೊಡ್ಡಿ ಮಾರ್ಗ ಮಧ್ಯೆ ಟೈರ್ ಸ್ಫೋಟಗೊಂಡು ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಬದಿಯ ಹಳ್ಳದಲ್ಲಿ ಹೋಗಿ ನಿಂತಿದೆ.

ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಅಸಡ್ಡೆ, ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಬಸ್‌ನ ಟೈರ್ ಅನ್ನು ಬದಲಿಸಿರಲಿಲ್ಲ. ಬಸ್ ಹಳ್ಳಕ್ಕೆ ಹೋಗಿದ್ದರೂ ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

Ramanagara: KSRTC Bus Overturned To Lake After Tire Burst Near Channapatna


ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 60ಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದರು. ವಿದ್ಯಾರ್ಥಿಗಳು, ಯುವಕ, ಯುವತಿಯರು ಸೇರಿ ಬಸ್‌ನಲ್ಲಿ ವೃದ್ಧರಿದ್ದರು. ಟೈರ್ ಸ್ಫೋಟಗೊಳ್ಳುತ್ತಿದ್ದಂತೆ ಬಸ್ ಚಾಲಕ ನಿಧಾನವಾಗಿ ಹಳ್ಳಕ್ಕೆ ಇಳಿಸಿದ್ದಾನೆ.

Ramanagara: KSRTC Bus Overturned To Lake After Tire Burst Near Channapatna

ಬಲಭಾಗದ ಮುಂದಿನ ಟೈರ್ ಸ್ಫೋಟವಾಗಿದ್ದು, ಬಸ್‌ನ ನಿರ್ವಹಣೆಯಲ್ಲಿ ಅಧಿಕಾರಿಗಳ ಎಡವಟ್ಟು ಎದ್ದುಕಾಣುತ್ತದೆ. ಬಸ್‌ನ ಟೈರ್‌ಗಳು ಸರಿಯಿಲ್ಲದಿದ್ದರೂ ಹಳ್ಳಿ ಮಾರ್ಗಕ್ಕೆ ಬಸ್ ನಿಯೋಜನೆ ಮಾಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂ.ಕೆ. ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Recommended Video

ಸೀತೆ ಮಗಳೆಂದು ರಾವಣನಿಗೂ ಗೊತ್ತಿತ್ತು:ಸೀತಾಪಹರಣ ಹಿಂದಿನ ರೋಚಕ ಕಥೆ | Oneindia Kannada

English summary
KSRTC Bus overturned to Lake after Tire Burst near Goudagere- Bugadanadoddi road in Channapatna taluk of Ramanagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X