ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುರ್ಯೋಧನ- ದುಶ್ಶಾಸನರು ಸೇರಿ ರಾಜ್ಯದಲ್ಲಿ ಆಡಳಿತ: ತೇಜಸ್ವಿನಿ ಗೌಡ

By ರಾಮನಗರ ಪ್ರತಿನಿಧಿ
|
Google Oneindia Kannada News

Recommended Video

ದುರ್ಯೋಧನ- ದುಶ್ಶಾಸನರು ಸೇರಿ ರಾಜ್ಯದಲ್ಲಿ ಆಡಳಿತ : ತೇಜಸ್ವಿನಿ ಗೌಡ | Oneindia Kannada

ರಾಮನಗರ, ಜುಲೈ 26 : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನ ಪಡೆದ ಕುಂತಿ ಮಕ್ಕಳು ಹೊರಗಿದ್ದೇವೆ. ದುರ್ಯೋಧನರು- ದುಶ್ಶಾಸನರು ಒಟ್ಟಾಗಿ ರಾಜ್ಯ ಆಳುತ್ತಿದ್ದಾರೆ. ಈ ಸರಕಾರವನ್ನು ಕಿತ್ತೊಗೆದು ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ವಿಧಾನಪರಿಷತ್ ಸದಸ್ಯೆ ತೇಜಸ್ವಿನಿಗೌಡ ಗುರುವಾರ ಇಲ್ಲಿ ಹೇಳಿದರು.

ಬಿಜೆಪಿಯನ್ನು ಪಾಂಡವರಿಗೂ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷವನ್ನು ದುರ್ಯೋಧನ- ದುಶ್ಶಾಸನರಿಗೂ ಹೋಲಿಕೆ ಮಾಡಿದ ಅವರು, ತೀಕ್ಷ್ಣ ವಾಗ್ದಾಳಿ ನಡೆಸಿದರು.

ಪಾದಯಾತ್ರೆಯಲ್ಲಿ ರಾಮನಗರ ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರು ಗೈರುಪಾದಯಾತ್ರೆಯಲ್ಲಿ ರಾಮನಗರ ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರು ಗೈರು

ರೈತರ ಸಾಲ ಸಂಪೂರ್ಣ ಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ನೇತೃತ್ವದಲ್ಲಿ ಉತ್ತರ ಕರ್ನಾಟಕ ರೈತರು ರಾಮನಗರದ ಕೆಂಗಲ್ ದೇವಾಲಯದಿಂದ ಬೆಂಗಳೂರಿನ ಸಿಎಂ ಗೃಹ ಕಚೇರಿಗೆ ಆಯೋಜಿಸಿರುವ ಮೂರು ದಿನಗಳ ಪಾದಯಾತ್ರೆಗೆ ಚಾಲನೆ ನೀಡಿ, ಮಾತನಾಡಿದರು.

Tejaswini Gowda

ಯಾವುದೇ ಕುಂಟು ನೆಪ ಹೇಳದೆ ತಕ್ಷಣವೇ ರಾಜ್ಯ ಸರಕಾರ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಮದ್ಯ ಕರ್ನಾಟಕ ಎಂದು ತಾರತಮ್ಯ ಮಾಡದೆ ಇಡೀ ಕರ್ನಾಟಕದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

English summary
Karnataka JDS and Congress mock as Duryodhana, Dushyasana by BJP MLC Tejaswini Gowda in Ramanagara on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X