ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೇಷ್ಮೆ ಬೆಳೆಗಾರರ ಪ್ರತಿಭಟನೆಗೆ ತಲೆ ಬಾಗಿದ ಸರ್ಕಾರ, ಪ್ರೋತ್ಸಾಹ ಧನ ನೀಡಲು ಸಮ್ಮತಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜುಲೈ 15: ಕೊರೊನಾ ವೈರಸ್ ಹೊಡೆತದಿಂದ ರೇಷ್ಮೆ ಧಾರಣೆ ಇಳಿಕೆಯಾಗಿದ್ದರಿಂದ ರೇಷ್ಮೆ ಬೆಳೆಗಾರರು ಪರಿಹಾರಕ್ಕೆ ಆಗ್ರಹಿಸಿ ಇಂದಿನಿಂದ ಹಮ್ಮಿಕೊಂಡಿದ ಉಪವಾಸ ಸತ್ಯಾಗ್ರಹವನ್ನು ಸರ್ಕಾರದ ಭರವಸೆಯ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹವನ್ನು ರೈತರು ಕೈಬಿಟ್ಟರು.

Recommended Video

China ಸೈನಿಕರಿಗೆ ಅವಮಾನ | Oneindia Kannada

ಕೋವಿಡ್-19 ನಿಂದ ಆಗುತ್ತಿರುವ ಸಂಕಷ್ಟಕ್ಕೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಿಸುವಂತೆ ಆಗ್ರಹಿಸಿ ರಾಮನಗರ ರೇಷ್ಮೆ ಗೂಡು ಮಾರುಕಟ್ಟೆ ಮುಂಭಾಗ ರೇಷ್ಮೆ ಬೆಳೆಗಾರರು ಅನಿರ್ದಿಷ್ಟಾವಧಿ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ, ಸರ್ಕಾರ ರೇಷ್ಮೆ ಗೂಡಿಗೆ ಬೆಂಬಲ ಬೆಲೆ ನೀಡಬೇಕೆಂದು ರೈತರು ಆಗ್ರಹಿಸಿದರು.

ರಾಮನಗರ: ಸರ್ಕಾರಿ ಬಾಲ ಮಂದಿರದಿಂದ 7 ಬಾಲಕಿಯರು ಪರಾರಿರಾಮನಗರ: ಸರ್ಕಾರಿ ಬಾಲ ಮಂದಿರದಿಂದ 7 ಬಾಲಕಿಯರು ಪರಾರಿ

Ramanagara: Karnataka Governments Willingness To Provide Incentives For Silk Crop

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆಗಾರರು, ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿದ ರೇಷ್ಮೆ ಸಚಿವರು ರೈತರ ಒತ್ತಾಯವಾದ ಮೌಲ್ಯಾಧಾರಿತ ಬೆಲೆ ಪದ್ಧತಿ ಬಿಟ್ಟು ರೇಷ್ಮೆ ಬೆಳೆಗೆ ಬೆಂಬಲ ಬೆಲೆ ನೀಡಲು ಸರ್ಕಾರ ಸಮ್ಮತಿ ನೀಡಿದೆ, ಬೆಂಬಲ ಬೆಲೆ ಪಾವತಿಗಾಗಿ 10 ಕೋಟಿ ಹಣ ಬಿಡುಗಡೆ ಮಾಡಿ ಇನ್ನುಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ನೀಡಿದ್ದಾರೆ.

ಕೊರೊನಾ ವೈರಸ್ ಭೀತಿ: ಸ್ವಯಂ ಲಾಕ್ ಡೌನ್ ಗೆ ಶರಣಾದ ಮಾಗಡಿಕೊರೊನಾ ವೈರಸ್ ಭೀತಿ: ಸ್ವಯಂ ಲಾಕ್ ಡೌನ್ ಗೆ ಶರಣಾದ ಮಾಗಡಿ

Ramanagara: Karnataka Governments Willingness To Provide Incentives For Silk Crop

ರೇಷ್ಮೆ ಬೆಳೆಗಾರರು ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಅಗಮಿಸಿದ ರೇಷ್ಮೆ ಇಲಾಖೆಯ ಜೆಡಿ ಕುಮಾರ್, ರೈತರಿಗೆ ಸರ್ಕಾರದ ನಿರ್ಧಾರ ತಿಳಿಸಿದರು. ಮುಂದಿನ ದಿನಗಳಲ್ಲಿ ಲಾಕ್ ಡೌನ್ ಸಮಯದಲ್ಲಿ ಮಾರುಕಟ್ಟೆ ಬರಲಾಗದೆ ಸಂಕಷ್ಟಕ್ಕೆ ಒಳಗಾದ ರೇಷ್ಮೆ ಬೆಳೆಗಾರರಿಗೂ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.

English summary
With the government's promise of silk growers relief, farmers have abandoned fasting as silkworm prices have declined due to the coronavirus attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X