ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಹಾಸನದಿಂದ ಬಂದ ವಲಸಿಗನಲ್ಲ, ಎಚ್ ಡಿಕೆಗೆ ಎಚ್ಚೆಂ ರೇವಣ್ಣ ಟಾಂಗ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಏಪ್ರಿಲ್ 18 : "ನಾನು ಇವತ್ತಿಗೂ ಜೀಪ್ ಡ್ರೈವರ್ ಮಗನೇ ಹೊರತು ಮಣ್ಣಿನ ಮಗ ಅಲ್ಲ" ಎಂದು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ರೇವಣ್ಣ ಕಾರ್ಯಕರ್ತರ ಸಮಾವೇಶದಲ್ಲಿ ಬುಧವಾರ ಹೇಳಿದ್ದಾರೆ.

"ನಾನೇನೂ ಹಾಸನದಿಂದ ಬಂದ ವಲಸಿಗನಲ್ಲ. ಪಕ್ಕದ ತಾಲ್ಲೂಕಿನ ಮಗನೇ. ಚುನಾವಣೆಗೆ ಸ್ಪರ್ಧೆ ಮಾಡಬೇಕೆಂದು ಅರ್ಜಿ ಹಾಕಿರಲಿಲ್ಲ. ನಾನು ಅಭ್ಯರ್ಥಿ ಆಗಲು ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಕಾರಣ" ಎಂದು ಚುನಾವಣೆ ಕಣಕ್ಕೆ ಇಳಿದ ಸ್ಪರ್ಧೆಯ ಗುಟ್ಟು ಬಿಚ್ಚಿಟ್ಟರು.

ರಾಮನಗರ-ಚನ್ನಪಟ್ಟಣವನ್ನು ಟ್ವಿನ್ ಸಿಟಿ ಮಾಡಲಿದ್ದಾರಂತೆ ಕುಮಾರಸ್ವಾಮಿ!ರಾಮನಗರ-ಚನ್ನಪಟ್ಟಣವನ್ನು ಟ್ವಿನ್ ಸಿಟಿ ಮಾಡಲಿದ್ದಾರಂತೆ ಕುಮಾರಸ್ವಾಮಿ!

ಚನ್ನಪಟ್ಟಣ ವಿಧಾನಸಭಾ ಕಣದಲ್ಲಿ ಸಿ.ಪಿ.ಯೋಗೇಶ್ವರ್ ಮಣಿಸಲು ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಒಳ ಒಪ್ಪಂದ ಮಾಡಿಕೊಂಡು, ಕಾಂಗ್ರೆಸ್ ನಿಂದ ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ ಎಂಬ ಆರೋಪದಿಂದ ಮುಕ್ತವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರನ್ನು ಕಣಕಿಳಿಸಿದ್ದಾರೆ.

Karnataka elections: I am a driver son, said HM Revanna

ಎಚ್.ಎಂ.ರೇವಣ್ಣ ಚನ್ನಪಟ್ಟಣ ಸ್ಪರ್ಧೆ ಕಾರಣ ಬಿಚ್ಚಿಟ್ಟ ದೇವೇಗೌಡರುಎಚ್.ಎಂ.ರೇವಣ್ಣ ಚನ್ನಪಟ್ಟಣ ಸ್ಪರ್ಧೆ ಕಾರಣ ಬಿಚ್ಚಿಟ್ಟ ದೇವೇಗೌಡರು

ಒಲ್ಲದ ಮನಸ್ಸಿನಿಂದ ವರಿಷ್ಠರ ತೀರ್ಮಾನ ಒಪ್ಪಿರುವ ಎಚ್.ಎಂ.ರೇವಣ್ಣ, ಅಕ್ಷಯ ತೃತೀಯದಂದು ಅಧಿಕೃತವಾಗಿ ಕಾರ್ಯಕರ್ತರ ಸಮಾವೇಶ ನಡೆಸುವ ಮೂಲಕ‌ ಚುನಾವಣೆ ಪ್ರಚಾರ ಆರಂಭಿಸಿದರು. ಮೊದಲಿಗೆ ಕಾಂಗ್ರೆಸ್ ಕಾರ್ಯಕತರು ಎಚ್.ಎಂ.ರೇವಣ್ಣ ಅವರಿಗೆ ಅದ್ಧೂರಿ ಸ್ವಾಗತ ನೀಡಿದರು.

English summary
Karnataka Assembly Elections 2018: I am a driver son, not a son of the soil and not migrated from Hassan, said Channapatna constituency Congress candidate HM Revanna on Wednesday at party workers meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X