ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Karnataka Bandh: ಮುಸ್ಲಿಂ ಸಂಘಟನೆಗಳಿಂದ ಬಂದ್; ರಾಮನಗರ ಮಾರುಕಟ್ಟೆಯಲ್ಲಿ ಖರೀದಿಯಾಗದ ರೇಷ್ಮೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 17: ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ರಾಜ್ಯದ ಹಲವು ಕಡೆಗಳಲ್ಲಿ ವ್ಯಾಪಾರ, ವ್ಯವಹಾರ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿವೆ.

ಕೆಲವು ಮುಸ್ಲಿಮರು ಸ್ವಯಂಪ್ರೇರಿತವಾಗಿ ಅಂಗಡಿ- ಮುಂಗಟ್ಟು ಮುಚ್ಚಿ ಪ್ರತಿಭಟನೆ ಮಾಡುತ್ತಿದ್ದರೆ, ಕೆಲ ಮುಸ್ಲಿಂ ಸಮುದಾಯದವರು ಎಂದಿನಂತೆ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ.

Karnataka Bandh; ಶಿವಾಜಿನಗರದಲ್ಲಿ ಅಂಗಡಿಗಳು ಬಂದ್‌ Karnataka Bandh; ಶಿವಾಜಿನಗರದಲ್ಲಿ ಅಂಗಡಿಗಳು ಬಂದ್‌

ರಾಮನಗರದಲ್ಲಿ ರೇಷ್ಮೆ ಖರೀದಿಗೆ ಬಾರದ ರೀಲರ್‌ಗಳು

ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆಗೂಡು ಖರೀದಿಗೆ ರೀಲರ್‌ಗಳು ಬಾರದ ಹಿನ್ನಲೆ ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ರೈತರು ಪ್ರತಿಭಟಿಸಿದರು.

Karnataka Bandh From Muslim Organizations; The Silk That is Not Sale in the Ramanagara Silk Market

ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ಚನ್ನಪಟ್ಟಣದ ರೇಷ್ಮೆ ಮಾರುಕಟ್ಟೆಯಲ್ಲಿ ಮುಸ್ಲಿಂ ರೀಲರ್‌ಗಳ ಗೈರಾಗಿದ್ದು, ರೈತರ ರೇಷ್ಮೆಗೂಡು ಖರೀದಿಗೆ ರೀಲರ್ಸ್ ಮುಂದಾಗಿಲ್ಲ. ಸ್ಥಳಕ್ಕೆ ಆಗಮಿಸಿದ ಚನ್ನಪಟ್ಟಣ ಪೊಲೀಸರು, ರೈತರನ್ನು ಸಮಾಧಾನಪಡಿಸಿದರು.

ಕೂಡಲೇ ರೇಷ್ಮೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ, ರೇಷ್ಮೆಗೂಡು ಖರೀದಿಗೆ ಬದಲಿ ವ್ಯವಸ್ಥೆ ಮಾಡಲು ರೇಷ್ಮೆ ಬೆಳೆಗಾರರು ಒತ್ತಾಯಿಸಿದರು. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಪೊಲೀಸರಿಂದ ರೈತರ ಮನವೊಲಿಸುವ ಕಾರ್ಯ ನಡೆಯಿತು. ಆದರೂ, ರೇಷ್ಮೆ ಹರಾಜು ಆಗದ ಹಿನ್ನೆಲೆಯಲ್ಲಿ ರೈತರು ಮನೆಯತ್ತ ಗೂಡು ಕೊಂಡೊಯ್ದರು. ಬದಲಿ ವ್ಯವಸ್ಥೆ ಮಾಡುವುದಾಗಿ ರೈತರಿಗೆ ಅಧಿಕಾರಿಗಳು ಮನವಿ ಮಾಡಿದರು.

Recommended Video

ಅಪ್ಪುಗಾಗಿ ಅಭಿಮಾನಿಗಳು ಇವತ್ತು ಏನೇನ್ ಮಾಡಿದ್ದಾರೆ ಗೊತ್ತಾ? | Oneindia Kannada

English summary
Karnataka Bandh from Muslim Organizations; Reilers who don't came to buy silk in the Ramanagara Silk Market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X