ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ : ಜ್ಯೂನಿಯರ್ ವಾರ್ಡನ್ ಆಸ್ತಿ 250 ಕೋಟಿ

|
Google Oneindia Kannada News

ರಾಮನಗರ, ಡಿಸೆಂಬರ್ 02 : ಜ್ಯೂನಿಯರ್ ವಾರ್ಡನ್ ಸುಮಾರು 250 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಎಸಿಬಿ ಈ ಸಂಬಂಧ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದೆ.

ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಜ್ಯೂನಿಯರ್ ವಾರ್ಡನ್ ಬಿ.ನಟರಾಜ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಆದಾಯ ಮೀರಿ ಆಸ್ತಿ ಸಂಪಾದಿಸಿದ ನಟರಾಜ್ ವಿರುದ್ಧ ಎಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಅಕ್ರಮ ಆಸ್ತಿ ಸಂಪಾದಿಸಿ ಸಿಕ್ಕಿಬಿದ್ದ ತೆಲಂಗಾಣ ನ್ಯಾಯಾಧೀಶಅಕ್ರಮ ಆಸ್ತಿ ಸಂಪಾದಿಸಿ ಸಿಕ್ಕಿಬಿದ್ದ ತೆಲಂಗಾಣ ನ್ಯಾಯಾಧೀಶ

ಆರ್‌ಟಿಐ ಕಾರ್ಯಕರ್ತರೊಬ್ಬರು ನಟರಾಜ್ ಅವರ ವಿರುದ್ಧ ಕನಕಪುರದ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಎಸಿಬಿಗೆ ನ್ಯಾಯಾಲಯ ಸೂಚನೆ ನೀಡಿತ್ತು.

ಅಕ್ರಮ ಆಸ್ತಿ ಸಂಪಾದಿಸಿ ಸಿಕ್ಕಿಬಿದ್ದ ತೆಲಂಗಾಣ ನ್ಯಾಯಾಧೀಶಅಕ್ರಮ ಆಸ್ತಿ ಸಂಪಾದಿಸಿ ಸಿಕ್ಕಿಬಿದ್ದ ತೆಲಂಗಾಣ ನ್ಯಾಯಾಧೀಶ

Kanakapura Junior warden assets more than 200 core

ನಟರಾಜ್ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಹುಣಸನಹಳ್ಳಿಯಲ್ಲಿರುವ ವಿದ್ಯಾರ್ಥಿನಿಯಲಯದಲ್ಲಿ ಜ್ಯೂನಿಯರ್ ವಾರ್ಡನ್ ಆಗಿದ್ದಾರೆ. ಆದಾಯಮೀರಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಜ್ರ ಖಚಿತ ಊಬ್ಲೋ ವಾಚ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?ವಜ್ರ ಖಚಿತ ಊಬ್ಲೋ ವಾಚ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ನಟರಾಜ್ ಕನಕಪುರದ ನಿವಾಸಿಯಾಗಿದ್ದು, ಗುತ್ತಿಗೆ ಆಧಾರದ ಮೇಲೆ ವಾರ್ಡನ್ ಆಗಿ ಕೆಲಸಕ್ಕೆ ಸೇರಿದ್ದರು. ಮೊದಲು ಅವರಿಗೆ 7200 ರೂ. ಸಂಬಳ ಬರುತ್ತಿತ್ತು. ಸದ್ಯ, 24 ಸಾವಿರ ಸಂಬಳ ಬರುತ್ತಿದೆ. ಆದರೆ, ಸಮಾಜ ಕಲ್ಯಾಣ ಇಲಾಖೆ ಟೆಂಡರ್‌ಗಳನ್ನು ಅಕ್ರಮವಾಗಿ ಪಡೆದು ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

English summary
Ramanagara district Kanakapura based Junior warden Nagaraj assets more than 200 core. Anti-Corruption Bureau (ACB) registered the FIR against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X