ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್‌, ಶಾಸಕ ಗಣೇಶ್‌ ಜೈಲಿಗೆ

|
Google Oneindia Kannada News

ರಾಮನಗರ, ಫೆಬ್ರವರಿ 21: ನಿನ್ನೆ ಗುಜರಾತ್‌ನಲ್ಲಿ ಪೊಲೀಸರ ಬಲೆಗೆ ಬಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರನ್ನು ಇಂದು ರಾಮನಗರ ಸಿಜೆಎಂ ನ್ಯಾಯಾಲಯಕ್ಕೆ ಮುಂದೆ ಹಾಜರುಪಡಿಸಲಾಯಿತು.

ಆರೋಪಿ ಶಾಸಕ ಗಣೇಶ್ ಪೊಲೀಸರಿಗೆ ಸಿಕ್ಕಿ ಬಿದ್ದದ್ದು ಹೇಗೆ?ಆರೋಪಿ ಶಾಸಕ ಗಣೇಶ್ ಪೊಲೀಸರಿಗೆ ಸಿಕ್ಕಿ ಬಿದ್ದದ್ದು ಹೇಗೆ?

ವಿಚಾರಣೆ ನಡೆಸಿದ ನ್ಯಾಯಾಲಯವು ಗಣೇಶ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಅವರನ್ನು ರಾಮನಗರ ಅಥವಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗುತ್ತದೆ.

ಹಲ್ಲೆ ನಡೆದು ತಿಂಗಳ ಬಳಿಕ ಆರೋಪಿ ಶಾಸಕ ಗಣೇಶ್ ಬಂಧನಹಲ್ಲೆ ನಡೆದು ತಿಂಗಳ ಬಳಿಕ ಆರೋಪಿ ಶಾಸಕ ಗಣೇಶ್ ಬಂಧನ

ಕಂಪ್ಲಿ ಶಾಸಕ ಗಣೇಶ್ ಅವರು ಜನವರಿ 19ರಂದು ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಈಗಲ್ ಟನ್ ರೆಸಾರ್ಟ್‌ನಲ್ಲಿ ಹಲ್ಲೆ ಮಾಡಿದ್ದರು, ಜನವರಿ 21 ಕ್ಕೆ ಬಿಡದಿ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಂದಿನಿಂದಲೂ ಅವರು ತಲೆಮರೆಸಿಕೊಂಡಿದ್ದರು.

Kampli MLA JN Ganesh sent to jail, he handed over to judicial costody

ಜೆ.ಎನ್.ಗಣೇಶ್ ಅವರನ್ನು ರಾಮನಗರ ಪೊಲೀಸರು ನಿನ್ನೆ ಗುಜರಾತ್‌ನಲ್ಲಿ ಬಂಧಿಸಿದ್ದರು, ನಿನ್ನೆ ರಾತ್ರಿ ಅವರನ್ನು ಬೆಂಗಳೂರಿಗೆ ಕರೆತರಲಾಯಿತು. ಇಂದು ರಾಮನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅವರ ವೈದ್ಯಕೀಯ ತಪಾಸಣೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಶಾಸಕ ಗಣೇಶ್‌ಗೆ ಜಾಮೀನು ಡೌಟ್, ಕೋರ್ಟ್‌ಗೆ ಹಾಜರು ಪಡಿಸಿದ್ಮೇಲೆ ಏನಾಗಬಹುದು?ಶಾಸಕ ಗಣೇಶ್‌ಗೆ ಜಾಮೀನು ಡೌಟ್, ಕೋರ್ಟ್‌ಗೆ ಹಾಜರು ಪಡಿಸಿದ್ಮೇಲೆ ಏನಾಗಬಹುದು?

14 ದಿನ ಜೈಲಿನಲ್ಲಿ ಕಳೆಯಲಿರುವ ಗಣೇಶ್

14 ದಿನ ಜೈಲಿನಲ್ಲಿ ಕಳೆಯಲಿರುವ ಗಣೇಶ್

ನ್ಯಾಯಾಂಗ ಬಂಧನ ವಿಧಿಸಲಾಗಿರುವ ಕಾರಣ 14 ದಿನಗಳು ಶಾಸಕ ಗಣೇಶ್ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ಕಳೆಯಲಿದ್ದಾರೆ, ಗಣೇಶ್ ಅವರು ಈವರೆಗೆ ಜಾಮೀನು ಅರ್ಜಿ ಹಾಕಿಲ್ಲ. ತಮಗೆ ಆರೋಗ್ಯ ಸಮಸ್ಯೆ ಇರುವುದಾಗಿ ಗಣೇಶ್ ಅವರು ನ್ಯಾಯಾಧೀಶರ ಮುಂದೆ ಮನವಿ ಮಾಡಿದರು ಎನ್ನಲಾಗಿದೆ, ಆದರೆ ನ್ಯಾಯಾಧೀಶರು ಇದಕ್ಕೆ ಸೊಪ್ಪು ಹಾಕಿಲ್ಲ.

ಗಣೇಶ್ ಪರ ವಕೀಲರ ವಾದ

ಗಣೇಶ್ ಪರ ವಕೀಲರ ವಾದ

ಗಣೇಶ್ ಅವರಿಗೆ ಆರೋಗ್ಯ ಸಮಸ್ಯೆ ಇದೆ ಎಂದು ಗಣೇಶ್ ಪರ ವಕೀಲರು ನ್ಯಾಯಾಲಯದ ಮುಂದೆ ಹೇಳಿದ್ದಾರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಹ ನೀಡಿದ್ದಾರೆ ಆದರೆ ಇದಕ್ಕೆ ಸೊಪ್ಪು ಹಾಕದ ನ್ಯಾಯಾಲಯವು, ಜೈಲಿನಿಲ್ಲಿ ಗಣೇಶ್ ಆರೋಗ್ಯದ ನಿಗಾ ಇಡಲು ಪೊಲೀಸರಿಗೆ ಸೂಚಿಸಿದೆ.

ರೆಸಾರ್ಟ್‌ನಲ್ಲಿ ಗಣೇಶ್‌ರಿಂದ ಹಲ್ಲೆ

ರೆಸಾರ್ಟ್‌ನಲ್ಲಿ ಗಣೇಶ್‌ರಿಂದ ಹಲ್ಲೆ

ಈಗಲ್‌ಟನ್ ರೆಸಾರ್ಟ್‌ನಲ್ಲಿ ಶಾಸಕ ಗಣೇಶ್ ಮತ್ತು ಆನಂದ್ ಸಿಂಗ್ ಮಧ್ಯೆ ಗಲಾಟೆ ನಡೆದು ಗಣೇಶ್ ಅವರು ಬಾಟಲಿಯಿಂದ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಿಡದಿ ಪೊಲೀಸರಿಗೆ ಆನಂದ್ ಸಿಂಗ್ ಅವರು ನೀಡಿದ ಹೇಳಿಕೆಯಲ್ಲಿಯೂ ಇದೇ ರೀತಿ ಹೇಳಲಾಗಿದೆ.

ಗಣೇಶ್‌ಗೆ ರಮೇಶ್ ಜಾರಕಿಹೊಳಿ ಬೆಂಬಲ

ಗಣೇಶ್‌ಗೆ ರಮೇಶ್ ಜಾರಕಿಹೊಳಿ ಬೆಂಬಲ

ಗಲಾಟೆಯ ನಂತರ ಕೆಪಿಸಿಸಿಯು ಗಣೇಶ್ ಅವರ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವವನ್ನು ರದ್ದು ಮಾಡಿದೆ. ಆದರೆ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಭೀಮಾನಾಯ್ಕ್ ಅವರುಗಳು ಗಣೇಶ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ಪ್ರಕರಣದಲ್ಲಿ ಗಣೇಶ್ ಅವರು ಬಲಿಪಶು ಆಗಿದ್ದಾರೆ ಎಂದು ಹೇಳುತ್ತಿದ್ದಾರೆ.

English summary
Kampli MLA JN Ganesh was sent to jail. He attacked MLA Anand Singh last month 19 in Eagelton resort. He was arrested by Ramanagar police yesterday in Gujarat. court handed him to judicial coustody for 14 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X