• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಬ್ಬಬ್ಬಾ ಇಷ್ಟು ದೊಡ್ಡ ಕಾಜು ಕಟ್ಲಿ, ವೆಜ್ ಪಫ್ಸ್ ಎಲ್ಲಾದರೂ ನೋಡಿದ್ದೀರಾ?

By ರಾಮನಗರ ಪ್ರತಿನಿಧಿ
|
   ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಕಾಂತಿ ಸ್ವೀಟ್ಸ್ | KAAJU KATLI | RECORD | ONEINDIA KANNADA

   ರಾಮನಗರ, ಜನವರಿ 16: ಪ್ರಪಂಚದಲ್ಲಿ ಏನಾದರೂ ದಾಖಲೆ ಮಾಡಿ ಹೆಸರುಳಿಸಬೇಕು ಎಂಬುದು ಬಹು ಮಂದಿಯ ಅಥವಾ ಹಲವು ಸಂಸ್ಥೆಗಳ ಬಯಕೆ. ಹಾಗೆಯೇ ಸಿಹಿ ತಿನಿಸುಗಳಿಗೆ ಹೆಸರಾದ ಕಾಂತಿ ಸ್ವೀಟ್ಸ್ ಕೂಡ ಇಂಥದ್ದೇ ಒಂದು ದಾಖಲೆ ಮಾಡಿದೆ.

   1051 ಕೆಜಿ ತೂಕದ ಕಾಜು ಕಟ್ಲಿ ಮತ್ತು 106 ಕೆಜಿ ತೂಕದ ವೆಜ್ ಪಪ್ಸ್ ತಿನಿಸು ತಯಾರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಗೊಂಡಿದೆ.

    ನೆಲಮಂಗಲದಲ್ಲಿ ಸಿಹಿ ತಿನಿಸು ತಯಾರಿಕಾ ಘಟಕ

   ನೆಲಮಂಗಲದಲ್ಲಿ ಸಿಹಿ ತಿನಿಸು ತಯಾರಿಕಾ ಘಟಕ

   ನೆಲಮಂಗಲ ಬಳಿಯ ಕೈಗಾರಿಕಾ ವಲಯದಲ್ಲಿ ಇರುವ ಕಾಂತಿ ಸ್ವೀಟ್ಸ್ ತಯಾರಿಕಾ ಘಟಕದಲ್ಲಿ ಪರಿಣತರ ಸಮ್ಮುಖದಲ್ಲಿ ಈ ಎರಡು ತಿನಿಸುಗಳು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.

   ಸಂಕ್ರಾಂತಿ ವಿಶೇಷ: ಇದು ಕಿಚಡಿ ಬರೆದ ಗಿನ್ನಿಸ್ ದಾಖಲೆ ಸರ್ಕಾರ!

    ಪ್ರಥಮ ಬಾರಿಗೆ ಭಾರೀ ಗಾತ್ರದ ತಿನಿಸು ತಯಾರಿ

   ಪ್ರಥಮ ಬಾರಿಗೆ ಭಾರೀ ಗಾತ್ರದ ತಿನಿಸು ತಯಾರಿ

   ಮೂರು ತಲೆಮಾರುಗಳಿಂದ ಬೆಂಗಳೂರಿನ ‌ಅತಿ ದೊಡ್ಡ ಸಿಹಿ ತಿನಿಸು ತಯಾರಕರಾದ ಜನಪ್ರಿಯ ಕಾಂತಿ ಸ್ವೀಟ್ಸ್ ಈ ದಾಖಲೆ ಮಾಡಿದೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಭಾರಿ ಗಾತ್ರ, ಅಗಲ ಮತ್ತು ಉದ್ದದ ಸಿಹಿ ತಿನಿಸು ತಯಾರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಸಂಕ್ರಾಂತಿ ಹಬ್ಬದ ಸಂಭ್ರಮಾಚರಣೆ ಸಮಯದಲ್ಲಿ ಈ ಸಾಧನೆ ಮಾಡಿರುವುದು ಖುಷಿಯನ್ನು ಇಮ್ಮಡಿಗೊಳಿಸಿದೆ.

    1051 ಕೆ.ಜಿ. ತೂಕದ ಕಾಜು ಕಟ್ಲಿಗೆ 600 ಕೆ.ಜಿ ಗೋಡಂಬಿ

   1051 ಕೆ.ಜಿ. ತೂಕದ ಕಾಜು ಕಟ್ಲಿಗೆ 600 ಕೆ.ಜಿ ಗೋಡಂಬಿ

   1051 ತೂಕದ ಕಾಜು ಕಟ್ಲಿಯನ್ನು 600 ಕೆ.ಜಿ ಗೋಡಂಬಿ, 480 ಸಕ್ಕರೆ ಮತ್ತು ತುಪ್ಪ ಬಳಸಿ 11.1 ಅಡಿ ಉದ್ದ, 7.2 ಅಡಿ ಅಗಲ ಮತ್ತು ಮುಕ್ಕಾಲು ಅಡಿ ದಪ್ಪದ ಸಿಹಿ ತಿನಿಸನ್ನು ಹಲವಾರು ಸಿಬ್ಬಂದಿ ಶ್ರಮ ವಹಿಸಿ ಕಾಜು ಕಟ್ಲಿ ತಯಾರಿಸಿದ್ದಾರೆ. ಎರಡು ಸಿಹಿ ತಿನಿಸುಗಳನ್ನು ನುರಿತ ಪಾಕ ಪ್ರವೀಣರು ಹಲವು ದಿನಗಳಿಂದ ಶ್ರದ್ಧೆ ಮತ್ತು ಶ್ರಮವಹಿಸಿ ತಯಾರುಮಾಡಿದ್ದಾರೆ. ಎಲ್ಲಾ ರೀತಿಯಿಂದಲೂ ಪರೀಕ್ಷಿಸಿ ಇಂಡಿಯಾ ಬುಕ್ ಅಫ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಿಸಿಕೊಂಡಿದ್ದೇವೆ ಎಂದು ಘೋಷಿಸಿದರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಿಬ್ಬಂದಿ ಪ್ರದೀಪ್.

   ಕಿರಿಯ ಕವಯಿತ್ರಿ 'ಮಾನ್ಯ'ಳ ಕೃತಿಗೆ ಮೂರು ಬಿರುದುಗಳು

    106 ಕೆ.ಜಿ. ತೂಕದ ವೆಜ್ ಪಫ್ಸ್

   106 ಕೆ.ಜಿ. ತೂಕದ ವೆಜ್ ಪಫ್ಸ್

   106 ಕೆಜಿ ತೂಕದ ವೆಜ್ ಪಫ್ಸ್ 4.5 ಅಡಿ ಉದ್ದವಿದ್ದು, 2.75 ಅಗಲ ಮತ್ತು ಮೂಕ್ಕಾಲು ಅಡಿ ದಪ್ಪ ಇದೆ. ಈ ಬಗ್ಗೆ ಮಾತನಾಡಿದ ಕಾಂತಿ‌ ಸ್ವೀಟ್ಸ್ ಮಾಲೀಕರಾದ ಶಿಕಾ ಶರ್ಮ, "ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದಪ್ಪ ಹಾಗೂ ಅಗಲವಾದ ಸಿಹಿ ತಿನಿಸನ್ನು ತಯಾರಿಸಲಾಗಿದೆ. ಈ ಮುಖಾಂತರ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡಿದಿರುವುದಕ್ಕೆ ಸಂತಸವಾಗುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು.

   English summary
   Kanthi Sweets, a caju cutli weighing 1051kg and a Veg Puffs weighing 106kg, is included in the India Book of Records
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more