ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವ ಶಕ್ತಿಗಳನ್ನು ಸೆಳೆಯಲು ಮುಂದಾದ ಜೆಡಿಎಸ್

By ನಮ್ಮ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 22 : ಯುವ ಜನಾಂಗವನ್ನು ತನ್ನತ್ತ ಸೆಳೆಯುವ ಸಲುವಾಗಿ ರಾಮನಗರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಹಾಗೂ ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ನೇತೃತ್ವದಲ್ಲಿ ರಾಜ್ಯ ಯುವ ಘಟಕದ ಕಾರ್ಯಕಾರಿಣಿ ಸಭೆ ನಡೆಯಿತು.

ರೇಷ್ಮೆನಗರಿ ರಾಮನಗರದಲ್ಲಿ ನಡೆದ ಕಾರ್ಯಕಾರಣಿಯನ್ನು ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಉದ್ಘಾಟಿಸಿದರು. ಹಲವು ಯೋಜನೆಗಳ ಮೂಲಕ ಯುವಜನಾಂಗವನ್ನ ಪಕ್ಷದತ್ತ ಆಕರ್ಷಿಸುವ ದೃಷ್ಠಿಯಿಂದ ಕಾರ್ಯಕಾರಿಣಿ ಸಭೆಯನ್ನು ನಡೆಸಲಾಯಿತು.

ನ. 15 ರಂದು ಬಸವನಬಾಗೇವಾಡಿಯಿಂದ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಆರಂಭನ. 15 ರಂದು ಬಸವನಬಾಗೇವಾಡಿಯಿಂದ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಆರಂಭ

jds

ಕಾರ್ಯಕಾರಣಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, 'ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಆಡಳಿತದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಅಲ್ಲದೇ ರಾಷ್ಟ್ರೀಯ ಪಕ್ಷಗಳ ಫಲ್ಯಗಳು ಹಾಗೂ ದುರಾಡಳಿತದ ಬಗ್ಗೆ ಜನರಲ್ಲಿ ತಿಳಿ ಹೇಳುವುದರ ಮೂಲಕ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ' ಎಂದು ಹೇಳಿದರು.

ಕುಟುಂಬ, ರಾಜಕಾರಣದ ಸನ್ನಿವೇಶ ತೆರೆದಿಟ್ಟ ಎಚ್ ಡಿಕೆ-ಅನಿತಾ ಸಂದರ್ಶನಕುಟುಂಬ, ರಾಜಕಾರಣದ ಸನ್ನಿವೇಶ ತೆರೆದಿಟ್ಟ ಎಚ್ ಡಿಕೆ-ಅನಿತಾ ಸಂದರ್ಶನ

ಕಾರ್ಯಕಾರಣಿಯಲ್ಲಿ ಮಾತನಾಡಿದ ದೇವೇಗೌಡ, 'ಪಕ್ಷ ಸಾಮಾಜಿಕ ಜಾಲತಾಣಗಳ ಬಳಕೆ ವಿಚಾರದಲ್ಲಿ ಹಿನ್ನಡೆಯಲ್ಲಿದೆ. ಜಾಲತಾಣಗಳನ್ನು ಬಳಸಿಕೊಳ್ಳಬೇಕು ಎಂದು. ಸ್ವಂತ ಶಕ್ತಿಯಿಂದ ಜೆಡಿಎಸ್ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ. ಆದರೆ, ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷ ಉಳಿಯುವುದು ಕಷ್ಟವಾಗಿದ್ದು. ಯುವ ಶಕ್ತಿಯನ್ನು ಸೆಳೆಯುವ ಮೂಲಕ ನಿರುದ್ಯೋಗವನ್ನು ತೊಡೆಯುವ ನಿಟ್ಟಿನಲ್ಲಿ ಪಕ್ಷ ಕೆಲಸ ಮಾಡಲಿದೆ' ಎಂದರು.

ಕುಮಾರಸ್ವಾಮಿ ರಾಜ್ಯ ಪ್ರವಾಸಕ್ಕೆ ಹೈಟೆಕ್ ಬಸ್, ವಿಶೇಷತೆ ಏನು?ಕುಮಾರಸ್ವಾಮಿ ರಾಜ್ಯ ಪ್ರವಾಸಕ್ಕೆ ಹೈಟೆಕ್ ಬಸ್, ವಿಶೇಷತೆ ಏನು?

ಕಾರ್ಯಕಾರಿಣಿ ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಕಾಂತರಾಜು, ರಮೇಶ್‌ಗೌಡ, ಶ್ರೀಕಾಂತೇಗೌಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 175 ಯುವ ಮುಖಂಡರು ಪಾಲ್ಗೊಂಡಿದ್ದರು.

English summary
Karnataka Janata Dal (Secular) youth wing executive meet held at Bidadi, Ramanagara on October 21, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X