ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚನ್ನಪಟ್ಟಣ JDS ಕಚೇರಿ ಧ್ವಂಸ, ಗಲಾಟೆಗೆ ಕಾರಣ ಅನಿತಾ ಕುಮಾರಸ್ವಾಮಿ?

|
Google Oneindia Kannada News

Recommended Video

ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಜಟಾಪಟಿಗೆ ಅನಿತಾ ಕುಮಾರಸ್ವಾಮಿ ಕಾರಣ? | Oneindia Kannada

ಚನ್ನಪಟ್ಟಣ, ಡಿಸೆಂಬರ್ 05: ಸಿಎಂ ಅವರು ಆಯ್ಕೆ ಆಗಿರುವ ಕ್ಷೇತ್ರ ಚನ್ನಪಟ್ಟಣದಲ್ಲೇ ಜೆಡಿಎಸ್‌ ಕಾರ್ಯಕರ್ತರು ಪರಸ್ಪರ ಕೈ-ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ.

ಚನ್ನಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ಇಂದು ಎರಡು ಬಣದ ಕಾರ್ಯಕರ್ತರು ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದು, ಜೆಡಿಎಸ್ ಕಚೇರಿಯ ಪೀಠೋಪಕರಣಗಳೆಲ್ಲಾ ಧ್ವಂಸಗೊಂಡಿವೆ. ಈ ಗಲಾಟೆಗೆ ಕಾರಣ ಅನಿತಾ ಕುಮಾರಸ್ವಾಮಿ ಎಂಬ ಸುದ್ದಿಯೂ ಇದೆ.

ಜೆಡಿಎಸ್‌ ಮುಖಂಡ ಜಯಮುತ್ತು ಅವರ ಸದಸ್ಯರು ಇಂದು ಏಕಾ-ಏಕಿ ಜೆಡಿಎಸ್‌ ಕಚೇರಿಗೆ ನಿಗ್ಗಿ ಇಂದು ಕಚೇರಿಯಲ್ಲಿ ನಡೆಯುತ್ತಿರುವ ಸಭೆಗೆ ಜಯಮುತ್ತು ಅವರನ್ನು ಏಕೆ ಕರೆದಿಲ್ಲ ಎಂದು ಮುಖಂಡರಲ್ಲಿ ಪ್ರಶ್ನೆ ಮಾಡಿದ್ದಾರೆ. ಮಾತಿನ ಕಚಮಕಿ ದೊಡ್ಡದಾಗಿ ಹೊಡೆದಾಟದ ಹಂತಕ್ಕೆ ಹೋಗಿದೆ.

ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ತಡರಾತ್ರಿವರೆಗೂ ನಡೆದಿದ್ದೇನು? ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ತಡರಾತ್ರಿವರೆಗೂ ನಡೆದಿದ್ದೇನು?

ಜಯಮುತ್ತು ಅವರು ಜೆಡಿಎಸ್‌ನ ತಾಲ್ಲೂಕು ಅಧ್ಯಕ್ಷರಾಗಿದ್ದು, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದ್ದರು. ಆದರೆ ಇತ್ತೀಚೆಗೆ ಪಕ್ಷವು ಅವರನ್ನು ನಿರ್ಲಕ್ಷ್ಯ ಮಾಡುತ್ತಿತ್ತು, ಇದು ಜಯಮುತ್ತು ಅವರಲ್ಲಿ ಅಸಮಾಧಾನ ಹುಟ್ಟು ಹಾಕಿತ್ತು.

ಜಯಮುತ್ತು ವಿರುದ್ಧ ವರದಿಗಳು

ಜಯಮುತ್ತು ವಿರುದ್ಧ ವರದಿಗಳು

ಇತ್ತೀಚೆಗೆ ಅನಿತಾ ಕುಮಾರಸ್ವಾಮಿ ಅವರು ಅಕ್ಕೂರಿಗೆ ಬಂದು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಆದರೆ ಸ್ಥಳೀಯರೇ ಆದ ಜಯಮುತ್ತು ಅವರಿಗೆ ಆಹ್ವಾನ ನೀಡಿರಲಿಲ್ಲ ಇದು ಜೈಮುತ್ತು ಅವರನ್ನು ಕೆರಳಿಸಿತ್ತು. ಅಷ್ಟೆ ಅಲ್ಲದೆ ಅನಿತಾ ಕುಮಾರಸ್ವಾಮಿ ಅವರ ಒಡೆತನದ ಸುದ್ದಿವಾಹಿನಿಯಲ್ಲಿ ಜಯಮುತ್ತು ವಿರುದ್ಧ ವರದಿಗಳನ್ನು ಪ್ರಕಟಿಸಲಾಗಿತ್ತು.

ಜೆಡಿಎಸ್ ಶಾಸಕಾಂಗ ಸಭೆ: ಆಪರೇಷನ್ ಕಮಲ ಪ್ರಮುಖ ಚರ್ಚೆ ವಿಷಯಜೆಡಿಎಸ್ ಶಾಸಕಾಂಗ ಸಭೆ: ಆಪರೇಷನ್ ಕಮಲ ಪ್ರಮುಖ ಚರ್ಚೆ ವಿಷಯ

ಕುಮಾರಸ್ವಾಮಿ ಗೆಲುವಿಗೆ ಶ್ರಮ

ಕುಮಾರಸ್ವಾಮಿ ಗೆಲುವಿಗೆ ಶ್ರಮ

ಚುನಾವಣೆ ಸಮಯದಲ್ಲಿ ಜಯಮುತ್ತು ಅವರು ಕುಮಾರಸ್ವಾಮಿ ಅವರಿಗೆ ಆಪ್ತರ ವಲಯದಲ್ಲಿ ಗುರುತಿಸಿಕೊಂಡು ಸಾಕಷ್ಟು ಓಡಾಡಿದ್ದರು. ಆದರೆ ಅನಿತಾ ಕುಮಾರಸ್ವಾಮಿ ಅವರು ಜೈಮುತ್ತು ಅವರನ್ನು ಪಕ್ಷದ ಕಾರ್ಯಕ್ರಮಗಳಿಂದ ದೂರ ಇಟ್ಟಿದ್ದರು, ಬದಲಿಗೆ ಜಯಕುಮಾರ್‌, ಲಿಂಗೇಶ್‌ಗೆ ಮಣೆ ಹಾಕಿದ್ದರು. ಇದು ಸಹಜವಾಗಿ ಜಯಮುತ್ತು ಅವರನ್ನು ಕೆರಳಿಸಿತ್ತು. ಇದರ ವಿರುದ್ಧ ಅವರು ಸುದ್ದಿಗೋಷ್ಠಿ ಸಹ ಮಾಡಿ ಅಳಲು ತೋಡಿಕೊಂಡಿದ್ದರು.

ದೂರು ಕೊಟ್ಟಿದ್ರೆ ಸಿದ್ದರಾಮಯ್ಯ ನನ್ನ ಬಳಿ ಮಾತನಾಡಲಿ: ರೇವಣ್ಣದೂರು ಕೊಟ್ಟಿದ್ರೆ ಸಿದ್ದರಾಮಯ್ಯ ನನ್ನ ಬಳಿ ಮಾತನಾಡಲಿ: ರೇವಣ್ಣ

ಅನಿತಾ ಕುಮಾರಸ್ವಾಮಿ ವಿರುದ್ಧ ಆಕ್ರೋಶ

ಅನಿತಾ ಕುಮಾರಸ್ವಾಮಿ ವಿರುದ್ಧ ಆಕ್ರೋಶ

ವಾಹಿನಿಯಲ್ಲಿ ಸುದ್ದಿ ಪ್ರಸಾರವಾದ ನಂತರ ಪಕ್ಷದ ವಾಟ್ಸಾಫ್‌ ಗ್ರೂಫ್‌ಗಳಲ್ಲಿ ಜಯಮುತ್ತು ಪರ ವಿರೋಧ ಚರ್ಚೆಗಳು ಆರಂಭವಾಗಿದ್ದು, ಅನಿತಾ ಕುಮಾರಸ್ವಾಮಿ ವಿರುದ್ಧ ಜಯಮುತ್ತು ಬೆಂಬಲಿಗರು ಕಿಡಿ ಕಾರಿದ್ದಾರೆ. ಅನಿತಾ ಕುಮಾರಸ್ವಾಮಿ ಮತ್ತೊಮ್ಮೆ ಕ್ಷೇತ್ರಕ್ಕೆ ಬಂದರೆ ವಾಪಸ್ ಕಳಿಸುವುದಾಗಿ ಸಹ ಚರ್ಚೆಗಳು ನಡೆದಿವೆ.

ದೇವೇಗೌಡ-ಎಚ್‌ಡಿಕೆ ಯಿಂದ ಮಾತ್ರ ಸಂಧಾನ ಸಾಧ್ಯ

ದೇವೇಗೌಡ-ಎಚ್‌ಡಿಕೆ ಯಿಂದ ಮಾತ್ರ ಸಂಧಾನ ಸಾಧ್ಯ

ಲೋಕಸಭೆ ಚುನಾವಣೆ ಸಮೀಪದಲ್ಲಿದ್ದಾಗ ಸಿಎಂ ಅವರ ಕ್ಷೇತ್ರದಲ್ಲಿಯೇ ಜೆಡಿಎಸ್ ಕಾರ್ಯಕರ್ತರು ಹೀಗೆ ಕಚ್ಚಾಡಿರುವುದು ಚನ್ನಪಟ್ಟಣದಲ್ಲಿ ಆತಂಕ ಮೂಡಿಸಿದೆ. ದೇವೇಗೌಡ ಅಥವಾ ಕುಮಾರಸ್ವಾಮಿ ಅವರು ಬಂದು ಸಂಧಾನ ಮಾಡದ ಹೊರತು ಎರಡು ಬಣಗಳು ಒಂದಾಗುವ ಸಾಧ್ಯತೆ ಕಡಿಮೆ ಇದೆ.

English summary
Chanpatna JDS devided into two parts and they fight with each other in JDS party office Chanpatna. Jayamuthu supporters attack the jds party office today and had fight with Linganna and Jayakumar supporters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X