ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸದಸ್ಯೆ ಬೆಂಬಲದಿಂದ ಮಾಗಡಿ ಪುರಸಭೆ ಜೆಡಿಎಸ್ ತೆಕ್ಕೆಗೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 9: ರಾಮನಗರ ಜಿಲ್ಲೆ ಮಾಗಡಿ ಪುರಸಭೆ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಓರ್ವ ಸದಸ್ಯೆಯ ಬೆಂಬಲದೊಂದಿಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಧ್ಯಕ್ಷ ಸ್ಥಾನ ಅಲಂಕರಿಸುವ ಮೂಲಕ ಪುರಸಭೆಯ ಆಡಳಿತ ಚುಕ್ಕಾಣಿ ಜೆಡಿಎಸ್ ಪಾಲಾಗಿದೆ.

ಭಾಗ್ಯಮ್ಮ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ವಿಜಯ ರೂಪೇಶ್, ಕಾಂಗ್ರೆಸ್ ಪಕ್ಷದಿಂದ ಶಿವರುದ್ರಮ್ಮ ವಿಜಯ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಯಾರೂ ವಾಪಸ್ ಪಡೆಯದ ಕಾರಣ ಚುನಾವಣಾಧಿಕಾರಿ, ತಹಶೀಲ್ದಾರ ಬಿ.ಜಿ. ಶ್ರೀನಿವಾಸ್ ಪ್ರಸಾದ್ ಸದಸ್ಯರನ್ನು ಕೈ ಎತ್ತಿಸುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದರು.

ಈ ವೇಳೆ ಜೆಡಿಎಸ್‍ನ ವಿಜಯ ರೂಪೇಶ್ ಪರ 14 ಮಂದಿ, ಕಾಂಗ್ರೆಸ್‌ನ ಶಿವರುದ್ರಮ್ಮ ವಿಜಯ್ ಕುಮಾರ್ ಪರ 10 ಮಂದಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. ಕಾಂಗ್ರೆಸ್ ಅಭ್ಯರ್ಥಿಗಿಂತ ಜೆಡಿಎಸ್ ಅಭ್ಯರ್ಥಿ, 16ನೇ ವಾರ್ಡ್‍ನ ವಿಜಯ ರೂಪೇಶ್ 4 ಮತಗಳಿಂದ ಅಧ್ಯಕ್ಷರಾಗಿ ಆಯ್ಕೆಯಾದರು. ಈ ವೇಳೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.

Ramanagara: JDS Member Vijaya Rupesh Elected As Magadi Municipality President With BJP Member Support

ಜೆಡಿಎಸ್ ಬೆಂಬಲಿಸಿದ ಬಿಜೆಪಿ ಸದಸ್ಯೆ
23 ಮಂದಿ ಸದಸ್ಯ ಬಲದ ಪುರಸಭೆಗೆ ಜೆಡಿಎಸ್ 12, ಕಾಂಗ್ರೆಸ್ 10, ಬಿಜೆಪಿ 1, ಶಾಸಕ ಎ. ಮಂಜುನಾಥ್ ಮತ ಒಂದು ಮತ ಇದ್ದು, ಶಾಸಕರು ಮತ್ತು ಬಿಜೆಪಿ ಸದಸ್ಯೆ ಜೆಡಿಎಸ್ ಸದಸ್ಯರಿಗೆ ಬೆಂಬಲ ಸೂಚಿಸಿದರು.

ಅಧ್ಯಕ್ಷರ ಆಯ್ಕೆಗೆ ಬೆಂಬಲ‌ ಸೂಚಿಸಿದ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಧನಂಜಯ, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್. ಬಸವರಾಜುರವರಿಗೆ ಶಾಸಕ ಎ. ಮಂಜುನಾಥ್ ಅಭಿನಂದನೆ ಸಲ್ಲಿಸಿದರು.

ಉಪಾಧ್ಯಕ್ಷ ರೆಹಮತ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಕಾಂತರಾಜು, ಸದಸ್ಯರಾದ ಎಂ.ಎನ್. ಮಂಜುನಾಥ್, ಎಂ.ಆರ್. ರೇಖಾ, ಜಯರಾಮು, ಆಶ್ವತ್ಥ, ಹೇಮಲತಾ, ಅನಿಲ್ ಕುಮಾರ್, ಕೆ.ವಿ. ಬಾಲು, ಭಾಗ್ಯಮ್ಮ, ನಾರತ್ನಮ್ಮ, ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ, ಬೈರಪ್ಪ ಇತರರು ಇದ್ದರು.

ನೂತನ ಅಧ್ಯಕ್ಷೆ ವಿಜಯ ರೂಪೇಶ್ ಪ್ರತಿಕ್ರಿಯೆ
ನೂತನ ಅಧ್ಯಕ್ಷೆ ವಿಜಯ ರೂಪೇಶ್ ಮಾತನಾಡಿ, "ಮಾಗಡಿ ಪಟ್ಟಣದ 23 ವಾರ್ಡ್‍ಗಳಿಗೆ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳನ್ನು ಪಟ್ಟಿ ಮಾಡಿ ಶಾಸಕ ಎ. ಮಂಜುನಾಥ್ ಗಮನಕ್ಕೆ ತಂದು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅಧ್ಯಕ್ಷೆಯಾಗಲು ಸಹಕಾರ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕ ಎ. ಮಂಜುನಾಥ್, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್. ಬಸವರಾಜು ಸೇರಿದಂತೆ ಎಲ್ಲಾ ಸದಸ್ಯರಿಗೆ ಅಭಿನಂದಿಸುವುದಾಗಿ,'' ತಿಳಿಸಿದರು.

Ramanagara: JDS Member Vijaya Rupesh Elected As Magadi Municipality President With BJP Member Support

ಶಾಸಕ ‌ಎ. ಮಂಜುನಾಥ್ ಪ್ರತಿಕ್ರಿಯೆ
ಶಾಸಕ ಎ. ಮಂಜುನಾಥ್ ಮಾತನಾಡಿ, "ಪಟ್ಟಣದ ಅಭಿವೃದ್ಧಿಗೆ ಕಾಯಕಲ್ಪ ನೀಡಲಾಗುತ್ತಿದೆ. ನೂತನ ಅಧ್ಯಕ್ಷೆ ವಿಜಯ ರೂಪೇಶ್ ವಿದ್ಯಾವಂತೆಯಾಗಿದ್ದು, ಸದಸ್ಯೆಯಾಗಿ ಸಾಕಷ್ಟು ಅನುಭವುಳ್ಳವರಾಗಿದ್ದು, ಪಟ್ಟಣದ ಅಭಿವೃದ್ಧಿಯ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಇವರಿಗೆ ಪಟ್ಟಣದ ಅಭಿವೃದ್ಧಿಯಾಗಲಿದೆ. ಪಟ್ಟಣದ ಎಲ್ಲಾ ವರ್ಗದ ಸಮಾಜಗಳು ವಾಸಿಸುತ್ತಿದ್ದಾರೆ. ಎಲ್ಲರಿಗೂ ನ್ಯಾಯಸಮ್ಮತವಾದ ಆಡಳಿತ ಮತ್ತು ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಂಡು ಹೋಗುವಂತೆ," ಅಧ್ಯಕ್ಷೆಗೆ ಕಿವಿಮಾತು ಹೇಳಿದರು.

"ರಾಜ್ಯದ ಎಲ್ಲಾ ಪಟ್ಟಣಗಳು ಮುಂದುವರೆದಂತೆ ಇಲ್ಲೂ ಮುಂದುವರೆದಿದೆ. ಪುರಸಭೆ, ನಗರಸಭೆ, ಪಟ್ಟಣ ಪಂಚಾಯತಿಗಳಿಗೆ ಸರಕಾರ ವಿಶೇಷ ಅನುದಾನ ನೀಡುತ್ತಿಲ್ಲ, ಅನುದಾನ ನೀಡಿದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ. ಬಿಡದಿ ಪುರಸಭೆಗೆ 30 ಕೋಟಿ, ಮಾಗಡಿ ಪುರಸಭೆಗೆ 30 ಕೋಟಿ ರೂ. ಅನುದಾನ ನೀಡುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಲಾಗಿದೆ. ಸ್ಲಂ ಬೋರ್ಡ್‌ಗಳಿಂದ ನಡೆಯುತ್ತಿರುವ ಮನೆಗಳ ನಿರ್ಮಾಣ ಪೂರ್ಣಗೊಳಿಸಿ ಇನ್ನೊಂದು ತಿಂಗಳ ಒಳಗೆ ಹಕ್ಕುಪತ್ರ ನೀಡಲಾಗುವುದು," ಎಂದು ಹೇಳಿದರು.

ಎಚ್.ಎಂ. ರೇವಣ್ಣ ಶಾಸಕರಾದ ಅವಧಿಯಲ್ಲಿ ನೀಡಿರುವ ಆಶ್ರಯ ನಿವೇಶನಗಳು ಸಮರ್ಪಕವಾಗಿಲ್ಲ. ಈ ಸಂಬಂಧ ಸಭೆ ಮಾಡಿ ಅರ್ಹ ಫಲಾನುಭವಿಗಳಿಗೆ ಆಶ್ರಯ ನಿವೇಶನ ನೀಡಿ ಖಾತೆ ಮಾಡಿಸಿಕೊಡುವಂತಹ ಕೆಲಸಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಪಟ್ಟಣದ ರಸ್ತೆಗಳ ಅಭಿವೃದ್ಧಿ, ಎಲ್‍ಇಡಿ ಲೈಟ್ ಅಳವಡಿಸುವ ಕೆಲಸ ಮಾಡಲಾಗುವುದು, ಮುಖ್ಯಾಧಿಕಾರಿ ಸದಸ್ಯರುಗಳೊಂದಿಗೆ ಸ್ಪಂದನೆ ಇಲ್ಲ ಎಂಬ ಮಾತುಗಳು ಕೇಳಿಬಂದಿದ್ದು, ಇಬ್ಬರ ನಡುವೆ ಸಮನ್ವಯ ಮೂಡಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಪಟ್ಟಣದ ಒಳಚರಂಡಿ ಸಮರ್ಪಕವಾಗಿಲ್ಲ, ಸಮರ್ಪಕ ಒಳಚರಂಡಿ ಕಾಮಗಾರಿ ಮಾಡಲು ನಗರಾಭಿವೃದ್ಧಿ ಸಚಿವರಲ್ಲಿ ಮನವಿ ಮಾಡಿದ್ದು, ಡಿಪಿಆರ್ ಮಾಡಲು ಪುರಸಭೆಯಿಂದ 5 ಲಕ್ಷ ರೂ. ಹಣ ಕಟ್ಟಲು ಕೆಆರ್‍ಡಬ್ಲ್ಯೂ ಆದೇಶಿಸಿದ್ದು, ಆ ಹಣ ಕಟ್ಟಿ 90 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂಬ ಭರವಸೆ ನೀಡಿದರು.

Recommended Video

ಮೊಸರು ಖರೀದಿಗಾಗಿ ರೈಲನ್ನೇ ನಿಲ್ಲಿಸಿದ ಪಾಕಿಸ್ತಾನದ ರೈಲ್ವೇ ಚಾಲಕ:ನಂತ್ರ ಆಗಿದ್ದೇನು? | Oneindia Kannada

English summary
Vijaya Rupesh has been elected by the JDS party in the election for the seat of the Magadi Municipality President of Ramanagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X