ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನುಷ್ಕ ಶೆಟ್ಟಿ ಅಣ್ಣನ ಹತ್ಯೆಗೆ ಸಂಚು: ಆರೋಪಿಗಳ ಬಂಧನಕ್ಕೆ ಆಗ್ರಹ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂನ್ 16: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ದಿವಂಗತ ಮತ್ತಪ್ಪ ರೈ ಆಪ್ತ ಹಾಗೂ ಸಿನಿಮಾ ನಟಿ ಅನುಷ್ಕಾ ಶೆಟ್ಟಿ ಅಣ್ಣ ಬಿ. ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿರುವ ಭೂಗತ ಲೋಕದ ವ್ಯಕ್ತಿಗಳನ್ನು ಬಂಧಿಸುವಂತೆ ಜಯ ಕರ್ನಾಟಕ ಜನಪರ ವೇದಿಕೆ ಆಗ್ರಹಿಸಿದೆ.

ಬಿ. ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿದವರನ್ನು ಬಂಧಿಸುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಜವರೇಗೌಡಗೆ ಜಯ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಮುಖೇನ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರು ಮತ್ತು ಗೃಹ ಇಲಾಖೆಯ ಅಧಿಕಾರಿಗಳಿಗೆ ಬಿ. ಗುಣರಂಜನ್ ಶೆಟ್ಟಿ ಹತ್ಯೆ ನಡೆಸಲು ಮುಂದಾಗಿರುವ ಪಾತಕಿಗಳ ವಿರುದ್ಧ ಉನ್ನತ್ತ ಮಟ್ಟದಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರನ್ನು ಈ ಕೂಡಲೇ ಬಂಧಿಸಬೇಕು ಹಾಗೂ ಗುಣರಂಜನ್ ಶೆಟ್ಟಿಗೆ ಸೂಕ್ತ ಭದ್ರತೆ ನೀಡಬೇಕೆಂದು ವೇದಿಕೆಯ ಸದಸ್ಯರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ನಟಿ ಅನುಷ್ಕಾಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್! ನಟಿ ಅನುಷ್ಕಾಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್!

ಕಳೆದ ಒಂದು ವಾರದಿಂದ ಮಾಧ್ಯಮದಲ್ಲಿ ಖ್ಯಾತ ಪರಿಸರವಾದಿಗಳು ಹಾಗೂ ಯುವ ಸಂಸ್ಥಾಪಕ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿಯವರ ಹತ್ಯೆಗೆ ಭೂಗತ ಪ್ರಪಂಚದ ಕೆಲ ವ್ಯಕ್ತಿಗಳ ತಂಡವೊಂದು ಸಂಚು ರೂಪಿಸಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Jaya Karnataka Janapara Organization Urge to Arrest Who Plan to Kill Anushka Shetty Brother

ಈ ಸುದ್ದಿ ತಿಳಿದು ನಮಗೆಲ್ಲ ದಿಗ್ಬ್ರಮೆ ಸೃಷ್ಠಿಯಾಗಿದೆ ಎಂದು ವೇದಿಕೆಯ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಮನವಿ ಸಲ್ಲಿಕೆ ವೇಳೆ ವೇದಿಕೆ ಜಿಲ್ಲಾ ಉಪಾಧ್ಯಕ ಪಿಚ್ಚನಗೆರೆ ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್. ಎಂ. ಗಿರೀಶ್, ಕನಕಪುರ ತಾಲೂಕು ಉಪಾಧ್ಯಕ್ಷ ತಿಮ್ಮರಾಜು, ಜಿಲ್ಲಾ ಮುಖಂಡರಾದ ನವೀನ್‍ ನಾಯ್ಕ್, ಗಿರೀಶ್‍ ಗೌಡ, ಎಂ. ಸತೀಶ್, ದೀಪು, ಸಚಿನ್, ಸತೀಶ್, ಉಲ್ಲಾಸ್ ಮತ್ತಿತರರು ಭಾಗವಹಿಸಿದ್ದರು

ಕಾಶ್ಮೀರಿ ಪಂಡಿತರ ಬಗ್ಗೆ ಹೇಳಿಕೆ: ಸಾಯಿ ಪಲ್ಲವಿ ವಿರುದ್ಧ ದೂರು ಕಾಶ್ಮೀರಿ ಪಂಡಿತರ ಬಗ್ಗೆ ಹೇಳಿಕೆ: ಸಾಯಿ ಪಲ್ಲವಿ ವಿರುದ್ಧ ದೂರು

ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿ ಸಾಮಾಜಿಕ ಹಾಗೂ ಪರಿಸರದ ಮೇಲಿನ ಕಾಳಜಿಗೆ ಬೆನ್ನೆಲುಬಾಗಿದ್ದಾರೆ. ರಾಜ್ಯಾದ್ಯಂತ ಸಾವಿರಾರು ಕಾರ್ಯಕರ್ತರ ಜೊತೆ ಶ್ರಮಿಸುತ್ತಿದ್ದಾರೆ. ಅವರ ಜನಪ್ರಿಯತೆಯನ್ನು ಸಹಿಸದ ಕೆಲವರು ಹತ್ಯೆಗೆ ಸಂಚು ರೂಪಿಸಿದ್ದಾರೆ. ಅಂತಹ ದುಷ್ಟರನ್ನು ಪೋಲಿಸರು ಮಟ್ಟಹಾಕಬೇಕು ಎಂದು ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Jaya Karnataka Janapara Organization Urge to Arrest Who Plan to Kill Anushka Shetty Brother

ಮನ್ವಿತ್ ಮುತ್ತಪ್ಪ ರೈ ಅಕ್ಕನ ಮಗ ಅಲ್ಲ; ಮುತ್ತಪ್ಪ ರೈ ಅಂತಿಮ ದಿನಗಳವರೆಗೂ ಆಸರೆಯಾಗಿ ನಿಂತಿದ್ದು ನಾನು ಹಾಗೂ ಗುಣರಂಜನ್ ಶೆಟ್ಟಿ ಇಬ್ಬರು ಮಾತ್ರ. ಗುಣರಂಜನ್ ಶೆಟ್ಟಿ ಮುತ್ತಪ್ಪ ರೈ ನಿಧನದ ನಂತರದಲ್ಲಿ ನಮ್ಮ ಸಂಘಟನೆಯ ಅಧ್ಯಕ್ಷರೊಂದಿಗಿನ ಮನಸ್ತಾಪದಿಂದಾಗಿ ಜಯ ಕರ್ನಾಟಕ ಜನಪರ ವೇದಿಕೆ ಎಂಬ ಸಂಘಟನೆ ಹುಟ್ಟುಹಾಕಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ನಾವೆಲ್ಲ ಆತ್ಮೀಯರಾಗಿದ್ದೇವೆ, ಎಲ್ಲರೂ ಮುತ್ತಪ್ಪ ರೈ ಅಣ್ಣನ ಹುಡುಗರೇ ಎಂದು ಮುತ್ತಪ್ಪ ರೈ ಆಪ್ತ ಹಾಗೂ ಸಂಬಂಧಿ ಪ್ರಕಾಶ್ ರೈ ತಿಳಿಸಿದ್ದಾರೆ.

Recommended Video

5G internet ಇದೇ ವರ್ಷಾಂತ್ಯದಲ್ಲಿ ಭಾರತದಾದ್ಯಂತ ಚಾಲ್ತಿಯಲ್ಲಿರಲಿದೆ | *India | OneIndia Kannada

ಇನ್ನೂ ಮುತ್ತಪ್ಪ ರೈ ಸಂಬಂಧಿ ಮನ್ವಿತ್ ರೈ, ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರೈ, "ಮನ್ವಿತ್ ಮುತ್ತಪ್ಪ ರೈ ಅವರ ಅಕ್ಕನ ಮಗ ಅಲ್ಲ, ಅವರ ಸೋದರತ್ತೆಯ ಮೊಮ್ಮಗ, ಆತ ಕೇವಲ 2-3 ವರ್ಷಗಳಷ್ಟೆ ಅಣ್ಣನ ಜೊತೆ ಇದ್ದ. ನಂತರ ದಿನಗಳಲ್ಲಿ ಅಣ್ಣನಿಗೆ ದ್ರೋಹ ಮಾಡಿ ಹೊರ ಹೋದ. ಅಣ್ಣನ ದುಡ್ಡು ತಿಂದು ಮೋಸ ಮಾಡಿ ಹೊರಹೋಗಿ ಅಣ್ಣನ ಬಗ್ಗೆ ಇಲ್ಲ ಸಲ್ಲದ ಮಾತನಾಡಿದ ವ್ಯಕ್ತಿ, ಇಂದು ಮುತ್ತಪ್ಪ ರೈ ಅಣ್ಣನ ಹೆಸರು ಬಳಸಿಕೊಳ್ಳುತ್ತಿದ್ದಾರೆ" ಎಂದು ಕಿಡಿಕಾರಿದರು.

English summary
Jaya Karnataka Janapara Vedike actists urge to arrest who plan to kill film actress Anushka Shetty brother B. Gunaranjan shetty. On Thursday oraganization meet Ramanagar DC and apeal to provide security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X