ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದಲ್ಲಿ ಕೊರೊನಾ ಪ್ರತಿಕೃತಿ ದಹಿಸಿ ಜನತಾ ಕರ್ಫ್ಯೂ ಆಚರಣೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 22: ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಕೊರೊನಾ ಮಾರಿ ಪ್ರತಿಕೃತಿಯನ್ನು ದಹಿಸಿ "ಕೊರೊನಾ ಭಾರತ ಬಿಟ್ಟು ತೊಲಗು' ಎಂದು ಘೋಷಣೆ ಕೂಗುವ ಮೂಲಕ ಪ್ರಧಾನಿ ಮೋದಿಯವರ ಕರೆಗೆ ರಾಮನಗರ ವಿದ್ಯಾರ್ಥಿಗಳು ಸ್ಪಂದಿಸಿದರು.

ಪಟ್ಟಣದ ತಿರುಮಲೆ ಹೊಸಬಡಾವಣೆಯ ಪುಟ್ಟ ವಿದ್ಯಾರ್ಥಿಗಳು ವೈದ್ಯರಿಗೆ, ದಾದಿಯರಿಗೆ, ಪೌರಕಾರ್ಮಿಕರಿಗೆ, ಯೋಧರಿಗೆ, ಮಾಧ್ಯಮದವರಿಗೆ ಹಾಗೂ ಸಲಾಂ ಮೋದಿ ಬಾಯ್ ಎಂಬ ಕೃತಜ್ಞತೆ ಸಲ್ಲಿಸುವ ನಾಮಫಲಕಗಳನ್ನು ಹಿಡಿದು, ಚಪ್ಪಾಳೆ ತಟ್ಟುವುದರ ಮೂಲಕ ವಿಶೇಷ ವಂದನೆಗಳನ್ನು ತಿಳಿಸಿದರು.

Janta Curfew Live Updates: ಜನತಾ ಕರ್ಫ್ಯೂ: ಜಾಗಟೆ, ಗಂಟೆ, ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ ಭಾರತJanta Curfew Live Updates: ಜನತಾ ಕರ್ಫ್ಯೂ: ಜಾಗಟೆ, ಗಂಟೆ, ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ ಭಾರತ

ಕೊರೋನಾ ಶಂಕಿತ ಆಸ್ಪತ್ರೆಗೆ:

ಮಡಿಕೇರಿಯ ಓರ್ವ ಕೊರೊನಾ ಪಾಸಿಟಿವ್ ವ್ಯಕ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಓರ್ವ ವ್ಯಕ್ತಿಯನ್ನು ರಾಮನಗರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

Janata Curfew Response In Ramanagara

ಮಡಿಕೇರಿ ಕೊರೋನಾ ಪೀಡಿತ ವ್ಯಕ್ತಿ ಮಂಡ್ಯ ಜಿಲ್ಲೆ ಮದ್ದೂರಿನ ಬಸ್ ನಿಲ್ದಾಣದ ಹೋಟೆಲ್ ನಲ್ಲಿ ತಿಂಡಿ ಸೇವಿಸಿದ್ದ, ಇದೇ ಸಮಯದಲ್ಲಿ ಚನ್ನಪಟ್ಟಣ ಓರ್ವ ಬಸ್ ನಿಂದ ಇಳಿದು ತಿಂಡಿ ತಿಂದಿದ್ದನು.

ಆತನಿಗೆ ನಿನ್ನೆಯಿಂದ ಸ್ವಲ್ಪ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ, ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ರಾಮನಗರ ಜಿಲ್ಲಾಸ್ಪತ್ರೆಗೆ ಆತನನ್ನು ದಾಖಲು ಮಾಡಿದ್ದಾರೆ.

Janata Curfew Response In Ramanagara

ಶಂಕಿತನ ಗಂಟಲಿನ ಕಫ ಮಾದರಿಯನ್ನು ಬೆಂಗಳೂರಿನ ವಿಕ್ಟೋರಿಯಾಗೆ ರವಾನೆ ಮಾಡಿದ್ದು, ಶಂಕಿತನನ್ನು 14 ದಿನಗಳ ಕಾಲ ಐಸೋಲೇಷನ್ ವಾರ್ಡ್ ನಲ್ಲಿ ಇರಿಸಲು ನಿರ್ಧಾರ ಮಾಡಿದ್ದು, ಅಲ್ಲದೇ ಆತನ ತಂದೆ, ತಾಯಿಯನ್ನು ಮನೆಯಿಂದ ಹೊರಬಾರದಂತೆ ವೈದ್ಯರು ಸೂಚನೆ ನೀಡಿದ್ದಾರೆ‌.

English summary
Ramanagar students responded to PM Modi's call Janata Curfew in magadi, Ramanagara taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X