ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ: ಅಶ್ವತ್ಥ ನಾರಾಯಣ ಘೋಷಣೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂ. 23: ನಾಡಪ್ರಭು ಕೆಂಪೇಗೌಡರ ಗೌರವಾರ್ಥ ಈ ವರ್ಷದಿಂದ ಮೂವರು ಸಾಧಕರಿಗೆ ತಲಾ 5 ಲಕ್ಷ ರೂ. ನಗದು ಸಹಿತವಾದ ಅಂತಾರಾಷ್ಟ್ರೀಯ ಪ್ರಶಸ್ತಿ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಘೋಷಣೆ ಮಾಡಿದರು.

ಅವರು ಇಂದು ಜಿಲ್ಲೆಯ ಮಾಗಡಿ ಪಟ್ಟಣದ ಕೋಟೆ ಅವರಣದಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಏರ್ಪಡಿಸಿದ್ದ ಕೆಂಪೇಗೌಡರ 513ನೇ ಜಯಂತಿಯಲ್ಲಿ ಮಾತನಾಡಿದ ಅವರು, 'ಕೆಂಪೇಗೌಡರು ಕಟ್ಟಿಸಿರುವ ಇಲ್ಲಿನ ಐತಿಹಾಸಿಕ ಕೋಟೆಯನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಿ, ಸಂರಕ್ಷಿಸಲಾಗುವುದು' ಎಂದು ಭರವಸೆ ನೀಡಿದರು.

ಅಗ್ನಿಪಥ್ ಮೂಲಕ ಸೈನಿಕರನ್ನು ಅರೆಕಾಲಿಕ ಉದ್ಯೋಗಿಗಳನ್ನಾಗಿ ಹೊರಟ ಬಿಜೆಪಿ: ರಾಮಲಿಂಗಾರೆಡ್ಡಿಅಗ್ನಿಪಥ್ ಮೂಲಕ ಸೈನಿಕರನ್ನು ಅರೆಕಾಲಿಕ ಉದ್ಯೋಗಿಗಳನ್ನಾಗಿ ಹೊರಟ ಬಿಜೆಪಿ: ರಾಮಲಿಂಗಾರೆಡ್ಡಿ

ವಿಧಾನಸೌಧದಲ್ಲಿ 27ರಂದು ಕೆಂಪೇಗೌಡರ ಜಯಂತಿ ಆಚರಣೆ

ಕೆಂಪೇಗೌಡರ ವೀರಸಮಾಧಿ ಇರುವ ತಾಲ್ಲೂಕಿನ ಕೆಂಪಾಪುರ ಗ್ರಾಮದಲ್ಲಿ ಪರಂಪರೆಯ ಸಂರಕ್ಷಣೆಯನ್ನು ಸರಕಾರ ಮಾಡುತ್ತಿದೆ. ಜತೆಗೆ, ನಾಡಪ್ರಭು ಕೆಂಪೇಗೌಡರ ಕುರುಹುಗಳಿರುವ ಸಾವನದುರ್ಗ, ಹುಲಿಯೂರುದುರ್ಗ ಮುಂತಾದ ಸ್ಥಳಗಳನ್ನು ಕೂಡ ಆಕರ್ಷಕವಾಗಿ ಅಭಿವೃದ್ಧಿ ಮಾಡಲಾಗುವುದು. ಜತೆಗೆ, ಇದೇ 27ರಂದು ಕೆಂಪೇಗೌಡರ ಜಯಂತಿಯನ್ನು ವಿಧಾನಸೌಧದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಿಳಿಸಿದರು.

International Award for achievers in the name of Kempe Gowda

108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಸ್ಥಾಪನೆ

ಕೆಂಪೇಗೌಡರಿಗೆ ಸೂಕ್ತ ಗೌರವ ನೀಡುವ ಉದ್ದೇಶದಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಬೃಹತ್ ಪ್ರತಿಮೆ ಸ್ಥಾಪಿಸಲಾಗುತ್ತಿದೆ ಎಂದು ಅವರು ನುಡಿದರು. ಅಲ್ಲದೇ ರಾಮನಗರ ಜಿಲ್ಲೆಯಲ್ಲಿ ಸಾವಿರಾರು ಕೆರೆಗಳನ್ನು ಪುನಶ್ಚೇತನ ಗೊಳಿಸುವ ಮತ್ತು ಅವುಗಳಿಗೆ ನೀರು ತುಂಬುವ ಕೆಲಸ ಮಾಡಲಾಗುವುದು. ಈ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಜೀವ ತುಂಬಲಾಗುವುದು ಎಂದು ಅವರು ಹೇಳಿದರು. ಕೆಂಪೇಗೌಡರ ದೂರದೃಷ್ಟಿ ಯಿಂದಾಗಿ ಬೆಂಗಳೂರು ನಗರವು ಇಂದು ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದೆ. ಇಂತಹ ಕೀರ್ತಿ ಭಾರತದ ಬೇರಾವ ನಗರಗಳಿಗೂ ಇಲ್ಲ ಎಂದು ಅಶ್ವತ್ಥ ನಾರಾಯಣ ಇದೇ ವೇಳೆ ಸ್ಮರಿಸಿದರು.

ಸಬರ್ಬನ್ ರೈಲ್ವೆ ಯೋಜನೆ ಮೋದಿಯಿಂದ ಮೂರು ವರ್ಷ ವಿಳಂಬ: ಎಚ್‌.ಡಿ. ಕುಮಾರಸ್ವಾಮಿಸಬರ್ಬನ್ ರೈಲ್ವೆ ಯೋಜನೆ ಮೋದಿಯಿಂದ ಮೂರು ವರ್ಷ ವಿಳಂಬ: ಎಚ್‌.ಡಿ. ಕುಮಾರಸ್ವಾಮಿ

Recommended Video

ಪ್ರವಾಹದಲ್ಲಿ ಎಳೇಕಂದಮ್ಮನನ್ನು ತಲೆ‌ ಮೇಲೆ‌ ಹೊತ್ತೊಯ್ದ ತಂದೆ ವಿಡಿಯೋ ಸಖತ್ ಎಮೋಷನಲ್ | *Viral | OneIndia Kannada

English summary
District In-Charge Minister for Ramanagara Dr.C.N.Ashwath Narayan said, on Thursday, that an international Award will be presented to three achievers every year starting this year in honour of Kempe Gowda. Awardees will be rewarded with a cash of Rs 5 Lakh each.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X