ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಚುನಾವಣೆ ಫಲಿತಾಂಶ ನಂತರದ ಬಿಜೆಪಿ ಭವಿಷ್ಯ ನುಡಿದ ಡಿ.ಕೆ ಸುರೇಶ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ನವೆಂಬರ್ 4: ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪ ಚುನಾವಣೆಯ ಫಲಿತಾಂಶ ಬಂದ ನಂತರ ಬಿಜೆಪಿಯಲ್ಲಿ ಒಳ ಜಗಳ ಹೆಚ್ಚಾಗಿ ಭಿನ್ನಮತ ಸ್ಫೋಟವಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಭವಿಷ್ಯ ನುಡಿದಿದ್ದಾರೆ.

ಬುಧವಾರ ರಾಮನಗರ ಜಿಲ್ಲೆಯ ಬಿಡದಿ ಬಳಿಯ ಐಕಾನ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಭೆಯ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಉಪ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಯಾವುದೇ ಪರಿಣಾಮವಿಲ್ಲ. ಆದರೆ ಬಿಜೆಪಿ ಗೆಲ್ಲಲಿ, ಸೋಲಲಿ, ಬಿಜೆಪಿಯಲ್ಲಿ ಆಂತರಿಕ ಜಗಳ ಹೆಚ್ಚಾಗುವುದು ಖಂಡಿತ ಎಂದರು.

ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಹೊಸ ಸವಾಲು ಹಾಕಿದ ಸಂಸದ ಡಿ.ಕೆ. ಸುರೇಶ್! ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಹೊಸ ಸವಾಲು ಹಾಕಿದ ಸಂಸದ ಡಿ.ಕೆ. ಸುರೇಶ್!

 ಮುನಿರತ್ನ ವಿರುದ್ಧ ಡಿಕೆ ಸುರೇಶ್ ವ್ಯಂಗ್ಯ

ಮುನಿರತ್ನ ವಿರುದ್ಧ ಡಿಕೆ ಸುರೇಶ್ ವ್ಯಂಗ್ಯ

ಚುನಾವಣೆಯಲ್ಲಿ ಗೆದ್ದು ಪವರ್ ಹುದ್ದೆ ಪಡೆಯುತ್ತೇನೆ ಎಂಬ ಮುನಿರತ್ನ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ. ಸುರೇಶ್, ಮುನಿರತ್ನ ಪವರ್ ಮಿನಿಸ್ಟರ್ ಆಗಲಿ, ಹೋಂ ಆಗಲಿ, ಇಲ್ಲ ಸಿಎಂ ಆಗಲಿ, ನನಗೇನು? ಅವರು ಗೆದ್ಮೇಲೆ ಅದು. ನನ್ನ ಕ್ಷೇತ್ರದವರು ಸಿಎಂ ಆದರೆ ನನಗೆ ಸಂತೋಷ. ನಾನೊಬ್ಬ ಆಶಾವಾದಿ. ಜನರ ತೀರ್ಪು ನಮ್ಮ ಪರವಾಗಿ ಬರಲಿದೆ ಅನ್ನೋ ವಿಶ್ವಾಸವಿದೆ ಎಂದು ಡಿ.ಕೆ.ಸುರೇಶ್ ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ವ್ಯಂಗ್ಯವಾಡಿದರು.

"ಯಡಿಯೂರಪ್ಪನವರೇ ಸಿಎಂ ಆಗಿರಲಿ"

ಸಿಎಂ ಬದಲಾವಣೆ ಆಗ್ತಾರೆ ಎಂದು ಬಿಜೆಪಿಯವರೇ ಹೇಳ್ತಿದ್ದಾರೆ. ಆದರೆ ನಮಗೆ ಯಡಿಯೂರಪ್ಪನವರೇ ಸಿಎಂ ಆಗಿರಬೇಕು ಎಂದು ಆಸೆ ಎಂದರು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಗೂ ಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕನಕಪುರ ಕ್ಷೇತ್ರಕ್ಕೆ ಈ ಸರ್ಕಾರದಿಂದ ಒಂದು ಬಿಡಿಗಾಸೂ ಸಿಕ್ಕಿಲ್ಲ. ಈ ಸರ್ಕಾರ ಅಭಿವೃದ್ಧಿ ಪರವಾಗಿಲ್ಲ ಎಂದು ಕಿಡಿಕಾರಿದರು.

ಡಿ.ಕೆ. ಸಹೋದರರನ್ನು ರಾಜರಾಜೇಶ್ವರಿ ನಗರದಿಂದ ಹೊರ ಹಾಕಿ!ಡಿ.ಕೆ. ಸಹೋದರರನ್ನು ರಾಜರಾಜೇಶ್ವರಿ ನಗರದಿಂದ ಹೊರ ಹಾಕಿ!

"ಸರ್ಕಾರ ಲೂಟಿ ಮಾಡೋಕೆ ಮಾತ್ರ ಇದೆ"

ಈ ರಾಜ್ಯ ಸರ್ಕಾರ ಲೂಟಿ ಮಾಡಲು ಮಾತ್ರ ಇದೆ. ಭ್ರಷ್ಟ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಒಪ್ಪಿಕೊಂಡಿದ್ದಾರೆ ‌ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು. ಲೂಟಿ ಮಾಡುವ ಸರ್ಕಾರ ಎಷ್ಟು ದಿನ ಇರಲಿದೆ ಎಂದೂ ಹೇಳಿದರು.

"ಫಲಿತಾಂಶದ ನಂತರ ಭಿನ್ನಾಭಿಪ್ರಾಯ ಸ್ಫೋಟ"

ಶಿರಾ ಹಾಗೂ ಆರ್ ಆರ್ ನಗರ ಉಪ ಚುನಾವಣೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಯಾವುದೇ ಪರಿಣಾಮವಿಲ್ಲ. ಆದರೆ ಬಿಜೆಪಿ ಗೆಲ್ಲಲಿ, ಸೋಲಲಿ, ಬಿಜೆಪಿಯಲ್ಲಿ ಆಂತರಿಕ ಜಗಳ ಉಂಟಾಗುವುದು ಖಚಿತ. ಫಲಿತಾಂಶದ ನಂತರ ಜಗಳ ಸ್ಫೋಟಗೊಳ್ಳುತ್ತದೆ ಎಂದು ಹೇಳಿದರು.

Recommended Video

Hindu ಭಾವನೆಗಳನ್ನು ಘಾಸಿಗೊಳಿಸಿದ್ರಾ Amithabh bachan | KBC | Oneindia Kannada

English summary
Internal Quarrel in bjp will burst after the results of Sira and Rajarajeshwari Nagar by-elections came out, predicts DK Suresh,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X