ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಲೈವ್ ಮಾನಿಟರಿಂಗ್: ರಾಜ್ಯದಲ್ಲೇ ಮೊದಲು

By Nayana
|
Google Oneindia Kannada News

ರಾಮನಗರ, ಆಗಸ್ಟ್ 27: ರಾಜ್ಯದಲ್ಲೇ ಮೊದಲ ಇಂಡಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ ರಾಮನಗರ ಜಿಲ್ಲೆಯ ಬ್ಯಾಡರಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆರಂಭಗೊಳ್ಳಲಿದೆ.

ಈ ಪ್ರದೇಶದಲ್ಲಿ ರಸ್ತೆಗಳು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.ಜತೆಗೆ ಲೈವ್ ಮಾನಿಟರಿಂಗ್ ವ್ಯವಸ್ಥೆ ಮಾಡಲಾಗಿದೆ. ಸೇಫ್ ಸಿಟಿ ಯೋಜನೆಯಡಿ ಇದನ್ನು ನಿರ್ಮಿಸಲಾಗಿದೆ.ಈ ಠಾಣೆಗೆ ಕಮಿಷನರ್ ಕಚೇರಿಯಲ್ಲಿರುವ ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಮಕ್ಕಳಿಗೆ ಓದಿನ ಕಿಚ್ಚು ಹಚ್ಚುತ್ತಿರುವ ಪೊಲೀಸಮ್ಮನ ಕಥೆ ಓದಿ! ಮಕ್ಕಳಿಗೆ ಓದಿನ ಕಿಚ್ಚು ಹಚ್ಚುತ್ತಿರುವ ಪೊಲೀಸಮ್ಮನ ಕಥೆ ಓದಿ!

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸ್ವಕ್ಷೇತ್ರ ಕುಪ್ಪಂನಲ್ಲಿ ಮಾತ್ರ ಜಾರಿಯಲ್ಲಿರುವ ಈ ಯೋಜನೆ ಇದೀಗ ಕರ್ನಾಟಕದಲ್ಲೂ ಆರಂಭವಾಗಿದೆ. ಶೀಘ್ರದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಉದ್ಘಾಟನೆ ಮಾಡಲಿದ್ದಾರೆ. ಬ್ಯಾಂಕ್‌ ಗಳ ಹೊರ ಆವರಣ, ಮಹಿಳೆಯರ ಪಿಜಿಗಳು , ಕಾಲೇಜು ಆವರಣದ ಚಲನವಲನಗಳ ಮೇಲೆ ಕ್ಯಾಮರಾಗಳು ಕಣ್ಣಿಡಲಿವೆ.

Integrated command and control center has been set up at Byadarahalli police station

ಡ್ರಗ್ಸ್ ಸೇವನೆ, ಮಾರಾಟ, ಮಹಿಳೆಯರ ಸುರಕ್ಷತೆ, ಸರಗಳ್ಳತನದಂತಹ ಕೃತ್ಯಗಳಿಗೆ ಕಡಿವಾಣ ಬೀಳಲಿದೆ. 300 ಮೀಟರ್‌ವರೆಗೆ ಜೂಮ್ ಮಾಡಿ ನೋಡುವ ಈ ಕ್ಯಾಮರಾಗಳು ರಾತ್ರಿಯ ಮಬ್ಬುಗತ್ತಲಿನಲ್ಲೂ, ಎಲ್ಲವನ್ನೂ ಚಿತ್ರೀಕರಿಸಲಿದೆ. ಪೊಲೀಸ್‌ ಠಾಣೆ ವ್ಯಾಪ್ತಿಯ 47ಜಂಕ್ಷನ್ ನಲ್ಲಿ 195 ಹೈ ರೆಸಲ್ಯೂಷನ್ ಆಟೋಮೆಟಿಕ್ ನಂಬರ್‌ ಪ್ಲೇಟ್ ರೆಕಗ್ನಿಷನ್ ಕ್ಯಾಮರಾಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. 32 ಜಂಕ್ಷನ್‌ಗಳಲ್ಲಿ ಪೂರ್ಣಗೊಂಡಿದೆ.

English summary
Integrated command and control center has been set up at Byadarahalli police station in Ramanagaram district. It was said that Kuppam of Andhra Pradesh had the same facility where CM Chandrababu Naidu represents
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X