ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೈಗಾರಿಕಾ ಕ್ಲಸ್ಟರ್‌ ನಿರ್ಮಾಣದಿಂದ ಉದ್ಯೋಗ ಸೃಷ್ಟಿ; ಜಗದೀಶ್ ಶೆಟ್ಟರ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 20: " ರಾಮನಗರ ಕೈಗಾರಿಕಾ ಕ್ಲಸ್ಟರ್‌ಗಳಿಂದ ಹೆಚ್ಚಿನ ಕೈಗಾರಿಕೆಗಳು ರಚನೆಯಾಗಿ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗ ದೊರೆಯುತ್ತದೆ. ಇದರಿಂದ ಜಿಲ್ಲೆಯು ಸಹ ಅಭಿವೃದ್ಧಿಯಾಗಲಿದೆ" ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಬುಧವಾರ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪ್ರಿಂಟ್ ಟೆಕ್ ಪಾರ್ಕ್ ಕ್ಲಸ್ಟರ್ ಮತ್ತು ಕಾಮನ್ ಫೆಸಿಲಿಟಿ ಸೆಂಟರ್‌ನ್ನು ಸಚಿವರು ಉದ್ಘಾಟಿಸಿರು. "ಕೊಪ್ಪಳದಲ್ಲಿ ಟಾಯ್ಸ್ ಕ್ಲಸ್ಟರ್‌ ಸ್ಥಾಪನೆ ಪ್ರಾರಂಭವಾಗಿದ್ದು, 400 ಎಕರೆ ಪ್ರದೇಶದಲ್ಲಿ ಯಸಸ್ ಹೂಡಿಕೆದಾರರು 5000 ಕೋಟಿ ಹೂಡಿಕೆ ಮಾಡಲಿದ್ದಾರೆ" ಎಂದರು.

ಅವಳಿ ನಗರವಾಗಿ ಚನ್ನಪಟ್ಟಣ-ರಾಮನಗರ ಅಭಿವೃದ್ಧಿ; ಎಚ್‌ಡಿಕೆ ಅವಳಿ ನಗರವಾಗಿ ಚನ್ನಪಟ್ಟಣ-ರಾಮನಗರ ಅಭಿವೃದ್ಧಿ; ಎಚ್‌ಡಿಕೆ

"ಟಾಯ್ಸ್ ಕ್ಲಸ್ಟರ್‌ನಿಂದ 20 ಸಾವಿರ ಉದ್ಯೋಗ ಸೃಷ್ಠಿಯಾಗಲಿದೆ. ಇದರಿಂದ ಕೆಲಸಕ್ಕಾಗಿ ಬೇರೆ ಜಿಲ್ಲೆ ಹಾಗೂ ರಾಜ್ಯಕ್ಕೆ ತೆರಳುತ್ತಿದ್ದ ಜನರು ಸ್ಥಳೀಯವಾಗಿ ಉದ್ಯೋಗ ಕಂಡುಕೊಳ್ಳುವಂತಾಗಿದೆ. ಹುಬ್ಬಳಿಯಲ್ಲಿ ಎಫ್.ಎಂ.ಸಿ.ಜಿ ಕ್ಲಸ್ಟರ್ ಪ್ರಾರಂಭ ಮಾಡಲು ಉದ್ದೇಶಿಸಲಾಗಿದೆ" ಎಂದು ವಿವರಿಸಿದರು.

'ಕೇವಲ ಒಂದು ಅರ್ಜಿಯನ್ನು ಸಲ್ಲಿಸಿ ಕೈಗಾರಿಕೆ ಆರಂಭಿಸಿ''ಕೇವಲ ಒಂದು ಅರ್ಜಿಯನ್ನು ಸಲ್ಲಿಸಿ ಕೈಗಾರಿಕೆ ಆರಂಭಿಸಿ'

Industrial Clusters Will Help To Create Jobs Jagadish Shettar

ರಾಜ್ಯಕ್ಕೆ ಮೊದಲ ಕ್ಲಸ್ಟರ್: "ರಾಜ್ಯದ ವಿವಿಧ ಭಾಗದಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳು ಪ್ರಾರಂಭವಾಗುತ್ತಿದ್ದು, ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿ ಮೊದಲ ಪ್ರಿಂಟ್‌ಟೆಕ್ ಕ್ಲಸ್ಟರ್ ಪ್ರಾರಂಭವಾಗಿದೆ. ಆಧುನಿಕ ಪ್ರಿಂಟಿಂಗ್ ಯಂತ್ರಗಳನ್ನು ಬಳಸಿ ಇಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡಲು ಕೈಗಾರಿಕೆಗಳು ಉದ್ದೇಶಿಸಿವೆ" ಎಂದು ಹೇಳಿದರು.

ಕೈಗಾರಿಕೆ ಆಸ್ತಿಗಳ ಏಕರೂಪ ತೆರಿಗೆ ಸಂಗ್ರಹ: ಸಚಿವ ಶೆಟ್ಟರ್‌ಕೈಗಾರಿಕೆ ಆಸ್ತಿಗಳ ಏಕರೂಪ ತೆರಿಗೆ ಸಂಗ್ರಹ: ಸಚಿವ ಶೆಟ್ಟರ್‌

"ಪ್ರಿಂಟಿಂಗ್ ಎಂದ ಕೂಡಲೇ ಹಿಂದೆ ತಮಿಳುನಾಡು ನೆನಪಾಗುತ್ತಿತ್ತು ಇನ್ನೂ ಮುಂದೆ ಪ್ರಿಂಟಿಂಗ್ ಎಂದ ಕೂಡಲೇ ಇಡೀ ರಾಜ್ಯಕ್ಕೆ ಹಾರೋಹಳ್ಳಿ ನೆನಪಿಗೆ ಬರುವ ರೀತಿ ಕ್ಲಸ್ಟರ್ ಬೆಳೆಯಬೇಕು" ಎಂದು ಸಚಿವರು ಹಾರೈಸಿದರು.

ಕೈಗಾರಿಕೆಗಳು ಪ್ರಾರಂಭ: "ಯಾದಗಿರಿ ಜಿಲ್ಲೆಯಲ್ಲಿ 4000 ಹೆಕ್ಟೇರ್ ಭೂಸ್ವಾಧೀನ ಮಾಡಿ ಕೈಗಾರಿಕೆಗಳ ಸ್ಥಾಪನೆಗೆ ಬೇಕಾಗುವ ಮೂಲಭೂತ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗಿತ್ತು. ಹೂಡಿಕೆದಾರರೊಂದಿಗೆ ಸಭೆ ನಡೆದ ಸಂದರ್ಭದಲ್ಲಿ ಹೈದರಾಬಾದ್‌ಗೆ ಹತ್ತಿರವಾದ ಯಾದಗಿರಿ, ರಾಯಚೂರಿನಲ್ಲಿ ಫಾರ್ಮಸಿಟಿಕಲ್ ಕಂಪನಿಗಳನ್ನು ಪ್ರಾರಂಭಿಸುವಂತೆ ಚರ್ಚಿಸಲಾಯಿತು. ಕೋವಿಡ್‌ನಂತಹ ಸಂದರ್ಭದಲ್ಲೂ ಅಂದಾಜು 70 ಫಾರ್ಮಸಿಟಿಕಲ್ ಕಂಪನಿಗಳು ಇಲ್ಲಿ ಪ್ರಾರಂಭವಾಗಿದೆ" ಎಂದು ಸಚಿವರು ಮಾಹಿತಿ ನೀಡಿದರು.

Recommended Video

ಬಿಎಂಟಿಸಿ ಬಸ್ ಅಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು!! | Oneindia Kannada

"ಬೆಂಗಳೂರಿನಲ್ಲಿ ಹೆಚ್ಚಿನ ಕೈಗಾರಿಕೆಗಳಿದ್ದು, ನಗರ ಅಭಿವೃದ್ಧಿಗೊಂಡಿದೆ. 2 ಟೈಯರ್ ಮತ್ತು 3 ಟೈಯರ್ ನಗರಗಳಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಹೊಸ ಕೈಗಾರಿಕಾ ನೀತಿಯಲ್ಲಿ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬೇರೆ ನಗರಗಳಲ್ಲೂ ಕೈಗಾರಿಕೆಗಳು ಪ್ರಾರಂಭವಾಗುತ್ತಿದೆ" ಎಂದರು.

English summary
People will get jobs in home town and district will develop by the industrial clusters said minister of Large and Medium Scale Industries Jagadish Shettar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X